More

    6 ದಿನಗಳ ಏರುಪ್ರವೃತ್ತಿಗೆ ಭಂಗ ತಂದ ಕರಡಿ ಕುಣಿತ: 434 ಅಂಕ ಕುಸಿತ ಕಂಡ ಸೂಚ್ಯಂಕ

    ಮುಂಬೈ: ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಮತ್ತು ನಿಫ್ಟಿ ಬುಧವಾರ ಕುಸಿತ ಕಂಡವು. ಆರು ದಿನಗಳ ಏರುಗತಿಯ ಓಟಕ್ಕೆ ಬುಧವಾರ ಬ್ರೇಕ್ ಬಿದ್ದಿತು. ಲಾಭದ ಬುಕಿಂಗ್ ಮತ್ತು ಮಿಶ್ರ ಜಾಗತಿಕ ಸೂಚನೆಗಳಿಂದ ಪ್ರಚೋದಿಸಲ್ಪಟ್ಟ ಮಾರಾಟದ ಕಾರಣದಿಂದಾಗಿ ಸೂಚ್ಯಂಕ ಕುಸಿಯಿತು.

    30-ಷೇರುಗಳ ಬೆಂಚ್‌ಮಾರ್ಕ್ ಸೂಚ್ಯಂಕವು 434.31 ಅಂಕಗಳು ಅಥವಾ ಶೇಕಡಾ 0.59ರಷ್ಟು ಕಡಿಮೆಯಾಗಿ 72,623.09 ಅಂಕಗಳಿಗೆ ಸ್ಥಿರವಾಯಿತು.
    ನಿಫ್ಟಿ ಸೂಚ್ಯಂಕವು 141.90 ಅಂಕಗಲು ಅಥವಾ ಶೇಕಡಾ 0.64ರಷ್ಟು ಕುಸಿದು 22,055.05 ಅಂಕಗಳಿಗೆ ಮುಟ್ಟಿತು. 50-ಷೇರುಗಳ ಈ ಸೂಚ್ಯಂಕವು ಮಂಗಳವಾರ 22,196.95 ಅಂಕಗಳ ಜೀವಿತಾವಧಿಯ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಎನ್‌ಟಿಪಿಸಿ ಷೇರು ಅತಿ ಹೆಚ್ಚು, ಶೇಕಡಾ 2.71 ರಷ್ಟು ನಷ್ಟ ಅನುಭವಿಸಿತು. ಪವರ್‌ಗ್ರಿಡ್, ವಿಪ್ರೋ, ಎಚ್‌ಸಿಎಲ್‌ಟೆಕ್, ಎಲ್ & ಟಿ ಮತ್ತು ಟೆಕ್ ಮಹೀಂದ್ರಾ ಷೇರುಗಳು ಕೂಡ ಹಿನ್ನಡೆ ಅನುಭವಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಟಾಟಾ ಸ್ಟೀಲ್, ಎಸ್‌ಬಿಐ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳ ಲಾಭ ಗಳಿಸಿದವು. ಟಾಟಾ ಸ್ಟೀಲ್ ಶೇ. 1.99 ಮತ್ತು ಎಸ್‌ಬಿಐ ಶೇ.1.51ರಷ್ಟು ಏರಿಕೆ ಕಂಡಿತು.

    ಏಷ್ಯಾದ ಷೇರು ಮಾರುಕಟ್ಟೆಗಳು ಮಿಶ್ರ ಪ್ರವೃತ್ತಿಯನ್ನು ಕಂಡವು. ಆದರೆ, ಐರೋಪ್ಯ ಮಾರುಕಟ್ಟೆಗಳು ಹೆಚ್ಚಾಗಿ ನಷ್ಟದಲ್ಲಿ ವಹಿವಾಟು ನಡೆಸಿದವು. ಅಮೆರಿಕ ಷೇರು ಮಾರುಕಟ್ಟೆಗಳು ಮಂಗಳವಾರದಂದು ನಷ್ಟ ಕಂಡವು.

    ಮಂಗಳವಾರದಂದು ಸೂಚ್ಯಂಕ ಸತತ ಆರನೇ ದಿನದಂದು ಏರುಮುಖ ಚಲನೆಯನ್ನು ಮುಂದುವರಿಸಿತ್ತು. ಅದು 349.24 ಅಂಕಗಳ ಹೆಚ್ಚಳದೊಂದಿಗೆ 73,057.40 ತಲುಪಿತ್ತು, ನಿಫ್ಟಿ ಕೂಡ 74.70 ಅಂಕಗಳ ಏರಿಕೆ ಕಂಡು 22,196.95ಕ್ಕೆ ಸ್ಥಿರವಾಗಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ ನಿವ್ವಳ ಮಾರಾಟಗಾರರಾಗಿದ್ದಾರೆ. ಏಕೆಂದರೆ ಅವರು 1,335.51 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದ ಟಾಟಾ ಇನ್ವೆಸ್ಟ್‌ಮೆಂಟ್ ಷೇರು: ವರ್ಷದಲ್ಲಿ 206%; ತಿಂಗಳಲ್ಲಿ 43 % ಲಾಭ ನೀಡಿದ ಸ್ಟಾಕ್​ಗೆ ಅಪಾರ ಬೇಡಿಕೆ

    ಟಾಟಾ ಪವರ್​ ಷೇರು 3 ತಿಂಗಳಲ್ಲಿ ಶೇ. 45% ಏರಿಕೆ: ಈಗ ಬ್ಲೂಸ್ಮಾರ್ಟ್​ ಜತೆ ವಿದ್ಯುತ್​ ಪೂರೈಕೆ ಒಪ್ಪಂದ

    ಅದಾನಿ ಕಂಪನಿಯ ಷೇರು ಬೆಲೆ ಕುಸಿತ: ಮುಂದಿನ ದಿನಗಳಲ್ಲಿ ದರ ಏರಿಕೆಯಾಗಲಿರುವ ಈ ಸ್ಟಾಕ್​ ಖರೀದಿಗೆ ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts