Attractive Habits in Psychology:ಆಕರ್ಷಣೆ ಎಂದರೆ ಸಾಮಾನ್ಯವಾಗಿ ನಾವು ಧರಿಸುವ ಬಟ್ಟೆ, ಕೇಶ ವಿನ್ಯಾಸ, ಮುಖದ ಸೌಂದರ್ಯ, ಮೇಕಪ್ ಎಂದು ಭಾವಿಸಿರುತ್ತೇವೆ. ಆದರೆ, ನಿಜಕ್ಕೂ ನಾವು ಬೇರೆಯವರಿಗೆ ಆಕರ್ಷಣೆಯಾಗಿ ಕಾಣಬೇಕು ಎಂದರೆ ಇವುಗಳ ಅವಶ್ಯಕತೆಯೇ ಇಲ್ಲ. ಮನೋವಿಜ್ಞಾನದ ಪ್ರಕಾರ, ಆಕರ್ಷಣೆ ಎನ್ನುವುದು ಜನರ ಮನಗೆಲ್ಲುವುದು. ಎಷ್ಟೇ ದೊಡ್ಡ ಗುಂಪಿನಲ್ಲಿದ್ದರೂ ಸಹ ನಮ್ಮ ವ್ಯಕ್ತಿತ್ವ ಎದ್ದು ಕಾಣಿಸುವಂತೆ ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ.