ಬಿಸಿಲಿಂದ ಕೂದಲು ಡ್ಯಾಮೇಜ್ ಆಗಿದೆಯೇ? ಮರಳಿ ಹೊಳಪು ಪಡೆಯಲು ಈ ಎಣ್ಣೆಗಳನ್ನೇ ಬಳಸಿ Summer Hair Care

Summer Hair Care (ಸಾಂದರ್ಭಿಕ ಚಿತ್ರ)
Summer Hair Care (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಶಾಖ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನಲೆ ಕೂದಲುಗಳು ಹಾಳಾಗುತ್ತವೆ
  • ಬೆವರು, ಶಾಖ ಮತ್ತು ಸೂರ್ಯನ ಬೆಳಕು ಆಗ್ಗಾಗ ಕೂದಲನ್ನು ತೊಳೆಯುವಂತೆ ಮಾಡುತ್ತದೆ
  • ಹೆಚ್ಚಾಗಿ ತಲೆಯನ್ನು ತೊಳೆಯುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ
Summer Hair Care: ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಶಾಖ ತೀವ್ರವಾಗಿ ಹೆಚ್ಚಾಗುತ್ತಿದೆ. ಇದರಿಂದ ಬೆವರು, ಶಾಖ ಮತ್ತು ಸೂರ್ಯನ ಬೆಳಕು ಆಗ್ಗಾಗ ಕೂದಲನ್ನು ತೊಳೆಯುವಂತೆ ಮಾಡುತ್ತದೆ. ಆದಾಗ್ಯೂ, ಹೆಚ್ಚಾಗಿ ತಲೆಯನ್ನು ತೊಳೆಯುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ.  ಇದು ಶುಷ್ಕತೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನೀವು ಸರಿಯಾದ ಎಣ್ಣೆಯನ್ನು ಬಳಸುವುದರಿಂದ ನೆತ್ತಿಯನ್ನು ಪೋಷಿಸಬಹುದು. ಜೊತೆಗೆ ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಅನೇಕ ನೈಸರ್ಗಿಕ ಎಣ್ಣೆಗಳಲ್ಲಿ ವಿಟಮಿನ್​ಗಳು, ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ. ಇದು ಕೂದಲಿನ ರಚನೆಯನ್ನು ಸುಧಾರಿಸುವುದರ ಜೊತೆಗೆ ನೆತ್ತಿಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. 

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ವ್ಯಾಪಕವಾಗಿ ಬಳಸಲಾಗುವ ಎಣ್ಣೆಗಳಲ್ಲಿ ಒಂದಾಗಿದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಇದರಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನ ಬುಡದೊಳಗೆ ಆಳವಾಗಿ ಇಳಿದು ಪ್ರೋಟೀನ್​ ಅನ್ನು ಹಚ್ಚಿಸುತ್ತದೆ. ಇದು ಬೇಸಿಗೆಯ ಶಾಖದಿಂದ ಉಂಟಾಗುವ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಾರಕ್ಕೆ ಒಂದು ಅಥವಾ 2 ಬಾರಿ ತಲೆಗೆ ಎಣ್ಣೆ ಹಾಕುವುದರಿಂದ ಕೂದಲಿನ ಪೋಷಣೆಯನ್ನು ಮಾಡಿಕೊಳ್ಳಬಹುದು.

ಈರುಳ್ಳಿ ಎಣ್ಣೆ 

ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಎಣ್ಣೆ ಹೆಚ್ಚು ಪ್ರಚಲಿತದಲ್ಲಿದೆ. ಇದರಲ್ಲಿರುವ ಸಲ್ಫರ್ ಅಂಶವು ಕೂದಲು ಉದುರುವಿಕೆಯನ್ನು ತಡೆದು ಹೊಸ ಕೂದಲನ್ನು ಹುಟ್ಟಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಎಣ್ಣೆಯನ್ನು ವಾರಕ್ಕೆ 2 ಬಾರಿ ತಲೆಗೆ ಹಚ್ಚುವುದರಿಂದ ಇದು ಕೂದಲಿನ ಆರೈಕೆಗೆ ಸಹಾಯ ಮಾಡುತ್ತದೆ. 

ನೆಲ್ಲಿಕಾಯಿ ಎಣ್ಣೆ 

ವಿಟಮಿನ್ ಸಿ ಅಂಶ ಹೆಚ್ಚಿರುವ ನೆಲ್ಲಿಕಾಯಿ ಎಣ್ಣೆಯು ಅಕಾಲಿಕ ನರೆತವನ್ನು ತಡೆಯುತ್ತದೆ. ಇದು ಕೂದಲಿನ ಬೇರುಗಳಿಗೆ ಬಲ ನೀಡುವುದಲ್ಲದೆ, ತಲೆಯಲ್ಲಿನ ತುರಿಕೆಯನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿ ಮೆಲನಿನ್ ಉತ್ಪಾದನೆಯನ್ನು ಸಮತೋಲನದಲ್ಲಿಟ್ಟು ಕೂದಲು ಬೇಗನೆ ಬೆಳ್ಳಗಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಪ್ರಚೋದನೆಯನ್ನು ನೀಡುತ್ತದೆ. ವಾರಕ್ಕೆ 2 ಬಾರಿ ತಲೆಗೆ ಹಚ್ಚಿ ನಿಧಾನವಾಗಿ ಮಸಾಜ್​ ಮಾಡುವುದರಿಂದ ಇದು ರೇಷ್ಮೆಯಂತೆ ಕೂದಲು ಹೊಳೆಯಲು ಸಹಾಯ ಮಾಡುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಕೂದಲನ್ನು ಆರೋಗ್ಯಕರವಾಗಿ ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಒಡೆಯುವಿಕೆಯನ್ನು ಕಡಿಮೆ ಮಾಡಿ, ಕೂದಲಿನ ಆರೈಕೆಯನ್ನು ಹೆಚ್ಚಿಸುತ್ತದೆ. ಈ ಎಣ್ಣೆಯಲ್ಲಿ ನೆತ್ತಿಯನ್ನು ನಿಧಾನವಾಗಿ ಮಸಾಜ್​ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗಿ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ಭೃಂಗರಾಜ ಎಣ್ಣೆ 

ಇದನ್ನು 'ಕೂದಲಿನ ರಾಜ' ಎಂದು ಕರೆಯಲಾಗುತ್ತದೆ. ಇದನ್ನು ನಿಯಮಿತವಾಗಿ ತಲೆಗೆ ಹಚ್ಚುವುದರಿಂದ ಕೂದಲಿನ ಕಿರುಚೀಲಗಳನ್ನು ಬಲಪಡಿಸಿ, ಒತ್ತಡದಿಂದ ಉದುರುತ್ತಿರುವ ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸಕ್ರಿಯ ಅಂಶಗಳು ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಲೆಯಲ್ಲಿ ಸೋಂಕು, ಕಿರಿಕಿರಿಯಾಗದಂತೆ ತಡೆಯುತ್ತದೆ (ಏಜೆನ್ಸೀಸ್​).
 ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net