ಕೆಲವೇ ದಿನದಲ್ಲಿ ಗ್ಲೋ ಪಡೆಯಲು ಬೀಟ್ರೂಟ್ ಫೇಸ್​ ಪ್ಯಾಕ್ ಟ್ರೈ ಮಾಡಿ! Beetroot face pack

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬರಿಗೂ ತಾವು ಅಂದವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ
  • ಹೆಚ್ಚಿನ ಜನರು ದುಬಾರಿ ಉತ್ಪನ್ನಗಳತ್ತ ಮೊರೆ ಹೋದರೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಾರೆ
  • ರಾಸಾಯನಿಕಗಳಿಂದ ತುಂಬಿದ ಉತ್ಪನ್ನಗಳು ಚರ್ಮವನ್ನು ಹಾನಿ ಮಾಡುತ್ತವೆ
Beetroot face pack: ಪ್ರತಿಯೊಬ್ಬರಿಗೂ ತಾವು ಅಂದವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಹಾಗಾಗಿ ಹೆಚ್ಚಿನ ಜನರು ದುಬಾರಿ ಉತ್ಪನ್ನಗಳತ್ತ ಮೊರೆ ಹೋಗುತ್ತಾರೆ. ಇನ್ನು ಕೆಲವರು ಚಿಕಿತ್ಸೆಯನ್ನು ಪಡೆಯಲು ಬಯಸುತ್ತಾರೆ. ಆದರೂ, ಯಾವುದೇ ರೀತಿಯಲ್ಲೂ ಹೊಳಪನ್ನು ಪಡೆಯದೇ ನಿರಾಸೆಗೊಳ್ಳುತ್ತಾರೆ. ಅಂದಹಾಗೇ, ರಾಸಾಯನಿಕಗಳಿಂದ ತುಂಬಿದ ಉತ್ಪನ್ನಗಳು ಹೆಚ್ಚಾಗಿ ಚರ್ಮವನ್ನು ಹಾನಿ ಮಾಡುತ್ತವೆ. ಹಾಗಾಗಿ ನೀವೇನಾದರೂ ನೈಸರ್ಗಿಕ ಹೊಳಪನ್ನು ಪಡೆಯಲು ಬಯಸಿದರೆ ಆರೋಗ್ಯ ತರಬೇತುದಾರರು ಸೂಚಿಸಿದ ಬೀಟ್ರೂಟ್​ ವಿಧಾನವನ್ನು ಬಳಸಿರಿ. 
ಏನಿದು ಬೀಟ್ರೂಟ್​ ವಿಧಾನ?
ನಿಮ್ಮ ಮುಖದ ಬಣ್ಣ ಕಪ್ಪಾಗಿರಲಿ, ಕಂದು ಬಣ್ಣ ಆಗಿರಲಿ ಅಥವಾ ಬಿಳಿ ಬಣ್ಣವನ್ನು ಹೊಂದಿರಲಿ, ಕಪ್ಪು ಕಲೆಗಳನ್ನು ಹೊಂದಿದ್ದರೂ ಸಹ ನೀವು ಈ ಬೀಟ್‌ರೂಟ್‌ ಸಹಾಯದಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು.
1 ಬೀಟ್​ರೂಟ್​ನ್ನು ಮಿಕ್ಸಿ ಮಾಡಿ ಆ ರಸವನ್ನು ತೆಗೆದುಕೊಂಡು, ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿ, ಮಿಕ್ಸ್​ ಮಾಡಿ ಇಟ್ಟುಕೊಳ್ಳಿ. ನಂತರ ನಿಮ್ಮ ಮುಖವನ್ನು ತೊಳೆದು ಮೆದು ಬಟ್ಟೆಯಲ್ಲಿ ಒರೆಸಿಕೊಂಡು ತಯಾರಿ ಮಾಡಿದ ಪೇಸ್ಟ್​ನ್ನು ಹಚ್ಚಿ, 2 ನಿಮಿಷ ಸ್ಕ್ರಬ್​ ಮಾಡಿ. ಇದರ ತ್ವರಿತ ಪ್ರಕ್ರಿಯೆಯು ಮುಖದಲ್ಲಿರುವ ಕಪ್ಪು ಮತ್ತು ಬಿಳಿ ಚುಕ್ಕೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ನಂತರ, ಸ್ವಲ್ಪ ಕಡಲೆ ಹಿಟ್ಟಿಗೆ ಬೀಟ್ರೂಟ್ ರಸವನ್ನು ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಉಜ್ಜುವುದರಿಂದ ಕುತ್ತಿಗೆಯ ಭಾಗದಲ್ಲಿ ಅಡಗಿದ್ದ ಕಪ್ಪು ಕಲೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ.
NRFHH ನಡೆಸಿದ ಸಂಶೋಧನೆಗಳ ಪ್ರಕಾರ, ಬೀಟ್ರೂಟ್ ಸಿಪ್ಪೆಯ ಸಾರವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡಿ, ಕಾಲಜನ್ ಸ್ಥಗಿತವನ್ನು ಕಡಿಮೆ ಮಾಡುತ್ತದೆ. ಇದು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ. 
 ಬೀಟ್‌ರೂಟ್‌ಗಳು ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳನ್ನು ಹೊಂದಿದ್ದು ಅದು ಚರ್ಮದಲ್ಲಾದ ಕಪ್ಪು ಕಲೆಗಳು, ಹೈಪರ್‌ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net