ಮತ್ತೆ ಡಿಮ್ಯಾಂಡ್ ಹೆಚ್ಚಿಸಿಕೊಂಡ ವೈರ್ಡ್​ ಇಯರ್​ ಫೋನ್; ಸರ, ಕಿವಿಯೋಲೆ, ಏರ್​ ಬ್ಯಾಂಡ್​ ಆಗಿ ಬಳಸುತ್ತಿರುವ Gen Z Kids

Wired Earphones Fashion
Wired Earphones Fashion
Published on

ಪ್ರಮುಖ ಮುಖ್ಯಾಂಶಗಳು

  • ಹಾಡು ಕೇಳುವ ಬದಲಿಗೆ ಆಭರಣದಂತೆ ವೈರ್ಡ್​ ಇಯರ್​ ಫೋನ್​ಗಳ ಬಳಕೆ
  • ಐ ಪ್ಯಾಡ್, ವೈರ್​ಲೆಸ್ ಹೆಡ್​ಫೋನ್​ ನಂತರ ಮೂಲೆ ಗುಂಪಾಗಿದ್ದ ವೈರ್ಡ್​ ಇಯರ್​ ಫೋನ್
  • ಸರ, ತಲೆಯ ಏರ್​ ಪ್ಯಾಂಡ್​, ಕತ್ತಿಗೆ ಸರವಾಗಿ ಬಳಕೆ ಮಾಡುತ್ತಿರುವ ಝೆನ್​-ಜಿಗಳು
Wired Earphones Fashion: ಕಿವಿಗೆ ಹಾಕುವ ಹೊಸ ಸಾಧನಗಳಾದ ವೈರ್​ಲೆಸ್​ ಇಯರ್​ ಪಾಡ್​ಗಳು, ಐಪಾಡ್ ಹೆಡ್​ ಫೋನ್ ಬಂದ ನಂತರ ಈ ಹಿಂದೆ ಬಳಸಲಾಗುತ್ತಿದ್ದ ವೈರ್ಡ್​ ಇಯರ್​ ಫೋನ್​ ಅನ್ನು ಮೂಲೆಗುಂಪು ಮಾಡಲಾಗಿದೆ. ಇದರ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ, ಈ ಕಾಲಮಾನ ಹೇಗೆಂದರೆ ಎಲ್ಲವೂ ಟ್ರೆಂಡ್​ ಮಾಡುವ ಯುಗ. ಉದ್ದುದ್ದ ತೋಳಿನ ಬ್ಲೌಸ್, ದೊಡ್ಡ ಬಿಂದಿ, ಎರಡು ಜಡೆ ಹೀಗೆ ಯಾವುದು ಬೇಡ ಎಂದು ಹೊಸ ಫ್ಯಾಷನ್​ಗೆ ಹೊರಳಿಕೊಂಡಿದ್ದ ಜನರು  ಈಗ ಮತ್ತೆ ಹಳೆಯದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.  
ಅಂತೆಯೇ ಈಗ ಸಿಕ್ಕಿರುವ ಹೊಸ ವಿಚಾರ ಎಂದರೆ,  ಕಸಕ್ಕೆ ಬಿಸಾಡಲಾಗಿದ್ದ, ಬಾಗಿನಲ್ಲಿ ನೀರು ಇಡುವ ಸ್ಥಳದಲ್ಲಿ ಅನಾಥವಾಗಿ ಬಿಸಾಡುತ್ತಿದ್ದ ವೈರ್ಡ್​ ಇಯರ್​ ಫೋನ್​ಗೆ ಕಾಲ ಬಂದಿದೆ, ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಈ ಆಧುನಿಕ ಜಗತ್ತು  2026ರಲ್ಲಿ  ವೈರ್ಡ್​​ ಇಯರ್​ ಫೋನ್​ ಅನ್ನು ಹಾಡು, ಸಿನಿಮಾ ನೋಡಲು ಮಾತ್ರ ಬಳಕೆ ಮಾಡುತ್ತಿಲ್ಲ. ಬದಲಾಗಿ ಕಿವಿಯ ಓಲೆ, ಕತ್ತಿನ ಸರ, ತಲೆಯ ರಬ್ಬರ್​ ಬ್ಯಾಂಡ್​ ಆಗಿ ಬಳಕೆ ಮಾಡಲಾಗುತ್ತಿದೆ. 

ಸರ, ಬ್ರೇಸ್​ಲೈಟ್ ಆಗಿ ಬಳಕೆ

ಈಗ ಝೆನ್​-ಜಿ ಯುವಕ-ಯುವತಿಯರಿಗೆ ಎಲ್ಲವೂ ಹೊಸತು, ಬಿಸಾಡುವ ಕವರ್, ಬ್ರಷ್​, ಪೈಪ್, ತೆಂಗಿನ ಚಿಪ್ಪು ಎಲ್ಲದರಲ್ಲಿಯೂ ಹೊಸತನವನ್ನು ಕಂಡುಕೊಳ್ಳುತ್ತಾರೆ.  ವೈರ್ಡ್​ ಇಯರ್​ ಪಾಡ್​ ಅನ್ನು ಜೆನ್​ಜಿಗಳು ಈಗ ತಮ್ಮ ಉಡುಪಿನ ಜೊತೆಗೆ ಬೆರೆಸಿಕೊಂಡಿದ್ದಾರೆ. ತಾವು ತಲೆಗೆ ಧರಿಸುವ ಏರ್​ ಬ್ಯಾಂಡ್​ ಬದಲಿಗೆ ಹೆಡ್​ ಫೋನ್ ಹಾಕಿಕೊಳ್ಳೋದು, ಸರ, ಬ್ಲೇಜರ್, ಬ್ರೇಸ್​ಲೈಟ್, ಓಲೆ​ ಆಗಿ ಬಳಕೆ ಮಾಡಲಾಗುತ್ತಿದೆ. ಇವು ಫೋನ್​ಗೆ ಕನೆಕ್ಟ್​ ಆಗಿರೋದಿಲ್ಲ ಬದಲಾಗಿ  ಸ್ಟೈಲ್​ಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. 

ಸ್ಮಾರ್ಟ್​ ಫೋನ್ ಉಗಮ ನೆನೆಸಿರುವ ವೈರ್ಡ್​ 

ಈ ಹಿಂದೆ ವೈರ್ಡ್​ ಇಯರ್​ ಫೋನ್ಳು ಸ್ಮಾರ್ಟ್​ ಫೋನ್​ ಬಳಕೆ ಮಾಡುತ್ತಿದ್ದ ಆರಂಭದ ದಿನಗಳನ್ನು ನೆನೆಸುತ್ತವೆ. ಬಸ್​ನಲ್ಲಿ ಹಾಡು ಕೇಳುತ್ತಾ, ರಸ್ತೆ ದಾಟುವಾಗ ಇಳಿಬಿಟ್ಟ ಹಗ್ಗವನ್ನು ಕೈಯಲ್ಲಿಡಿದು ನಡೆದು ಹೋಗುತ್ತ ಹಾಡು ಕೇಳುವುದು. ವೈರ್​ಗೆ ಸಮಸ್ಯೆಯಾಗದಂತೆ ನಿಧಾನವಾಗಿ ಸುತ್ತಿ ಗೋಡೆಗೆ ನೇತು ಹಾಕಿರುವುದು. ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡ ಗಂಟು ನಿಧಾನವಾಗಿ ಬಿಡಿಸೋ ಹೊತ್ತಿಗೆ ಸುಸ್ತಾಗುತ್ತಿತ್ತು. ಆದರೆ, ಈಗ ಹಾಗಿಲ್ಲ,  ವೈರ್​ನ ಜಂಜಾಟ, ಬಸ್​ಗಳಲ್ಲಿ ಅದನ್ನು ಎಳೆದಾಡುತ್ತಾರೆ ಎನ್ನುವ ಮುಂಜಾಗ್ರತೆವಹಿಸುವ ಸಮಸ್ಯೆ ಇಲ್ಲ. 
ಸಹಜವಾಗಿ ಈಗ ಎಲ್ಲರೂ ವೈರ್​ ಲೆಸ್​​ಗೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಆದರೆ, ನಿಜವಾಗಿಯೂ ಇರುವ ಗುಟ್ಟು ಏನು ಗೊತ್ತ ವೈರ್​ ಲೆಸ್​ ಇಯರ್​ ಫೋನ್​​  ಕಣ್ಣಿಗೆ ಕಾಣಿಸದಷ್ಟು ಸಣ್ಣದಾಗಿರುತ್ತವೆ. ವೈರ್ಡ್ ಇಯರ್‌ಫೋನ್‌ಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಎದ್ದು ಕಾಣುವಂತೆ ಮಾಡುತ್ತವೆ ಎಂಬುದು ಇಂದಿನ ಯುವಜನತೆಯ ಅಭಿಪ್ರಾಯವಾಗಿದೆ. 

ವೈರ್ಡ್​ ಇಯರ್​ ಫೋನ್​ ಮುನ್ನೆಲೆಗೆ ಬರ್ತಿರೋದ್ಯಾಕೆ? 

ವೈರ್‌ಲೆಸ್ ತಂತ್ರಜ್ಞಾನವು ನಮಗೆ ಹೆಚ್ಚು ಸಮಸ್ಯೆ ಕೊಡೋದಿಲ್ಲ ಹೌದು. ಆದರೆ, ವೈರ್ಡ್​ ಇಯರ್​ಫೋನ್​ ಅನ್ನು ಫೋನಿಗೆ ಹಾಕಿಕೊಂಡು ಕೇಳುವಾಗ ಅದೊಂದು ಸೌಂದರ್ಯವನ್ನು ನೀಡುತ್ತದೆ. ಗಂಟು ಬೀಳುವ ವೈರ್​ಗಳನ್ನು ಸರಿಪಡಿಸುವುದು ಇವೆಲ್ಲವೂ ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಒಂದು ಮನುಷ್ಯ ಸಹಜವಾದ ಸ್ಪರ್ಶವನ್ನು ನೀಡುತ್ತವೆ. ಇದು ಫ್ಯಾಷನ್​ ಮಾತ್ರವಲ್ಲ. ಓಡುತ್ತಿರುವ ಈ ಕಾಲಮಾನದಲ್ಲಿ ಸ್ವಲ್ಪ ಜೋಪಾನ ನಿಧಾನವಾಗಿರು ಅನ್ನೋದನ್ನ ಇವು ಪರೋಕ್ಷವಾಗಿ ಹೇಳುತ್ತದೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net