ಚಳಿಗಾಲದಲ್ಲಿ ಚರ್ಮದ ಆರೈಕೆ ಕಷ್ಟವಾಗುತ್ತಿದೆಯಾ...? ಮನೆಯಲ್ಲಿ ತಯಾರಿಸಿದ ಈ ಫೇಸ್ ಪ್ಯಾಕ್ ಟ್ರೈ ಮಾಡಿ.. Beauty tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Beauty tips: ಚಳಿಗಾಲ ಆರಂಭವಾಗಿದೆ, ನಿಮ್ಮ ಚರ್ಮ ಈಗಾಗಲೇ ಬಿಗಿಯಾಗಲು ಪ್ರಾರಂಭಿಸಿರುತ್ತದೆ. ಇದರಿಂದ ನಿಮ್ಮ ಚರ್ಮವು ಶುಷ್ಕ ಮತ್ತು ಮಂದವಾಗಿ ಕಾಣುತ್ತದೆ. ತಂಪಾದ ಗಾಳಿಯು  ನಿಮ್ಮ ಚರ್ಮದಿಂದ ತೇವಾಂಶವನ್ನು ಎಳೆದುಕೊಂಡು ಅದನ್ನು ಮಂದಗೊಳಿಸುವಂತೆ ಮಾಡುತ್ತದೆ. ಇದರಿಂದ ನೀವು ರೋಸಿಹೋಗಿದ್ದೀರಾ? ಈ ಸಮಯದಲ್ಲಿ ದುಬಾರಿ ಉತ್ಪನ್ನಗಳತ್ತ ಮುಖ ಮಾಡುವುದು ಸಹಜ. ಆದರೆ, ಒಳ್ಳೆಯ ಸುದ್ದಿ ಎಂದರೆ, ದುಬಾರಿ ಉತ್ಪನ್ನಗಳ ಬಳಸದೇ ಮನೆಯಲ್ಲಿಯೇ ಸಿಗುವಂತಹ ಈ ಮನೆಮದ್ದುಗಳನ್ನು ಬಳಸಿ ನಿಮ್ಮ ಚರ್ಮವನ್ನು ಮೃದುವಾಗಿಟ್ಟುಕೊಳ್ಳಲು ಬಳಸಿಕೊಳ್ಳಬಹುದಾಗಿದೆ. ಹೇಂಗತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

1. ಹಾಲು ಮತ್ತು ಅರಿಶಿನ

ಚಳಿಗಾಲದಲ್ಲಿ ನಿಮ್ಮ ಮುಖವನ್ನು ತೇವಾಂಶದಿಂದ ಇಡಲು ಹಾಲಿಗಿಂತ ಉತ್ತಮವಾದ ಬೇರೊಂದು ಮನೆಮದ್ದು ಇಲ್ಲ. ಇದರಲ್ಲಿರುವ ಕೊಬ್ಬು ಚರ್ಮಕ್ಕೆ ಆಳವಾಗಿ ಹೋಗುವುದರಿಂದ ತೇವಾಂಶವನ್ನು ನೀಡುತ್ತದೆ. ಹಾಗಾಗಿ ಸ್ವಲ್ಪ ಅರಿಶಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ 10-15 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

2. ಜೇನುತುಪ್ಪ ಮತ್ತು ಅಲೋವೆರಾ

ಒಣ ಚರ್ಮಕ್ಕೆ ಜೇನುತುಪ್ಪ ಮತ್ತು ಅಲೋವೆರಾ ಸೂಪರ್-ಹೈಡ್ರೇಶನ್ ಪ್ಯಾಕ್ ಆಗಿ ಕಾರ್ಯನಿರ್ವಹಿಸುತ್ತವೆ. ಜೇನುತುಪ್ಪವು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವ ನೈಸರ್ಗಿಕ ಪದಾರ್ಥವಾಗಿದೆ. ಹಾಗೆಯೇ ಅಲೋವೆರಾವು ಚರ್ಮದಿಂದ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ 1 ಟೀಚಮಚ ಜೇನುತುಪ್ಪವನ್ನು 1 ಟೀ ಚಮಚ ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ.

3. ಬಾದಾಮಿ ಎಣ್ಣೆ

ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರೇಷ್ಮೆಯಂತೆ ಇರಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಹಾಗಾಗಿ ಚಳಿಗಾಲದಲ್ಲಿ ಒಣಗುವ ಚರ್ಮವನ್ನು ಬಲಪಡಿಸಿಕೊಳ್ಳಲು ಪ್ರತಿದಿನಿ ರ್ಆತ್ರಿ ಬಾದಾಮಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಮಸಾಜ್​ ಮಾಡಿರಿ. ಇದು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.

4. ಮೊಸರು ಮತ್ತು ಕಡಲೆ ಹಿಟ್ಟು

 ಚರ್ಮದ ಆಳವಾದ ಶುದ್ಧೀಕರಣ ಮತ್ತು ಮಾಯಿಶ್ಚರೈಸಿಂಗ್‌ಗಾಗಿ, ಕಡಲೆ ಹಿಟ್ಟನ್ನು ಮೊಸರಿನೊಂದಿಗೆ ಹಚ್ಚುವುದು ಸೂಕ್ತವಾಗಿದೆ.  ಚಳಿಗಾಲದಲ್ಲಿ ಚರ್ಮವು ಒಣಗಲು ಆರಂಭವಾಗುತ್ತದೆ. ಈ ಸಮಯದಲ್ಲಿ ಈ ಪ್ಯಾಕ್​ ಹಚ್ಚುವುದರಿಂದ ನಿಮ್ಮ ಚರ್ಮವನ್ನು ತೇವಾಂಶದಿಂದ ಕೂಡುವಂತೆ ಮಾಡುತ್ತದೆ. ಹಾಗಾಗಿ 1 ಚಮಚ ಮೊಸರು ಮತ್ತು 1 ಚಮಚ ಕಡಲೆ ಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ನಿಧಾನವಾಗಿ ಉಜ್ಜಿ ನಂತರ ತೊಳೆಯಿರಿ.

5. ತೆಂಗಿನ ಎಣ್ಣೆ ಮತ್ತು ರೋಸ್ ವಾಟರ್

ನಿಮ್ಮ ಚರ್ಮದಲ್ಲಾದ ಶುಷ್ಕತೆಯನ್ನು ತೆಗೆದುಹಾಕಲು ನೀವು ರೋಸ್ ವಾಟರ್ ಅನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ರಿಫ್ರೆಶ್​ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಚರ್ಮವನ್ನು ಮೃದು ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net