More

    ಅದಾನಿ ಕಂಪನಿಯ ಷೇರು ಬೆಲೆ ಕುಸಿತ: ಮುಂದಿನ ದಿನಗಳಲ್ಲಿ ದರ ಏರಿಕೆಯಾಗಲಿರುವ ಈ ಸ್ಟಾಕ್​ ಖರೀದಿಗೆ ತಜ್ಞರ ಸಲಹೆ

    ಮುಂಬೈ: ಅದಾನಿ ಕಂಪನಿಯ ಬಹುತೇಕ ಲಿಸ್ಟೆಡ್ ಕಂಪನಿಗಳ ಷೇರುಗಳ ಬೆಲೆ 500 ರೂಪಾಯಿಗಿಂತ ಹೆಚ್ಚು ಇದೆ. ಕೆಲವು ಷೇರುಗಳ ಬೆಲೆ 500 ರೂ.ಗಿಂತ ಕಡಿಮೆಯಿದೆ. ಇಂತಹ ಒಂದು ಷೇರು ಅದಾನಿ ಗ್ರೂಪ್ ಕಂಪನಿಯ ಅದಾನಿ ವಿಲ್ಮರ್ ಆಗಿದೆ. ಈ ಷೇರು ಹಲವು ದಿನಗಳಿಂದ ಒತ್ತಡದಲ್ಲಿದೆ. ಇದೇ ಸಮಯದಲ್ಲಿ, ದಲ್ಲಾಳಿಗಳು ಷೇರುಗಳ ಬೆಲೆ ಏರಿಕೆ ಪ್ರವೃತ್ತಿ ನಿರೀಕ್ಷಿಸುತ್ತಿದ್ದಾರೆ. ತಜ್ಞರ ಪ್ರಕಾರ, ಕಂಪನಿಯ ಷೇರುಗಳ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ. ಹೀಗಾಗಿ, ಈ ಷೇರು ಖರೀದಿಗೆ ಅವರು ಸಲಹೆ ನೀಡುತ್ತಾರೆ.

    ಬ್ರೋಕರೇಜ್‌ ಸಂಸ್ಥೆಯಾದ ಎಚ್​ಡಿಎಫ್​ಸಿ ಸೆಕ್ಯುರಿಟೀಸ್‌ನ ಹಿರಿಯ ಟೆಕ್ ಸಂಶೋಧನಾ ವಿಶ್ಲೇಷಕ ನಾಗರಾಜ ಶೆಟ್ಟಿ ಅವರು, ಅದಾನಿ ವಿಲ್ಮರ್ ಷೇರುಗಳನ್ನು 358-369 ರೂಗಳಲ್ಲಿ ಖರೀದಿಸಲು ಸಲಹೆ ನೀಡಿದ್ದಾರೆ. ಇದರ ಗುರಿ ಬೆಲೆ 402-438 ರೂ. ನಿಗದಿಪಡಿಸಿದ್ದಾರೆ. ಇದೇ ಸಮಯದಲ್ಲಿ, ಸ್ಟಾಪ್ ಲಾಸ್ ಅನ್ನು 345 ರೂ.ಗೆ ನಿಗದಿಪಡಿಸಿದ್ದಾರೆ. ಷೇರಿನ ಬೆಲೆಯು ಇತ್ತೀಚೆಗೆ ಗಮನಾರ್ಹವಾದ ಕುಸಿತ ಕಂಡಿದೆ.

    ಪ್ರಸ್ತುತ ಈ ಷೇರಿನ ಬೆಲೆ ರೂ 360-370 ರ ವ್ಯಾಪ್ತಿಯಲ್ಲಿ ಇದೆ. ಷೇರಿನ ಬೆಲೆ 24 ಮೇ 2023 ರಂದು 509.40 ರೂ. ಇತ್ತು. ಇದು ಷೇರುಪೇಟೆಯ 52 ವಾರಗಳ ಗರಿಷ್ಠ ಬೆಲೆ ಮಟ್ಟವೂ ಆಗಿದೆ. ನವೆಂಬರ್ 20, 2023 ರಂದು, ಷೇರಿನ ಬೆಲೆಯು ರೂ 285.85 ಕ್ಕೆ ತಲುಪಿತ್ತು, ಇದು 52 ವಾರಗಳ ಕನಿಷ್ಠ ಬೆಲೆ ಮಟ್ಟವಾಗಿದೆ.

    ಈ ಕಂಪನಿಯಲ್ಲಿ ಶೇ. 87.87 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಶೇಕಡಾ 12.13ರಷ್ಟು ಪಾಲನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದಾರೆ.

    ಇತ್ತೀಚೆಗೆ ಅದಾನಿ ವಿಲ್ಮರ್ ಲಿಮಿಟೆಡ್ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಆದಾಯದ ಕುಸಿತದಿಂದಾಗಿ, ಕಂಪನಿಯ ಲಾಭವು 18 ಪ್ರತಿಶತದಷ್ಟು ಕುಸಿದು 200.89 ರೂ.ಗೆ ತಲುಪಿದೆ.

    ಕಂಪನಿಯು ತನ್ನ ಅಕ್ಟೋಬರ್-ಡಿಸೆಂಬರ್ 2023 ತ್ರೈಮಾಸಿಕ ಫಲಿತಾಂಶಗಳನ್ನು ಷೇರು ಮಾರುಕಟ್ಟೆಗೆ ವರದಿ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭ 246.16 ಕೋಟಿ ರೂ. ಇತ್ತು.

    ಕಂಪನಿಯ ಒಟ್ಟು ಆದಾಯವು ಡಿಸೆಂಬರ್​ ತ್ರೈಮಾಸಿಕದಲ್ಲಿ ರೂ.12,887.60 ಕೋಟಿಗೆ ಇಳಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ.15,515.55 ಕೋಟಿ ಆದಾಯ ಇತ್ತು.

    ವಿಲ್ಮರ್ ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಅದಾನಿ ಕಂಪನಿಯು ಖಾದ್ಯ ತೈಲ ಮತ್ತು ಇತರ ಅನೇಕ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts