'ಐ ಲವ್ ಯೂ' ಅಂದ್ರೆ ಸಾಲದು...; ನಿಮ್ಮ ಪ್ರೀತಿ ಅಮರವಾಗಲು ಪ್ರೇಮ ಪತ್ರ ಬರೆಯುವುದು ಹೇಗೆ ಎಂಬುದು ತಿಳಿಯಿರಿ! Valentines Day

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ ಪ್ರಾರಂಭವಾಗುತ್ತಿದ್ದಂತಲೇ ಪ್ರೇಮಿಗಳಿಗೆ ಒಂದು ರೀತಿಯ ಹಬ್ಬವಿದ್ದಂತೆ
  • ತಮ್ಮ ಪ್ರೀತಿ ಪಾತ್ರರಿಗೆ ಯಾವ ರೀತಿಯಲ್ಲಿ ಉಡುಗೊರೆ ನೀಡಬೇಕು ಎಂದು ಯೋಚಿಸ್ತಾ ಇರ್ತಾರೆ
  • ಹಿಂದಿನ ಕಾಲದಂತೆ ಕೇವಲ ಗುಲಾಬಿ ಹೂವು ಅಥವಾ ಚಾಕೊಲೇಟ್‌ಗೆ ಪ್ರೇಮಿಗಳು ಸೀಮಿತವಾಗಿಲ್ಲ
Valentines Day: ಫೆಬ್ರವರಿ ಪ್ರಾರಂಭವಾಗುತ್ತಿದ್ದಂತಲೇ ಪ್ರೇಮಿಗಳಿಗೆ ಒಂದು ರೀತಿಯ ಹಬ್ಬವಿದ್ದಂತೆ. ತಮ್ಮ ಪ್ರೀತಿ ಪಾತ್ರರಿಗೆ ಯಾವ ರೀತಿಯಲ್ಲಿ ಉಡುಗೊರೆ ನೀಡಬೇಕು. ಯಾವ ರೀತಿಯಲ್ಲಿ ಅವರನ್ನು ಒಲಿಸಿಕೊಳ್ಳಬೇಕೆಂದು ಯೋಚಿಸುತ್ತಾ ಇರುತ್ತಾರೆ. ಕೆಲವೊಬ್ಬರು ಸ್ನೇಹಿತರ ಸಹಾಯ ಪಡೆದರೆ, ಇನ್ನೂ ಕೆಲವರು ಗೂಗಲ್ ಮತ್ತು ಯೂಟ್ಯೂಬ್‌ಗಳತ್ತ ಸಹಾಯವನ್ನು ಬೇಡುತ್ತಾರೆ.
ಆದಾಗ್ಯೂ, ಹಿಂದಿನ ಕಾಲದಂತೆ ಕೇವಲ ಗುಲಾಬಿ ಹೂವು ಅಥವಾ ಚಾಕೊಲೇಟ್‌ಗೆ ಪ್ರೇಮಿಗಳು ಸೀಮಿತವಾಗಿಲ್ಲ. ಈಗ ಪರ್ಸನಲೈಸ್ಡ್ ಗಿಫ್ಟ್​ಗಳ ಜಮಾನ. ತಮ್ಮ ಪ್ರೀತಿ ಪಾತ್ರರ ಪೋಟೋ ಇರುವಂತಹ ಮಗ್​ಗಳು, ಅವರ ಹೆಸರಿರುವ ಪೆಂಡೆಂಟ್ ಅಥವಾ ಇಬ್ಬರೂ ಕಳೆದ ಸುಂದರ ಕ್ಷಣಗಳ ಫೋಟೋ ಆಲ್ಬಮ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. 
ಇಂದಿನ ಡಿಜಿಟಲ್ ಯುಗದಲ್ಲಿಯೂ ಸಹ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ನೀವೇನಾದರೂ, ಪತ್ರವನ್ನು ಬರೆಯಬೇಕೆಂದು ಅಂದುಕೊಂಡಿದ್ದರೆ, ಅದು ಹೃದಯಸ್ಪರ್ಶಿ ವಿಷಯ. ವಾಟ್ಸಾಪ್​ ಸಂದೇಶಗಳಿಗಿಂತ ಕೈಬರಹದ ಪತ್ರವು ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಒಳ್ಳೆಯ ಪ್ರೇಮ ಪತ್ರ ಬರೆಯಲು ಕವಿಯಾಗಬೇಕಿಲ್ಲ. ಬದಲಿಗೆ ನಿಮ್ಮ ಆಂತರಿಕ ಪ್ರೀತಿಯನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಹೇಗೆ ಎಂಬುದನ್ನು ಕಲಿತರೆ ಸಾಕು..
ಪ್ರೇಮ ಪತ್ರ ಬರೆಯುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಯಿರಿ. ಮೊದಲು ಪತ್ರವನ್ನು ಪ್ರಾರಂಭಿಸುವಾಗ 'ಡಿಯರ್' ಅಥವಾ ನೀವು ಪ್ರೀತಿಯಿಂದ ಕರೆಯುವ ಯಾವುದೇ ಹೆಸರನ್ನು ಶೀರ್ಷಿಕೆಗೆ ಬಳಸಿಕೊಳ್ಳಿ. ನಂತರ ನೀವು ಪತ್ರವನ್ನು ಬರೆಯುತ್ತಿರುವ ನಿಖರವಾದ ಪರಿಸ್ಥಿತಿಯನ್ನು ಮತ್ತು ನಿಮ್ಮ ಮನಸ್ಸಿನ ಭಾವನೆಯನ್ನು ವಿವರಿಸುವ ಮೂಲಕ ಪ್ರಾರಂಭಿಸಿ. (ಉದಾಹರಣೆಗೆ: ನಿನಗೆ ಈ ಪತ್ರ ಬರೆಯುವಾಗ ನನ್ನ ಮನಸ್ಸಿನಲ್ಲಿ ಸಾವಿರಾರು ಭಾವನೆಗಳು ಓಡುತ್ತಿವೆ. ಮಾತುಗಳಲ್ಲಿ ಹೇಳಲಾಗದ ಎಷ್ಟೋ ವಿಷಯಗಳನ್ನು ಈ ಕಾಗದದ ಮೂಲಕ ನಿನಗೆ ತಲುಪಿಸಬೇಕೆಂಬುದು ನನ್ನ ಆಸೆ) ಈ ರೀತಿಯಾಗಿ ಬರೆಯಲು ಪ್ರಾರಂಭಿಸಿ.
ಪತ್ರದಲ್ಲಿ ನಿಮ್ಮ ಸಂಗಾತಿಯ ಯಾವ ಗುಣಗಳ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿವೆ ಎಂಬುದರ ಬಗ್ಗೆ ಬರೆಯಿರಿ. ಅವರ ನಗು, ಮಾತು, ಅಥವಾ ಅವರು ನಿಮ್ಮನ್ನು ನಡೆಸಿಕೊಳ್ಳುವ ರೀತಿ ನಿಮಗೆ ಅವರಲ್ಲಿ ಏನು ಇಷ್ಟ ಎಂಬುದನ್ನು ವಿವರಿಸಿ. ಅದೇ ರೀತಿ ನೀವು ಮೊದಲು ಎಲ್ಲಿ ಭೇಟಿಯಾಗಿದ್ದು, ಒಟ್ಟಿಗೆ ಕಳೆದ ಸಮಯದ ಬಗ್ಗೆ ಬರೆಯಿರಿ. ಇದು ನಿಮ್ಮ ಸಂಗಾತಿಯನ್ನು ಹಳೆಯ ನೆನಪುಗಳಿಗೆ ಕರೆದೊಯ್ಯುತ್ತದೆ.
ಪತ್ರದ ಕೊನೆಯಲ್ಲಿ, ನಿಮ್ಮ ಪ್ರೀತಿಯನ್ನು ಖಚಿತಪಡಿಸಿ, ಯಾವಾಗಲೂ ಅವರ ಜೊತೆ ಇರುತ್ತೀರಿ ಎಂದು ಭರವಸೆ ನೀಡಿ. ಇದು ನಿಮ್ಮ ಜೀವನದಲ್ಲಿ ಅವರು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಅಂಗಡಿಯಲ್ಲಿ ಸಿಗುವ ಗ್ರೀಟಿಂಗ್​ಗಳಿಗಿಂತ ನಿಮ್ಮ ಕೈಯಾರೆ ಬರೆದ ಪತ್ರಗಳೇ ಹೆಚ್ಚು ಭಾವನಾತ್ಮಕ ಮೌಲ್ಯವನ್ನು ನೋಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net