ನಟಿ ಜಾಸ್ಮಿನ್ ಭಾಸಿನ್ ಬ್ಯೂಟಿ ಸೀಕ್ರೆಟ್​ ಏನು..? ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ! Jasmine Bhasin

ನಟಿ ಜಾಸ್ಮಿನ್ ಭಾಸಿನ್
ನಟಿ ಜಾಸ್ಮಿನ್ ಭಾಸಿನ್
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಜಾಸ್ಮಿನ್ ಭಾಸಿನ್ ಅವರ ಹೊಳೆಯುವ ಚರ್ಮ ಅನೇಕ ಅಭಿಮಾನಿಗಳನ್ನು ಸಂಪಾದಿಸಿದೆ
  • ನಟಿ ಜಾಸ್ಮಿನ್ ಚರ್ಮದ ಟೋನ್​ ಅನ್ನು ಕಾಪಾಡಿಕೊಳ್ಳಲು ಸರಳವಾದ DIY ಹ್ಯಾಕ್ ಬಳಸುತ್ತಾರಂತೆ
  • ತನ್ನ ಚರ್ಮದ ಕಾಳಜಿಯನ್ನು ಪರಿಹರಿಸಲು ಅಡುಗೆಮನೆಗೆ ಅನುಕೂಲಕರವಾದ ಪದಾರ್ಥಗಳನ್ನು ಬಳಸುತ್ತಾರೆ
Jasmine Bhasin: ನಟಿ ಜಾಸ್ಮಿನ್ ಭಾಸಿನ್ ಅವರ ಹೊಳೆಯುವ ಚರ್ಮವು ಅವರ ಅಭಿಮಾನಿಗಳಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಆಕೆ ಅದ್ಭುತವಾದ ಮೈಬಣ್ಣವನ್ನು ಹೊಂದಿದ್ದರೂ, ತಮ್ಮ ಚರ್ಮದ ಟೋನ್​ ಅನ್ನು ಕಾಪಾಡಿಕೊಳ್ಳಲು ಸರಳವಾದ DIY ಹ್ಯಾಕ್ ಅನ್ನು ಬಳಸುವುದಾಗಿ ಹಂಚಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಚರ್ಮದ ಆರೈಕೆ ಉತ್ಪನ್ನಗಳ ಜೊತೆಗೆ, ಜಾಸ್ಮಿನ್ ತನ್ನ ಚರ್ಮದ ಕಾಳಜಿಯನ್ನು ಪರಿಹರಿಸಲು ಅಡುಗೆಮನೆಗೆ ಅನುಕೂಲಕರವಾದ ಪದಾರ್ಥಗಳನ್ನು ಬಳಕೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ ಚರ್ಮ ಕಾಂತಿಯುತವಾಗಿ ಕಾಣಲು ಉಪಯೋಗಿಸುವ ಮನೆಮದ್ದುಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.

ಜಾಮಿನ್ ಭಾಸಿನ್ ಅವರ ಬೀಟ್ರೂಟ್ ಫೇಸ್ ಪ್ಯಾಕ್

ಜಾಸ್ಮಿನ್ ಒಂದು ಬಟ್ಟಲಿನಲ್ಲಿ ಬೀಟ್ರೂಟ್​ ರಸವನ್ನು ತೆಗೆದುಕೊಳ್ಳುತ್ತಾಳೆ. ಅದಕ್ಕೆ ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಮೊಸರನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿಕೊಳ್ಳುತ್ತಾಳೆ. ನಂತರ ಸ್ವಲ್ಪ ಸಮಯದವರೆಗೆ ಆ ಪೇಸ್ಟ್​ನ್ನು ಶುದ್ಧವಾದ ಬಟ್ಟೆಯಲ್ಲಿ ಮುಚ್ಚಿಡುತ್ತಾಳೆ.
ನಂತರ, ಜಾಸ್ಮಿನ್ ತನ್ನ ಮುಖ ಮತ್ತು ಕುತ್ತಿಗೆಯಾದ್ಯಂತ ತಯಾರಿಸಿದ ಮಿಶ್ರಣವನ್ನು ಹಚ್ಚಿಕೊಳ್ಳುತ್ತಾಳೆ. ನಂತರ ಅದು ಸಂಪೂರ್ಣವಾಗಿ ಒಣಗುವವರೆಗೆ 10-20 ನಿಮಿಷಗಳ ಕಾಲ ಹಾಗೇ ಇಡಬೇಕೆಂದು ತಿಳಿಸಿದ್ದಾಳೆ. ಒದ್ದೆಯಾದ ಬಟ್ಟೆಯಿಂದ ಒರೆಸಿಕೊಂಡು ತಣ್ಣೀರಿನಲ್ಲಿ ತೊಳೆಯಬೇಕು ಎಂದು ತಿಳಿಸಿದ್ದಾಳೆ.

ಈ ಪದಾರ್ಥಗಳ ಪ್ರಯೋಜನಗಳು

1. ಬೀಟ್ರೂಟ್

ಬೀಟ್‌ರೂಟ್ ಪೇಸ್ಟ್​ನ್ನು ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಮೊಡವೆ ಮತ್ತು ಉರಿಯೂತದ ವಿರುದ್ಧ ಹೋರಾಡಿ, ಸುಕ್ಕುಗಳು ಮತ್ತು ಕಪ್ಪು ವೃತ್ತಗಳ ಗೋಚರತೆಯನ್ನು ಕಡಿಮೆ ಮಾಡುವ ಮೂಲಕ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಬೀಟ್ರೂಟ್​ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇದು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ.

2. ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು ಚರ್ಮದ ಸತ್ತ ಕೋಶಗಳನ್ನು ನಿಧಾನವಾಗಿ ಹೊರಹಾಕುತ್ತದೆ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವುದರ ಜೊತೆಗೆ ಚರ್ಮಕ್ಕೆ ಮ್ಯಾಟ್ ಫಿನಿಶ್ ನೀಡಿ ಹೊಳೆಯುವಂತೆ ಮಾಡುತ್ತದೆ. ಇದು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದ್ದು, ಚರ್ಮದಲ್ಲಾಗುವ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

3. ಮೊಸರು

ಮೊಸರನ್ನು ಚರ್ಮಕ್ಕೆ ಬಳಸುವುದರಿಂದ ಇದು ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಜೀವಕೋಶಗಳನ್ನು ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಮೊಸರು ಚರ್ಮವನ್ನು ತೇವಗೊಳಿಸಿ ಮೊಡವೆಗಳಾಗದಂತೆ ತಡೆಯುತ್ತದೆ. ಇತರ ಪ್ರಯೋಜನಗಳೆಂದರೆ ರಂಧ್ರಗಳನ್ನು ಬಿಗಿಗೊಳಿಸುವುದು, ಸೂಕ್ಷ್ಮ ರೇಖೆಗಳು ಮತ್ತು ಕಪ್ಪು ವೃತ್ತಗಳ ನೋಟವನ್ನು ಕಡಿಮೆ ಮಾಡುವುದು ಮತ್ತು ಚರ್ಮದ pH ಅನ್ನು ಸಮತೋಲನಗೊಳಿಸುವುದನ್ನು ಇದು ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net