ಹಾರ್ಮೋನುಗಳ ಸಮಸ್ಯೆ: ಚರ್ಮದ ಆರೈಕೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ! Skin care

Skin care
Skin care
Published on

ಪ್ರಮುಖ ಮುಖ್ಯಾಂಶಗಳು

  • ಮುಖದ ಮೇಲೆ ಮೊಡವೆಗಳು ಜ್ವಾಲೆಯಂತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ
  • ನಿಮ್ಮ ದೇಹದಲ್ಲಾಗುವ ಹಾರ್ಮೋನುಗಳ ಸಮಸ್ಯೆಯಿಂದ ತೊಂದರೆಗಳು ಪ್ರಾರಂಭಿಸುತ್ತವೆ
  • ಚರ್ಮವು ತೇವಾಂಶ ಹೆಚ್ಚಿಸಲು ಎಣ್ಣೆ ಆಧಾರಿತ ಕ್ರೀಮ್​ಗಳನ್ನು ಬಳಸಿ
Skin care: ಮಹಿಳೆಯರಾಗಲಿ, ಪುರುಷರಾಗಿರಲಿ ಅವರ ಮುಖದ ಮೇಲೆ ಮೊಡವೆಗಳು ಜ್ವಾಲೆಯಂತೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ನಿಮ್ಮ ದೇಹದಲ್ಲಾಗುವ ಹಾರ್ಮೋನುಗಳ ಸಮಸ್ಯೆಯಿಂದ ತೊಂದರೆಗಳು ಪ್ರಾರಂಭವಾಗುತ್ತವೆ ಎಂದು ತಿಳಿದುಬಂದಿದೆ. ಅಧ್ಯಯನಗಳ ಪ್ರಕಾರ, ಲೈಂಗಿಕ ಹಾರ್ಮೋನುಗಳಲ್ಲಿನ ಏರಿಳಿತಗಳಿಂದ ಮೊಡವೆಗಳು ಉಂಟಾಗುತ್ತವೆ.

ವಿಶೇಷವಾಗಿ ಆಂಡ್ರೋಜೆನ್‌ಗಳು, ಇದು ಕೂದಲು ಕಿರುಚೀಲಗಳ ಒಳಗೆ ಎಣ್ಣೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಉರಿಯೂತಕ್ಕೆ ಕಾರಣವಾಗಿ ಮುಖದಲ್ಲಿ ಕಪ್ಪು ಚುಕ್ಕೆಗಳು, ಬಿಳಿ ಚುಕ್ಕೆಗಳು ಕಂಡು ಬರಲು ಪ್ರಾರಂಭಿಸುತ್ತದೆ.
ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಚರ್ಮದ ತಡೆಗೋಡೆಯನ್ನು ದುರ್ಬಲಗೊಳಿಸುತ್ತವೆ. ಇದು ರಂಧ್ರಗಳನ್ನು ಮುಚ್ಚಿಹಾಕಬಹುದು, ಸ್ಥಳೀಯ ಬ್ಯಾಕ್ಟೀರಿಯಾವನ್ನು ಬದಲಾಯಿಸಿ, ಹಾರ್ಮೋನುಗಳಿಂದ ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಚರ್ಮದ ಆರೈಕೆಯ ಸಂದರ್ಭದಲ್ಲಿ ಎಂದಿಗೂ ಈ ಕೆಟ್ಟ ಅಭ್ಯಾಸಗಳನ್ನು ಮಾಡಬೇಡಿ!

1. ಎಣ್ಣೆ ಆಧಾರಿತ ಕ್ರೀಮ್‌ಗಳನ್ನು ಬಳಸಿ

ಚರ್ಮವು ತೇವಾಂಶ ಹೆಚ್ಚಿಸಲು ಎಣ್ಣೆ ಆಧಾರಿತ ಕ್ರೀಮ್​ಗಳನ್ನು ಬಳಸಿ. ಅಂದರೆ, ತೆಂಗಿನ ಎಣ್ಣೆ, ಕೋಕೋ ಬೆಣ್ಣೆ ಹೊಂದಿರುವಂತಹ ಕ್ರೀಮ್​ಗಳನ್ನು ಬಳಸುವುದರಿಂದ ಇದು ಚರ್ಮದ ತೆರೆಯುವಿಕೆಯನ್ನು ನಿರ್ಬಂಧಿಸಬಹುದು. ಇದು ಮೇದೋಗ್ರಂಥಿಗಳ ಸ್ರಾವವನ್ನು ಹಿಡಿದಿಟ್ಟುಕೊಳ್ಳಬಹುದು. ನೀರು ಆಧಾರಿತ ಕ್ರೀಮ್​ಗಳನ್ನು ಬಳಸುವುದರಿಂದ ಇದು ಮುಖದ ತೇವವನ್ನು ಹೆಚ್ಚಿಸಿ ಮೊಡವೆಗಳು ಆಗದಂತೆ ತಡೆಯುತ್ತದೆ.

2. ಕಠಿಣ ಕ್ರೀಮ್​ಗಳಿಂದ ಮುಖವನ್ನು ಸ್ವಚ್ಛಗೊಳಿಸಬೇಡಿ

ದಿನಕ್ಕೆ ಹಲವು ಬಾರಿ ಬಲವಾದ ಕ್ರೀಮ್​ಗಳನ್ನು ಬಳಸಿ ಮುಖವನ್ನು ತೊಳೆಯುವುದರಿಂದ ಇದು ಚರ್ಮದಲ್ಲಿರುವ ನೈಸರ್ಗಿಕ ಲಿಪಿಡ್​ಗಳನ್ನು ತೆಗೆಯುತ್ತದೆ. ಇದು ಚರ್ಮದ ತಡೆಗೋಡೆಗೆ ಹಾನಿಯಾಗುತ್ತದೆ. ಹಾಗಾಗಿ ಚರ್ಮವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಬೆಳಿಗ್ಗೆ ಒಮ್ಮೆ ಹಾಗೂ ಸಂಜೆ ಒಮ್ಮೆ ಮುಖವನ್ನು ತೊಳೆಯಿರಿ. ಮೇಕಪ್​ನ್ನು ತೆಗೆದುಹಾಕಲು ಸೌಮ್ಯವಾದ ಕ್ಲೆನ್ಸರ್​ ಬಳಸಿರಿ. ಇದು ಚರ್ಮವನ್ನು ಆರೈಕೆ ಮಾಡುತ್ತದೆ.

3. ಮೇಕಪ್ ಅನ್ನು ಸರಿಯಾಗಿ ತೆಗೆಯಿರಿ

ಯಾವುದೇ ವ್ಯಕ್ತಿಯು ಮೇಕಪ್​ನ್ನು ಹಾಕಿಕೊಂಡು ಮಲಗುವುದಿರಿಂದ ಚರ್ಮವು ಇನ್ನಷ್ಟು ಹದಗೆಡಲು ಪ್ರಾರಂಭಿಸುತ್ತದೆ. ಅದಕ್ಕಾಗಿ ತೀವ್ರ ಪರಿಣಾಮ ಬೀರುವಂತಹ ಸೌಂದರ್ಯವರ್ಧಕಗಳನ್ನು ಬಳಸುವ ಬದಲಿಗೆ ಸೂಕ್ಷ್ಮವಾದ ಕ್ರೀಮ್​ಗಳನ್ನು ಬಳಸಿ. ಪ್ರತಿ ರಾತ್ರಿ ಮೇಕಪ್​ನ್ನು ತೆಗೆಯಿರಿ. ಇದು ಚರ್ಮವನ್ನು ಆರೈಕೆ ಮಾಡಲು ಸಹಾಯ ಮಾಡುತ್ತದೆ.

4. ಮೊಡವೆಗಳು ಚುಚ್ಚುವುದು ಅಥವಾ ಕೀಳುವುದನ್ನು ಮಾಡಬೇಡಿ

ಮುಖದ ಮೇಲೆ ಆಗಿರುವ ಮೊಡವೆಗಳನ್ನು ಬಲವಂತವಾಗಿ ಹಿಸುಕುವುದರಿಂದ ಇದು ಉರಿಯೂತವನ್ನು ಉಂಟು ಮಾಡುತ್ತದೆ. ಇದು ಹೆಚ್ಚಾಗಿ ಬ್ಯಾಕ್ಟೀರಿಯಾವನ್ನು ಉಂಟು ಮಾಡುತ್ತದೆ. ಹಾಗೆಯೇ, ದೀರ್ಘಕಾಲದ ಗಂಟು ಗಾಯಗಳು ಉಂಟಾಗುತ್ತವೆ. ಆದರಿಂದ ಮೊಡವೆ ಆದಾಗ ಚರ್ಮದಲ್ಲಿ ಆದಂತಹ ಗಾಯಗಳ ಮೇಲೆ ಚಿವುಟಿಕೊಳ್ಳುವುದು, ಕೀಳುವುದನ್ನು ಮಾಡಬೇಡಿ.

5. ಚರ್ಮದ ತಡೆಗೋಡೆಯನ್ನು ನಿರ್ಲಕ್ಷಿಸುವುದು

ಹೆಚ್ಚು ಎಣ್ಣೆಯುಕ್ತ ಚರ್ಮವು ಎಣ್ಣೆಯನ್ನು ಉತ್ಪಾದಿಸುತ್ತದೆ ಎಂದು ಮಾಯಿಶ್ಚರೈಸರ್ ಬಳಸುವುದನ್ನು ನಿಲ್ಲಿಸಬೇಡಿ. ಹೀಗೆ ಮಾಡುವುದರಿಂದ ಚರ್ಮವು ಇನ್ನಷ್ಟು ಹದಗೆಡಲು ಪ್ರಾರಂಭಿಸುತ್ತದೆ. ಹಾಗಾಗಿ ಎಣ್ಣೆ ರಹಿತ ಮಾಯಿಶ್ಚರೈಸರ್ ಬಳಸಿ ಇದು ಚರ್ಮವನ್ನು ತೊಂದರೆಯಾಗದಂತೆ ತಡೆಯುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net