50 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ! Weight Loss

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸುವ ಪ್ರಯಾಣ ಎಂದಿಗೂ ಸುಲಭದಲ್ಲ
  • ಪೌಷ್ಟಿಕ ಆಹಾರ, ದೈನಂದಿನ ವ್ಯಾಯಾಮದ ಜೊತೆಗೆ ಶಿಸ್ತುಬದ್ಧ ಜೀವನವು ಮುಖ್ಯ
  • ಸದೃಢ ಮೈಕಟ್ಟು, ಕಡಿಮೆ ತೂಕ, ಬಲಶಾಲಿಯಾದ ಸ್ನಾಯುಗಳನ್ನು ಹೊಂದಬೇಕೇ?
  • ಸ್ವಲ್ಪ ಕ್ಯಾಲೋರಿ ಕೊರತೆಯೊಂದಿಗೆ ದಿನವನ್ನು ಪ್ರಾರಂಭಿಸಲು ಶುರುಮಾಡಿ
Weight Loss: ತೂಕ ಇಳಿಸುವ ಪ್ರಯಾಣ ಎಂದಿಗೂ ಸುಲಭದಲ್ಲ. ಪೌಷ್ಟಿಕ ಆಹಾರ, ದೈನಂದಿನ ವ್ಯಾಯಾಮದ ಜೊತೆಗೆ ಶಿಸ್ತುಬದ್ಧ ಜೀವನವನ್ನು ನೀವು ನಡೆಸಬೇಕು. ನೀವೇನಾದರೂ, ಸದೃಢ ಮೈಕಟ್ಟು, ಕಡಿಮೆ ತೂಕ, ಬಲಶಾಲಿಯಾದ ಸ್ನಾಯುಗಳನ್ನು ಹೊಂದಬೇಕೆಂದು ಬಯಸಿದರೆ, ಆರೋಗ್ಯ ಮತ್ತು ಸೌಂದರ್ಯ ತಜ್ಞೆ ನೇಹಾ ಪರಿಹಾರ್ ಅವರು ನೀಡುವ ಕೆಲವು ಸಲಹೆಗಳನ್ನು ಅನುಸರಿಸಿ..
ಫಿಟ್‌ನೆಸ್ ಮತ್ತು ತೂಕ ಇಳಿಸುವ ತರಬೇತುದಾರರಾದ ನೇಹಾ ಪರಿಹಾರ್, 50 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಳ್ಳಲು 15 ನಿಯಮಗಳನ್ನು ನೀಡುವಂತಹ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1. ಅಡಿಪಾಯದ ಹಂತ (ಮೊದಲ ತಿಂಗಳು)

ಜೀವನಶೈಲಿ ತಜ್ಞರಾದ ನೇಹಾ ಪರಿಹಾರ್ ಸೂಚಿಸಿದಂತೆ ಮೊದಲ ತಿಂಗಳು ಸ್ವಲ್ಪ ಕ್ಯಾಲೋರಿ ಕೊರತೆಯೊಂದಿಗೆ ದಿನವನ್ನು ಪ್ರಾರಂಭಿಸಲು ಶಿಫಾರಸು ಮಾಡಿದ್ದಾರೆ. ಅಂದರೆ, ಹಸಿವಿನಿಂದ ಊಟವನ್ನು ಕಡಿತಗೊಳಿಸದೇ, 20-30 ನಿಮಿಷಗಳ ಕಾಲ ಮನೆಯಲ್ಲಿ ವ್ಯಾಯಾಮ ಮಾಡಿ, ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದು ಹಾಗೂ ವೈಯಕ್ತಿಕ ಜೀವನಶೈಲಿ ಮಾರ್ಗಸೂಚಿಗಳನ್ನು ಅಭ್ಯಾಸ ಮಾಡುವುದರಿಂದ 5-6 ಕೆ.ಜಿ ತೂಕ ಇಳಿಸಿಕೊಳ್ಳಬಹುದು ಎಂದು ಭರವಸೆ ನೀಡಿದ್ದಾರೆ.

2. ಆವೇಗ ಹಂತ (ಎರಡನೇ ತಿಂಗಳು)

ಎರಡನೇ ಹಂತದಲ್ಲಿ ದೇಹದಲ್ಲಿರುವ ಹೆಚ್ಚಿನ ಕೊಬ್ಬಿನ ನಷ್ಟವನ್ನು ಉತ್ತೇಜಿಸಲು ಆಳವಾದ ಕ್ಯಾಲೋರಿ ಕೊರತೆಯ ಅಗತ್ಯದ ಬಗ್ಗೆ ತಿಳಿಸಿದರು. ಇದು ನೈಸರ್ಗಿಕವಾಗಿ, ಪ್ರಿಪ್ರೊಟೀನ್​ ಅನ್ನು ಹೆಚ್ಚಿಸಿ, ಆಹಾರ ಸೇವಿಸುವುದನ್ನು ಸಮತೋಲನಗೊಳಿಸುತ್ತದೆ. ಇದರೊಂದಿಗೆ ಶಕ್ತಿ ತರಬೇತಿಯನ್ನು ಸೇರಿಸಿಕೊಳ್ಳುವುದರಿಂದ ಕನಿಷ್ಟ 6-7 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದ್ದಾರೆ.

3. ಗೆಲುವಿನ ಹಂತ (ಮೂರನೇ ತಿಂಗಳು)

ಮೂರನೇ ತಿಂಗಳಲ್ಲಿ, ಫಿಟ್​ನೆಸ್​ ತಜ್ಞರಾದ ನೇಹಾ ಭಾಗ ನಿಯಂತ್ರಣದೊಂದಿಗೆ ಹೆಚ್ಚಿನ ಆರಾಮದಾಯಕ ಆಹಾರ ಆಯ್ಕೆಗಳನ್ನು ಸೇರಿಸುವುದು ಅಗತ್ಯ ಎಂದು ಹೇಳಿದರು. ಇದರ ಜೊತೆಗೆ ಟೋನ್​ ಆಗುವುದು, ತೂಕವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಕಲಿಯಬೇಕು. ಇದು ನಿಮ್ಮ ಅತ್ಯುತ್ತಮ ತೂಕವನ್ನು ತಲುಪಿ, ಕೂದಲು, ಚರ್ಮ ಮತ್ತು ಕರುಳಿನ ಆರೋಗ್ಯವನ್ನು ತೀವ್ರವಾಗಿ ಸುಧಾರಿಸುತ್ತದೆ. ಇದರಿಂದ ಸುಮಾರು 6-8 ಕೆಜಿ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಆಕಾರ ಪಡೆಯಲು 15 ಸರಳ ನಿಯಮಗಳು

1. ಡಿಟಾಕ್ಸ್ ಮೊದಲು ಸೇವಿಸಿ ನಂತರ ಚಹಾ ಕುಡಿಯಿರಿ: 3 ತಿಂಗಳ ನಂತರ ಜೀರಿಗೆ ನೀರು ಅಥವಾ ಆಮ್ಲಾ ನೀರನ್ನು ಕುಡಿಯುವುದರೊಂದಿಗೆ ದಿನವನ್ನು ಆರಂಭಿಸಿ ನಂತರ ಚಹಾ ಸೇವಿಸಿ.
2. 8-8 ತಿನ್ನುವ ನಿಯಮ ಅಭ್ಯಾಸ ಮಾಡಿಕೊಳ್ಳಿ: ಎಲ್ಲಾ ಊಟಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಮಾತ್ರ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ ಇದು ಫಿಟ್​ನೆಸ್​ ಹೊಂದಲು ಸಹಾಯ ಮಾಡುತ್ತದೆ.
3. ಈ 3 ಪದಾರ್ಥಗಳನ್ನು ಮಿತಿಗೊಳಿಸಿ: ಮೈದಾ, ಅಕ್ಕಿ ಹಿಟ್ಟು ಮತ್ತು ಬಿಳಿ ಸಕ್ಕರೆಯಿಂದ ತಯಾರಿಸಿದ ಆಹಾರಗಳ ಸೇವನೆಯನ್ನು ನಿಯಂತ್ರಿಸಿ. ಅದರ ಬದಲಿಗೆ ಧಾನ್ಯಗಳನ್ನು ಸೇವಿಸಿರಿ.
4. ಕಾರ್ಬ್ ಸೈಕ್ಲಿಂಗ್ ಪ್ರಾರಂಭಿಸಿ: ಹೆಚ್ಚು ಕೊಬ್ಬು ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ, ನಿಯಮಿತ ಆಹಾರವನ್ನು ಸೇವಿಸಿ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
5. ಪ್ರತಿ ಊಟದಲ್ಲೂ ಪ್ರೋಟೀನ್ ಸೇರಿಸಿ: ಪ್ರತಿನಿತ್ಯ ಊಟ ಮಾಡುವಾಗ ಪ್ರೊಟೀನ್​​ ಹೊಂದಿರುವಂತಹ ಆಹಾರಗಳನ್ನು ಸೇವಿಸುವುದರಿಂದ ಸ್ನಾಯುಗಳ ಬಲ ಹೆಚ್ಚಾಗುತ್ತದೆ. ಹಾಗಾಗಿ ಪನ್ನೀರ್, ದಾಲ್, ಮೊಟ್ಟೆ, ಕೋಳಿ ಮಾಂಸ ಸೇವಿಸಿರಿ.
6. ಊಟಕ್ಕೂ ಮುನ್ನ ಸಲಾಡ್ ಆಚರಣೆ: ಹಸಿವನ್ನು ಕಡಿಮೆ ಮಾಡಲು ಮಧ್ಯಾಹ್ನ ಅಥವಾ ರಾತ್ರಿ ಊಟ ಮಾಡುವುದಕ್ಕಿಂತ 15 ನಿಮಿಷಗಳ ಮುಂಚೆ ತರಕಾರಿ ಅಥವಾ ಹಣ್ಣಿನ ಸಲಾಡ್​ ಸೇವಿಸಿರಿ.
7. ಸ್ನ್ಯಾಕ್ಸ್​ ಸೇವನೆಯಲ್ಲಿ ಮಿತಗೊಳಿಸಿ: ಹುರಿದ ಕಡಲೆ, ಚಿಪ್ಸ್​ ಅಧಿಕ ಎಣ್ಣೆಯಲ್ಲಿ ತಯಾರಿಸಿದ ಆಹಾರಗಳನ್ನು ಸೇವಿಸುವುದರ ಬದಲಿಗೆ ಮೊಸರು ಸೌತೆಕಾಯಿ ಸೇವಿಸಿರಿ.
8. ಹಣ್ಣಿನ ಕಿಟಕಿ ನಿಯಮ: ಪ್ರತಿ ದಿನ 1 ಹಣ್ಣನ್ನುಸಂಜೆ 6 ಗಂಟೆಯ ಒಳಗೆ ಸೇವಿಸುವುದನ್ನು ಕಲಿಯಿರಿ.
9. ಸ್ಪೈಸ್ ಇಟ್ ಸ್ಲಿಮ್ : ಕೊಬ್ಬು ಕರಗಿಸಲು ಪ್ರಯತ್ನಿಸುವವರು ಪ್ರತಿದಿನ ಅರಿಶಿನ, ದಾಲ್ಚಿನ್ನಿ ಮತ್ತು ಜೀರಿಗೆ ಬಳಸಿರಿ.
10. ಭೋಜನದ ಕೊನೆಯ ಸಮಯ: ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದನ್ನು ಅಭ್ಯಾಸ ಮಾಡಿ. ಇದು ಹಗುರವಾಗಿ ಜೀರ್ಣೀಸಿಕೊಳ್ಳಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಯಾವುದೇ ಮ್ಯಾಜಿಕ್ ಟ್ರಿಕ್ ಇಲ್ಲ. ತಮ್ಮ ಆಹಾರ ಕ್ರಮದಲ್ಲಿ ಕೆಲಸ ಮಾಡಬೇಕು ಮತ್ತು ಫಿಟ್​ನೆಸ್​ ತಜ್ಞರು ಸೂಚಿಸಿದ ದಿನಚರಿಯನ್ನು ಅನುಸರಿಸಬೇಕು. ನೀವು ಈ ರೀತಿಯ ಯೋಜನೆಗಳನ್ನು ಅನುಸರಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net