ಹಲ್ಲುಗಳ ಹಳದಿ ಬಣ್ಣದಿಂದ ಮುಜುಗರವೇ? ಈ ಪೇಸ್ಟ್​ ನಿಮ್ಮ ನಗುವನ್ನು ಬದಲಿಸಲಿದೆ! Oral Hygiene

Oral Hygiene (ಸಾಂದರ್ಭಿಕ ಚಿತ್ರ)
Oral Hygiene (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯಕರ ಹಲ್ಲು ಸುಂದರವಾದ ನಗುವನ್ನು ಹೆಚ್ಚಿಸುವುದಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆ
  • ನಮ್ಮ ಕಳಪೆ ಆಹಾರ ಪದ್ದತಿ, ಅತಿಯಾದ ಸಿಹಿತಿಂಡಿಗಳ ಸೇವನೆ, ಹಲ್ಲು ಉಜ್ಜುವಲ್ಲಿ ಸೋಮಾರಿತದಿಂದ ಹಲ್ಲಿನಲ್ಲಿ ಸಮಸ್ಯೆ
  • ದಂತ ಆರೈಕೆಗೆ ಕೆಲವು ನೈಸರ್ಗಿಕ ಮತ್ತು ಗಿಡಮೂಲಿಕೆ ಪದಾರ್ಥಗಳು ಬಹಳ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ
Oral Hygiene: ಆರೋಗ್ಯಕರ ಹಲ್ಲು ಮತ್ತು ಒಸಡುಗಳು ಸುಂದರವಾದ ನಗುವನ್ನು ಹೆಚ್ಚಿಸುವುದಲ್ಲದೆ , ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆ. ನಮ್ಮ ಕಳಪೆ ಆಹಾರ ಪದ್ದತಿ, ಅತಿಯಾದ ಸಿಹಿತಿಂಡಿಗಳ ಸೇವನೆ, ಹಲ್ಲು ಉಜ್ಜುವಲ್ಲಿ ಸೋಮಾರಿತನದ ಅಭ್ಯಾಸದಿಂದಾಗಿ ಹಲ್ಲು ನೋವು, ಹಳದಿ ಬಣ್ಣ, ಒಸಡುಗಳಲ್ಲಿ ರಕ್ತಸ್ರಾವ ಮತ್ತು ಬಾಯಿಯಲ್ಲಿ ದುರ್ವಾಸನೆ ಇಂತಹ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ದುಬಾರಿ ಟೂತ್‌ಪೇಸ್ಟ್‌ಗಳು ಮತ್ತು ವಿವಿಧ ಉತ್ಪನ್ನಗಳನ್ನು ಅವಲಂಬಿಸುತ್ತಾರೆ. ಆದರೆ, ಯಾವುದೇ ಫಲಿತಾಂಶಗಳನ್ನು ಪಡೆಯದೇ ವಿಫಲರಾಗುತ್ತಾರೆ. 
ಆದಾಗ್ಯೂ, ದಂತ ಆರೈಕೆಗೆ ಕೆಲವು ನೈಸರ್ಗಿಕ ಮತ್ತು ಗಿಡಮೂಲಿಕೆ ಪದಾರ್ಥಗಳು ಬಹಳ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಹಾಗಾಗಿ ನಿಮ್ಮ ಹಲ್ಲುಗಳ ಸಮಸ್ಯೆಯನ್ನು ಪರಿಹರಿಸಬೇಕೆಂದರೆ, ಈ ಕೂಡಲೇ ಸರಳ ಮತ್ತು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಈ ಟೂತ್​ಪೇಸ್ಟ್​ನ್ನು ತಯಾರಿಸಿ.

ಬೇಕಾಗುವ ಪದಾರ್ಥಗಳು

* 35 ಗ್ರಾಂ ಬೇವಿನ ಪುಡಿ 
* 20 ಗ್ರಾಂ ಲೈಕೋರೈಸ್ ಪುಡಿ 
* 5 ಗ್ರಾಂ ಅಡಿಗೆ ಸೋಡಾ 
* 10 ಗ್ರಾಂ ತ್ರಿಫಲ ಪುಡಿ 
*  5 ಗ್ರಾಂ ಲವಂಗ ಪುಡಿ
*  5 ಗ್ರಾಂ ದಾಲ್ಚಿನ್ನಿ ಪುಡಿ 
*  1 ಚಮಚ ಸಾರಭೂತ ತೈಲ  

ಟೂತ್‌ಪೇಸ್ಟ್ ತಯಾರಿಸುವುದು ಹೇಗೆ?

ಮೊದಲು ಒಂದು ಬಟ್ಟಲನ್ನು ತೆಗೆದುಕೊಳ್ಳಿ ಅದಕ್ಕೆ ಬೇವಿನ ಪುಡಿ, ಲೈಕೋರೈಸ್ ಪುಡಿ, ತ್ರಿಫಲ ಪುಡಿ, ಲವಂಗ ಪುಡಿ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮಿಕ್ಸ್​ ಮಾಡಿ. ನಂತರ ಆ ಮಿಶ್ರಣಕ್ಕೆ ಅಡಿಗೆ ಸೋಡಾ ಸೇರಿಸಿ ಮಿಕ್ಸ್​ ಮಾಡಿ. 
ನಂತರ ನಿಧಾನವಾಗಿ ಸಾರಭೂತ ತೈಲಗಳನ್ನು ಸೇರಿಸಿ ಮತ್ತು ಎಲ್ಲವೂ ಮಿಶ್ರಣವಾಗುವರೆಗೂ ಚೆನ್ನಾಗಿ ಮಿಕ್ಸ್​ ಮಾಡಿ. ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ನಂತರ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಬಳಸಿ ಹಲ್ಲು ಉಜ್ಜಿರಿ.

ಈ ಟೂತ್‌ಪೇಸ್ಟ್‌ನ ಪ್ರಯೋಜನಗಳೇನು?

ಈ ಗಿಡಮೂಲಿಕೆ ಟೂತ್​ಪೇಸ್ಟ್​ನಲ್ಲಿ ಬೇವು, ತ್ರಿಫಲ ಮತ್ತು ಅಡಿಗೆ ಸೋಡಾ ಇರುವುದರಿಂದ ಇದು ಹಲ್ಲುಗಳ ಮೇಲಿನ ಪ್ಲೇಕ್ ಮತ್ತು ಕೊಳೆಯನ್ನು ತೆಗೆದುಹಾಕಿ ಸ್ವಚ್ಛವಾಗಿರುವಂತೆ ಮಾಡುತ್ತದೆ. ಲೈಕೋರೈಸ್ ಮತ್ತು ಲವಂಗವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಒಸಡುಗಳನ್ನು ಬಲಪಡಿಸಲು ಮತ್ತು ಉರಿಯೂತ ಅಥವಾ ರಕ್ತಸ್ರಾವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net