ನ.1ರಿಂದ ಸೋಮೇಶ್ವರದಲ್ಲಿ ಬೀಚ್ ಉತ್ಸವ

beach
Published on

ಬೈಂದೂರು: ಬೈಂದೂರು ಉತ್ಸವ ಪ್ರಯುಕ್ತ ನ.1ರಿಂದ 3ರ ತನಕ ಸೋಮೇಶ್ವರ ಪಡುವರಿ ಬೀಚ್‌ನಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಬೀಚ್ ಉತ್ಸವ ನಡೆಯಲಿದೆ.

ಪ್ರತಿ ದಿನ ಬೆಳಗ್ಗೆಯಿಂದ ಸಂಜೆಯ ತನಕ ನಡೆಯುವ ಬೀಚ್ ಉತ್ಸವದಲ್ಲಿ ವಿವಿಧ ಜಲ ಕ್ರೀಡೆ ನಡೆಯಲಿದೆ. ಸ್ಪೀಡ್ ಬೋಟ್, ಬನಾನ ರೈಡ್, ಪ್ಲೇ ಬೋರ್ಡ್, ಸೈಕಲ್ ಪೆಡ್ಲಿಂಗ್, ಪ್ಲೇ ಜೆಟ್ ಹಾಗೂ ವಿವಿಧ ಮನೋರಂಜನೆಯ ಕ್ರೀಡೆಗಳು ನಡೆಯಲಿದೆ.

ಬೀಚ್ ಉದ್ದಕ್ಕೂ ಆಕರ್ಷಣೀಯ ಲೈಟಿಂಗ್ ಎಲ್ಲರ ಗಮನ ಸೆಳೆಯಲಿದೆ. ನ.1ರಂದು ಕನ್ನಡ ರಥೋತ್ಸವದೊಂದಿಗೆ 28 ಇಲಾಖೆಗಳ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗೆ ಸಂಬಂಧಪಟ್ಟ ವಿಶೇಷತೆಗಳೊಂದಿಗೆ ಆಕರ್ಷಣೀಯ ಟ್ಯಾಬ್ಲೊ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕುಣಿತ ಮೆರವಣಿಗೆ ನಡೆಯಲಿದೆ.

ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ನಡೆಯುವ ಉತ್ಸವದಲ್ಲಿ ಬೈಂದೂರಿನ ಗ್ರಾಮಿಣ ಕಲೆ, ಸಂಸ್ಕೃತಿಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೂಡಿಕೆದಾರರನ್ನು ಸೆಳೆದು ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಉತ್ಸವದಲ್ಲಿ ವಿವಿಧ ಇಲಾಖೆಗಳ ಮಾಹಿತಿ ಕಾರ್ಯಾಗಾರ, ವಿಜ್ಞಾನ ವಸ್ತು ಪ್ರದರ್ಶನ, ಬೈಂದೂರು ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಿನ್ನೆಲೆಗಳ ವಿಚಾರಗೋಷ್ಠಿ, ಕವಿಗೋಷ್ಠಿ, ಕಂಬಳ, ನಾಟಕ, ಯಕ್ಷಗಾನ, ಕ್ರಷಿ ಇಲಾಖೆಗಳ ಮಾಹಿತಿ, ಆಹಾರ ಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net