ದುಬಾರಿ ಉತ್ಪನ್ನಗಳ ಬದಲಿಗೆ DIY ಸ್ಕ್ರಬ್ ! ನಟಿ ಪ್ರಜಕ್ತಾ ಕೋಲಿ ಗ್ಲೋ ರಹಸ್ಯ ಬಯಲು.. Prajakta Koli

 ನಟಿ Prajakta Koli
ನಟಿ Prajakta Koli
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಪ್ರಜಕ್ತ ಕೋಲಿ ಅವರ ಚರ್ಮವು ಕಾಂತಿಯುತವಾಗಿದೆ
  • ಹೊಳೆಯುವ ಚರ್ಮಕ್ಕೆ ಅಭಿಮಾನಿಗಳು ಫಿದಾ ಆಗಿರೋದಂತೂ ಗ್ಯಾರೆಂಟಿ!
  • ನಟಿಯ ಚರ್ಮದ ರಹಸ್ಯವು ಸರಳ ಮತ್ತು ಪರಿಣಾಮಕಾರಿ DIY ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್
  • ನಟಿ ಚರ್ಮವನ್ನು ಹೊಳೆಯುವಂತೆ ನೋಡಿಕೊಳ್ಳಲು ಅಡುಗೆ ಮನೆಯ ಪದಾರ್ಥಗಳನ್ನು ಬಳಸುತ್ತಾರಂತೆ!
Prajakta Koli: ನಟಿ ಪ್ರಜಕ್ತ ಕೋಲಿ ಅವರ ಚರ್ಮವು ಕಾಂತಿಯುತವಾಗಿದೆ ಎಂಬುದನ್ನು ಯಾರೇ ಆಗಲಿ ಅಲ್ಲಗೆಳೆಯಲು ಸಾಧ್ಯವಿಲ್ಲ. ಆಕೆಯ ಹೊಳೆಯುವ ಚರ್ಮಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಂತೆ ನಟಿಯ ಚರ್ಮದ ರಹಸ್ಯವು ಸರಳ ಮತ್ತು ಪರಿಣಾಮಕಾರಿ DIY ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ಆಗಿದೆ ಎಂದು ಅವರು ಬಹಿರಂಗ ಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿ ಹಲವಾರು ಚರ್ಮದ ಆರೈಕೆ ಉತ್ಪನ್ನಗಳು ಲಭ್ಯವಿದ್ದರೂ ಸಹ ನಟಿ ಚರ್ಮವನ್ನು ಹೊಳೆಯುವಂತೆ ನೋಡಿಕೊಳ್ಳಲು ಅಡುಗೆ ಮನೆಯ ಪದಾರ್ಥಗಳನ್ನು ಬಳಸುವುದಾಗಿ ತಿಳಿಸಿದ್ದಾರೆ.

ಪ್ರಜಕ್ತಾ ಕೋಲಿಯ ತ್ವಚೆಯ ರಹಸ್ಯ ಏನು?

ಸಂದರ್ಶನವೊಂದರಲ್ಲಿ ನಟಿ ಪ್ರಜಕ್ತಾ ಕೋಲಿ ತನ್ನ ಚರ್ಮವನ್ನು ಕಾಂತಿಯುತವಾಗಿಡಲು ಸಹಾಯ ಮಾಡುವ ಮನೆಮದ್ದುಗಳು ಹಾಗೂ ಅವುಗಳ ಪರಿಣಾಮಕಾರಿ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ನಟಿ ಮುಖಕ್ಕೆ ಹಚ್ಚುವುದಾದರೂ ಏನು? ಇಲ್ಲಿದೆ ನೋಡಿ ಉತ್ತರ..
ನನ್ನ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ನಾನು ಕಡಲೆ ಹಿಟ್ಟು, ಅರಿಶಿನ, ಮೊಸರು, ಜೇನುತುಪ್ಪವನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಇದು ಚರ್ಮಕ್ಕೆ ಮ್ಯಾಜಿಕ್​ನಂತೆ ಕೆಲಸ ಮಾಡುತ್ತದೆ. ನನ್ನ ಜೀವನದಲ್ಲಿ ನಾನು ಬಳಸಿದ ಅತ್ಯುತ್ತಮ ಸ್ಕ್ರಬ್​ ಇದಾಗಿದೆ ಎಂದು ಪ್ರಜಕ್ತಾ ಕೋಲಿ ತಿಳಿಸಿದ್ದಾರೆ.

ಈ ಮನೆಮದ್ದುಗಳು ಚರ್ಮಕ್ಕೆ ಯಾವ ರೀತಿಯಲ್ಲಿ ಪ್ರಯೋಜನ ನೀಡುತ್ತವೆ?

1. ಕಡಲೆ ಹಿಟ್ಟು

ಕಡಲೆ ಹಿಟ್ಟು ಪ್ರೊಟೀನ್​ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡಿದ್ದು, ಚರ್ಮದಲ್ಲಿರುವ ಎಣ್ಣೆಯನ್ನು ಹೀರಿಕೊಂಡು ಮೊಡವೆ-ಪಿಂಪಲ್ಸ್ ಕಡಿಮೆ ಮಾಡುತ್ತದೆ. ಇದು ಸತ್ತ ಚರ್ಮ ತೆಗೆದು ಮುಖ ಹೊಳಪು ನೀಡುತ್ತದೆ. ಚರ್ಮದಲ್ಲಾದ ಕಪ್ಪು ಕಲೆಗಳು ಗುರುತುಗಳನ್ನು ಕಡಿಮೆ ಮಾಡಿ ತೇವಾಂಶ ನೀಡಲು ಸಹಾಯ ಮಾಡುತ್ತದೆ.

2. ಅರಿಶಿನ

ಅರಿಶಿನವು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದ್ದು, ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಬ್ಯಾಕ್ಟೀರಿಯಾವನ್ನು ನಾಶ ಮಾಡಿ ಮೊಡವೆಗಳು ಮತ್ತು ಸೋಂಕನ್ನು ತಡೆಯುತ್ತದೆ. ಇದು ಚರ್ಮದಲ್ಲಾದ ಗಾಯ ಮತ್ತು ಇನ್ನಿತರ ತೊಂದರೆಗಳಿಂದ ಕಾಪಾಡುತ್ತದೆ. ಹಾಗೆಯೇ ಎಣ್ಣೆ ಉತ್ಪಾದನೆ ನಿಯಂತ್ರಿಸಿ ಮುಖ ಹೊಳೆಯುವಂತೆ ಮಾಡುತ್ತದೆ.

3. ಮೊಸರು

ಮೊಸರು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿ ಔಷಧವಾಗಿದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮವನ್ನು ಹೊರ ತೆಗೆದು ಹೊಳಪನ್ನು ತರುತ್ತದೆ. ಇದರ ಬಳಕೆಯು ಮೊಡವೆಯಿಂದ ರಕ್ಷಣೆ ನೀಡುತ್ತದೆ. ಹಾಗೆಯೇ ಆಳವಾದ ತೇವಾಂಶ ನೀಡಿ ಒಣ ಚರ್ಮವನ್ನು ತಡೆಯುತ್ತದೆ.

4. ಜೇನುತುಪ್ಪ

ಜೇನುತುಪ್ಪವು ಮಾಯಿಶ್ಚರೈಸಿಂಗ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಹೈಡ್ರೀಕರಿಸಿ ಸತ್ತ ಚರ್ಮ ತೆಗೆದು ಮುಖ ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಇದರಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಮೊಡವೆ, ಗಾಯವನ್ನು ಹೊರತೆಗೆದು ಗುಣಪಡಿಸುತ್ತದೆ.

ನೀವು ಇದನ್ನು ಪ್ರಯತ್ನಿಸಬೇಕೇ?

ಸ್ಕ್ರಬ್‌ನಲ್ಲಿ ಬಳಸಲಾದ ಎಲ್ಲಾ ಪದಾರ್ಥಗಳು ನಿಮ್ಮ ಚರ್ಮದ ಪೋಷಣೆಗೆ ಒಳ್ಳೆದಾಗುವುದರಿಂದ ಇದು ಚರ್ಮವನ್ನು ಶುದ್ಧೀಕರಿಸಿ, ಸಿಪ್ಪೆಸುಲಿಯುವಿಕೆ ಮತ್ತು ಹೊಳಪು ನೀಡಲು ಪರಿಣಾಮಕಾರಿ ಫೇಸ್ ಸ್ಕ್ರಬ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರ ಜೊತೆಗೆ ಅಕ್ಕಿ ಹಿಟ್ಟನ್ನು ಬಳಸುವುದು ಕೂಡಾ ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಇದು ನಯವಾದ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net