Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು ತಮ್ಮ ದಣಿವು ನಿವಾರಿಸಿಕೊಳ್ಳಲು ತಂಪು ಪಾನೀಯ ಹಾಗೂ ಹಣ್ಣಿನ ಜ್ಯೂಸ್ಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯನ್ನೇ ಬಂಡವಾಳ ಮಾಡಿಕೊಂಡ ಅನೇಕರು ರಸ್ತೆಗೊಂದರಂತೆ ಜ್ಯೂಸ್ ಅಂಗಡಿಗಳನ್ನು ತೆರೆದಿದ್ದಾರೆ. ಆದರೆ, ಇಂತಹ ಮಳಿಗೆಗಳಿಂದ ಜ್ಯೂಸ್ ಖರೀದಿ ಮಾಡುವವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ತೆರೆದಿರುವ ಮಳಿಗೆಗಳಲ್ಲಿ ಕಲ್ಲಂಗಡಿ, ಕಬ್ಬಿನ ರಸ, ಶರಬತ್ತು ಸೇರಿದಂತೆ ಅನೇಕ ಪಾನೀಯಗಳನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳಲ್ಲಿ ಕಬ್ಬಿನ ರಸವು ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಏನೆಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಅನೇಕ ಕಬ್ಬಿನ ಜ್ಯೂಸ್ ಅಂಗಡಿಗಳಲ್ಲಿ, ರಸ್ತೆಯಿಂದ ಬರುವ ಧೂಳಿನ ನಡುವೆಯೇ ಜ್ಯೂಸ್ ಅನ್ನು ತಯಾರಿಸಲಾಗುತ್ತದೆ. ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರ ಮತ್ತು ಕಬ್ಬನ್ನು ರಸ್ತೆಬದಿಯ ತೆರೆದ ಪ್ರದೇಶಗಳಲ್ಲೇ ಇಡಲಾಗುತ್ತದೆ. ಇನ್ನು ತೆರೆದ ಅಂಗಡಿಗಳಲ್ಲಿ ಸಾಕಷ್ಟು ಶುದ್ಧ ನೀರು ಸಹ ಲಭ್ಯ ಇರುವುದಿಲ್ಲ. ಒಬ್ಬ ವ್ಯಕ್ತಿ ಬಳಸುವ ಗ್ಲಾಸ್‌ಗಳನ್ನು ತೊಳೆಯುವುದು ಸೇರಿದಂತೆ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದಿಲ್ಲ. ಹೀಗಾಗಿ ಇಂತಹ ಮಳಿಗೆಗಳಲ್ಲಿ ಜ್ಯೂಸ್ ಕುಡಿದರೆ ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಂತೆ.
ಇನ್ನು ಅಕ್ರಮ ಜ್ಯೂಸ್ ಅಂಗಡಿಗಳು ಮತ್ತು ತಿನಿಸುಗಳು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತವೆ. ಶೇಕ್ಸ್ ಮತ್ತು ಶರಬತ್‌ಗಳನ್ನು ವಿವಿಧ ಹೆಸರುಗಳಲ್ಲಿ ಮಾರಾಟ ಮಾಡುತ್ತಾರೆ. ಜ್ಯೂಸ್ ಆಕರ್ಷಕವಾಗಿ ಕಾಣಲಿ ಅಂತ ಕೃತಕ ಬಣ್ಣಗಳು ಮತ್ತು ಆರೋಗ್ಯಕ್ಕೆ ಹಾನಿಕಾರಕ ಇತರ ಉತ್ಪನ್ನಗಳನ್ನು ಸೇರಿಸುತ್ತಾರೆ. ಬಣ್ಣ ನೋಡಿ ಮರುಳಾಗಿ, ಅದನ್ನು ಸವಿದರೆ ಆರೋಗ್ಯಕ್ಕೆ ಹದಗೆಡುವುದು ಖಚಿತ.
ಅಂದಹಾಗೆ, ಪಾನೀಯಗಳಲ್ಲಿ ಬಹುಮುಖ್ಯ ಅಂಶ ಐಸ್. ಆದರೆ, ಹೆಚ್ಚಿನ ಸ್ಥಳಗಳಲ್ಲಿ, ಬಳಸದ ರೆಫ್ರಿಜರೇಟರ್‌ಗಳಲ್ಲಿ ಐಸ್ ಅನ್ನು ಇಡಲಾಗುತ್ತದೆ. ಇದು ಸಂಪೂರ್ಣವಾಗಿ ಅನಾರೋಗ್ಯಕರ ಪರಿಸ್ಥಿತಿ.
ಇದನ್ನೂ ಓದಿ: ತನ್ನ ಗಂಡನ ಬಗ್ಗೆ ಚಾಟ್ ಜಿಪಿಟಿ ಹೇಳಿದ ಮಾತು ಕೇಳಿ ಡಿವೋರ್ಸ್ ಕೊಡಲು ಮುಂದಾದ ಪತ್ನಿ! Chat GPT
ಇನ್ನು ಸಣ್ಣ ತಿಂಡಿಗಳ ಬಗ್ಗೆಯೂ ಜಾಗರೂಕರಾಗಿರಿ. ಏಕೆಂದರೆ, ಅನಧಿಕೃತ ಕೇಂದ್ರಗಳಲ್ಲಿ ವಿವಿಧ ರೀತಿಯ ಬಜ್ಜಿಗಳು ಹಾಗೂ ವಡೆಗಳು ಸೇರಿದಂತೆ ಅನೇಕ ರೀತಿಯ ಕರಿದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಬೆಳಗ್ಗೆ ಬೇಗನೆ ದ್ವಿಚಕ್ರ ವಾಹನಗಳಲ್ಲಿ ಹೋಟೆಲ್‌ಗಳು ಸೇರಿದಂತೆ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಅಂಗಡಿಗಳಲ್ಲಿ ಮಾರಾಟವಾಗುವ ಬೆಲೆಗಿಂತ ಕಡಿಮೆ ಬೆಲೆಗೆ ಲಭ್ಯವಿರುವುದರಿಂದ ಮತ್ತು ಅವುಗಳನ್ನು ತಯಾರಿಸುವ ತೊಂದರೆ ಸಹ ಇಲ್ಲದಿರುವುದರಿಂದ ಈ ತಿಂಡಿಗಳನ್ನು ಅನೇಕ ಹೋಟೆಲ್‌ಗಳು ಮತ್ತು ಟೀ ಅಂಗಡಿಗಳಲ್ಲಿ ಖರೀದಿಸಿ ಮಾರಾಟ ಮಾಡಲಾಗುತ್ತದೆ. ಕಡಿಮೆ ಗುಣಮಟ್ಟದ ಎಣ್ಣೆಯಲ್ಲಿ ಹುರಿದ ತಿಂಡಿಗಳು ಮತ್ತು ಅನೈರ್ಮಲ್ಯ ವಾತಾವರಣದಲ್ಲಿ ತಯಾರಿಸಿದ ಆಹಾರ ಪದಾರ್ಥಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಬಹುಮುಖ್ಯವಾಗಿ ಆಹಾರ ಮಾರಾಟ ಮಾಡುವ ಅಂಗಡಿಗಳನ್ನು ನಡೆಸಲು ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿ ಕಡ್ಡಾಯವಾಗಿದೆ. ಆದರೆ, ಅಂತಹ ಅನೇಕ ಕೇಂದ್ರಗಳು ಅಗತ್ಯ ದಾಖಲೆಗಳನ್ನು ಹೊಂದಿಲ್ಲ. ಕಳಪೆ ಸ್ಥಿತಿಯಲ್ಲಿ ಮಾರಾಟವಾಗುವ ಆಹಾರವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)
ಚಿನ್ನದ ಬೆಲೆ ಒಂದೇ ದಿನ ಭಾರೀ ಇಳಿಕೆ! ಎಷ್ಟು ಎಂದು ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ