ರಾಸಾಯನಿಕ ಮುಕ್ತ ಸೌಂದರ್ಯ: ಮನೆಯಲ್ಲೇ ಮಾಡಿ ನ್ಯಾಚುರಲ್ ಲಿಪ್‌ಸ್ಟಿಕ್! Natural Lipstick

Natural Lipstick ಸಾಂದರ್ಭಿಕ ಚಿತ್ರ
Natural Lipstick ಸಾಂದರ್ಭಿಕ ಚಿತ್ರ
Published on

Natural Lipstick: ಮನೆಯಲ್ಲೇ ಯಾವುದೇ ರಾಸಾಯನಿಕಗಳಿಲ್ಲದೆ ಸಂಪೂರ್ಣ ನೈಸರ್ಗಿಕ, ಸುರಕ್ಷಿತ ಹಾಗೂ ಆಕರ್ಷಕ ಲಿಪ್‌ಸ್ಟಿಕ್ ತಯಾರಿಸುವುದು ಈಗ ತೀರಾ ಸುಲಭ. ಅಡುಗೆಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನಷ್ಟೇ ಬಳಸಿ, ತುಟಿಗಳಿಗೆ ಸುಂದರ ಬಣ್ಣ ನೀಡುವ ಜೊತೆಗೆ ಅವುಗಳನ್ನು ಸದಾ ಮೃದುವಾಗಿ, ತೇವವಾಗಿಡುವ ಅದ್ಭುತ ಗೃಹ ಪರಿಹಾರ ಇಲ್ಲಿದೆ. ಯಾವುದೇ ಅಡ್ಡಪರಿಣಾಮಗಳ ಭಯವಿಲ್ಲದೆ, ಸುಲಭ ವಿಧಾನದಲ್ಲಿ ನೈಸರ್ಗಿಕವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ. 

ಬೀಟ್‌ರೂಟ್ ಲಿಪ್‌ಸ್ಟಿಕ್

ಅಗತ್ಯವಿರುವ ಸಾಮಗ್ರಿಗಳು

* 1-2 ಚಮಚ  ಬೀಟ್‌ರೂಟ್ ರಸ
* 1 ಚಮಚ ಕೊಬ್ಬರಿ ಎಣ್ಣೆ 
* 1/2 ಚಮಚ ವಾಸಲಿನ್ 

ತಯಾರಿಸುವ ವಿಧಾನ

ಬೀಟ್‌ರೂಟ್ ಅನ್ನು ಚೆನ್ನಾಗಿ ತುರಿದು, ಸೋಸಿ ಅದರ ಚಿಕ್ಕದಾದ ಗಟ್ಟಿ ರಸವನ್ನು ತೆಗೆದುಕೊಳ್ಳಿ. ನಂತರ ಒಂದು ಸಣ್ಣ ಪಾತ್ರೆಯಲ್ಲಿ ವಾಸಲಿನ್ ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿ (ಬಿಸಿ ನೀರಿನ ಹಾವಿಯಲ್ಲಿ ಅಥವಾ ಮೈಕ್ರೋವೇವ್‌ನಲ್ಲಿ) ಸ್ವಲ್ಪ ಕರಗಿಸಿ. ಇದಕ್ಕೆ ತೆಗೆದಿಟ್ಟ ಬೀಟ್‌ರೂಟ್ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಸಣ್ಣ ಡಬ್ಬಿ ಅಥವಾ ಖಾಲಿ ಲಿಪ್‌ಸ್ಟಿಕ್ ಕಂಟೇನರ್‌ಗೆ ಹಾಕಿ, 10-15 ನಿಮಿಷ ಫ್ರಿಡ್ಜ್‌ನಲ್ಲಿಡಿ. ಈಗ ನಿಮ್ಮ ನೈಸರ್ಗಿಕ ಬೀಟ್‌ರೂಟ್ ಲಿಪ್‌ಸ್ಟಿಕ್ ಸಿದ್ಧ.

ಆರೆಂಜ್ / ನ್ಯೂಡ್ ಶೇಡ್ ಲಿಪ್‌ಸ್ಟಿಕ್ 

ಅಗತ್ಯವಿರುವ ಸಾಮಗ್ರಿಗಳು

* 1 ಚಮಚ ಬೆಣ್ಣೆ
* ಒಂದು ಚಿಟಿಕೆ ಆರ್ಗಾನಿಕ್ ಅರಿಶಿನ 
* 1/2 ಚಮಚ ಕೊಬ್ಬರಿ ಎಣ್ಣೆ

ತಯಾರಿಸುವ ವಿಧಾನ

 ಬೆಣ್ಣೆಗೆ ಕೊಬ್ಬರಿ ಎಣ್ಣೆ ಸೇರಿಸಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ನೈಸರ್ಗಿಕ ಬಣ್ಣಕ್ಕಾಗಿ ಒಂದು ಚಿಟಿಕೆ ಅರಿಶಿನ ಹಾಕಿ ಚೆನ್ನಾಗಿ ಕಲಸಿ.ಈ ಮಿಶ್ರಣ ತಣ್ಣಗಾದ ಮೇಲೆ ಕಂಟೇನರ್‌ಗೆ ಹಾಕಿ ತೆಗೆದಿಡಿ (ಏಜೆನ್ಸೀಸ್). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net