ಬಾಚಣಿಗೆಯಲ್ಲಿ ಸಿಲುಕುವ ಕೂದಲಿಗೆ ಫುಲ್ ಸ್ಟಾಪ್‌ ಇಡಿ: ಕೂದಲು ಬೆಳೆಯಲು ಇಲ್ಲಿವೆ ಬೆಸ್ಟ್ ಆಹಾರಗಳು! Hair Care

Hair Care  (ಸಾಂದರ್ಭಿಕ ಚಿತ್ರ)
Hair Care (ಸಾಂದರ್ಭಿಕ ಚಿತ್ರ)
Published on

ಪ್ರಮುಖ ಮುಖ್ಯಾಂಶಗಳು

  • ನಾವು ಎದುರಿಸುತ್ತಿರುವ ಅತಿದೊಡ್ಡ ಸೌಂದರ್ಯ ಮತ್ತು ಆರೋಗ್ಯ ಸಮಸ್ಯೆ ಎಂದರೆ ಅದು ಕೂದಲು ಉದುರುವಿಕೆ
  • ಬೆಳಿಗ್ಗೆ ಎದ್ದ ತಕ್ಷಣ ದಿಂಬಿನ ಮೇಲೆ ಬಿದ್ದಿರುವ ಕೂದಲಿನ ಎಳೆಗಳನ್ನು ನೋಡುವುದು ಅನೇಕರಲ್ಲಿ ಕೀಳರಿಮೆ ಉಂಟಾಗುತ್ತಿದೆ
  • ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡದ ಜೀವನಶೈಲಿ, ಮಾಲಿನ್ಯ ಮತ್ತು ಅಪೌಷ್ಟಿಕತೆಯೇ ಕಾರಣ
Hair Care: ಇಂದಿನ ಆಧುನಿಕ ಯುಗದಲ್ಲಿ ನಾವು ಎದುರಿಸುತ್ತಿರುವ ಅತಿದೊಡ್ಡ ಸೌಂದರ್ಯ ಮತ್ತು ಆರೋಗ್ಯ ಸಮಸ್ಯೆ ಎಂದರೆ ಅದು ಕೂದಲು ಉದುರುವಿಕೆ. ಬೆಳಿಗ್ಗೆ ಎದ್ದ ತಕ್ಷಣ ದಿಂಬಿನ ಮೇಲೆ ಬಿದ್ದಿರುವ ಕೂದಲಿನ ಎಳೆಗಳನ್ನು ನೋಡುವುದು ಅಥವಾ ಸ್ನಾನ ಮಾಡುವಾಗ ಕೈತುಂಬಾ ಬರುವ ಕೂದಲನ್ನು ಗಮನಿಸುತ್ತಿರುವುದರಿಂದ ಅನೇಕರಲ್ಲಿ ಕೀಳರಿಮೆ ಉಂಟಾಗುತ್ತಿದೆ. ಇದೆಲ್ಲಾ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡದ ಜೀವನಶೈಲಿ, ಮಾಲಿನ್ಯ ಮತ್ತು ಅಪೌಷ್ಟಿಕತೆಯೇ ಇದಕ್ಕೆ ಕಾರಣವಾಗಿದೆ.
ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಉದುರುವುದನ್ನು ನೀವೇನಾದರೂ ಗಮನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹದಿಂದ ಉಂಟಾಗುತ್ತಿರುವ ಸಮಸ್ಯೆಯಾಗಿರಬಹುದು. ಇದು ಪೌಷ್ಟಿಕಾಂಶದ ಕೊರತೆಯನ್ನು ಸೂಚಿಸುತ್ತದೆ. ನಿಮ್ಮ ದೇಹವು ಸರಿಯಾದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆದರೆ, ಕೂದಲು ಉದುರುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಹಾಗಿದ್ದರೆ, ಕೂದಲು ಉದರುವುದನ್ನು ತಡೆಗಟ್ಟಲು ನಿಮಗೆ ಬೇಕಾದ ಅಗತ್ಯ ಪೋಷಕಾಂಶಗಳು ಯಾವುದು ಎಂದು ನೋಡೋಣ ಬನ್ನಿ...

ಕಪ್ಪು ಎಳ್ಳು

ಕಪ್ಪು ಎಳ್ಳು ಕಬ್ಬಿಣ, ಸತು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದ್ದು, ಇದರ ಸೇವನೆಯು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಆದಾಗ್ಯೂ, ಕೂದಲಿನ ಅಂಗಾಂಶವನ್ನು ಸರಿಪಡಿಸುವಲ್ಲಿ ಸತುವು ಉತ್ತಮ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಪ್ರತಿದಿನ ಒಂದು ಚಮಚ ಎಳ್ಳನ್ನು ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮಗೇನಾದರೂ ಕೂದಲು ಉದುರುವ ಸಮಸ್ಯೆ ಏನಾದರೂ ಇದ್ದರೆ, 20-30 ಮಿಲಿ ತಾಜಾ ನೆಲ್ಲಿಕಾಯಿ ರಸ ಅಥವಾ ಮನೆಯಲ್ಲೇ ತಯಾರಿಸಿದ ಜಾಮ್​, ನೆಲ್ಲಿಕಾಯಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಇದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಹಲೀಮ್ ಬೀಜಗಳು

ಈ ಬೀಜಗಳು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ವಿಶೇಷವಾಗಿ ಕಬ್ಬಿಣದ ಕೊರತೆಯನ್ನು ಅನುಭವಿಸುತ್ತಿರುವವರು ಈ ಬೀಜಗಳನ್ನು ಸೇವಿಸುವುದರಿಂದ ಹಿಮೋಗ್ಲೋಬಿನ್​ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಒಂದು ಟೀ ಚಮಚ ಹಲೀಮ್ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸಿ.

ಬೀಟ್ರೂಟ್

ಬೀಟ್ರೂಟ್ ಒಟ್ಟಾರೆ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುವುದರ ಜೊತೆಗೆ ಕೂದಲಿನ ಕಿರುಚೀಲಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಸಲಾಡ್ ರೂಪದಲ್ಲಿ ಅಥವಾ ಹಸಿಯಾಗಿ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಕೂದಲಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ರಾಗಿ

ರಾಗಿಯಲ್ಲಿ ಕಬ್ಬಿಣ (Iron) ಮತ್ತು ಅಮೈನೋ ಆಮ್ಲಗಳು (Amino Acids) ಸಮೃದ್ಧವಾಗಿದ್ದು, ಇದು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ಒದಗಿಸುತ್ತದೆ. ಜೊತೆಗೆ ಕೂದಲಿನ ಬೇರನ್ನು ಭದ್ರಪಡಿಸಿ, ಅಕಾಲಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ. ರಾಗಿಯಲ್ಲಿರುವ ವಿಶಿಷ್ಟ ಪೋಷಕಾಂಶಗಳು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸಿ, ಹೊಸ ಕೂದಲು ಬೆಳೆಯಲು ಪ್ರೇರೇಪಿಸುತ್ತವೆ.
ಕೂದಲು ಉದುರುವಿಕೆ ಸಾಮಾನ್ಯವಾಗಿ ನಿರ್ದಿಷ್ಟ ಅಂಶದಿಂದ ಉಂಟಾಗುವುದಿಲ್ಲ. ಇದು ಹೆಚ್ಚಾಗಿ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ಜೀವನಶೈಲಿ ಅಂಶಗಳು ಮತ್ತು ಇತರ ಅಂಶಗಳಿಂದ ಉಂಟಾಗುತ್ತದೆ. ಕೂದಲು ಉದುರುವುದು ಮುಂದುವರಿದರೆ, ಚರ್ಮರೋಗ ತಜ್ಞರನ್ನು ಸಂಪರ್ಕಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net