ವೈದ್ಯಕೀಯ ಕ್ಷೇತ್ರಕ್ಕೆ ಬಿ.ಸಿ.ರಾಯ್ ದೊಡ್ಡ ಕೊಡುಗೆ ಅನನ್ಯ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ.ನಿಂಗರಾಜ್‌ಗೌಡ

12
Published on

ಮೈಸೂರು: ಜನರು ಆರೋಗ್ಯವಂತರಾಗಿದ್ದರೆ ದೇಶ ಸದೃಢವಾಗುತ್ತದೆ ಎಂದು ಡಾ.ಬಿ.ಸಿ. ರಾಯ್ ನಂಬಿದ್ದರು ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ.ನಿಂಗರಾಜ್‌ಗೌಡ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಮೈಸೂರು ಸೌತ್ ಈಸ್ಟ್ ಸಂಸ್ಥೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಮೊದಲ ವೈದ್ಯರಾಗಿ ಪ್ರಸಿದ್ಧಿ ಪಡೆದಿದ್ದ ಡಾ.ಬಿ.ಸಿ. ರಾಯ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಅಗಿದ್ದಾಗಲೂ ಬಡರೋಗಿಗಳ ಸೇವೆ ಮಾಡುತ್ತಿದ್ದರು. ಅವರ ಜನ್ಮದಿನ ಮತ್ತು ಮೃತರಾದ ದಿನ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ವೈದ್ಯಕೀಯ ಕ್ಷೇತ್ರದ ಸಂಘಟನೆಗೆ ರಾಯ್ ದೊಡ್ಡ ಕೊಡುಗೆಗಳನ್ನು ನೀಡಿದ್ದರು. 1926 ರಲ್ಲಿ ಮಹಿಳೆಯರು ಮತ್ತು ಮಕ್ಳಳಿಗಾಗಿ ಕೋಲ್ಕತ್ತಾದಲ್ಲಿ ಚಿತ್ತರಂಜನ್ ಸೇವಾ ಸದನ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರು. ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಮೆಡಿಕಲ್ ಕಾಲೇಜು ಸ್ಥಾಪನೆಗಳಲ್ಲಿ ಪ್ರಮುಖ ವಹಿಸಿದ್ದರು. ಗಾಂಧೀಜಿ ಹಾಗೂ ಜವಹರಲಾಲ್ ನೆಹರು ಅವರ ವೈಯಕ್ತಿಕ ವೈದ್ಯರು ಮತ್ತು ಸ್ನೇಹಿತರಾಗಿದ್ದರು. ಇವರ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಭಾರತ ರತ್ನ ನೀಡಿ ಗೌರವಿಸಲಾಗಿತ್ತು ಎಂದು ವಿವರಿಸಿದರು.

ಕ್ಲಬ್ ಅಧ್ಯಕ್ಷ ವೈ.ವಿ.ಮುರಳೀಧರ್ ಮಾತನಾಡಿ , ಸಮಾಜಕ್ಕೆ ವೈದ್ಯರ ಕೊಡುಗೆ ಹಾಗೂ ಮಹತ್ವ ಸ್ಮರಿಸಲು ಡಾ.ಬಿ.ಸಿ ರಾಯ್ ಹೆಸರಿನಲ್ಲಿ ದಿನಾಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಮೈಸೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಗಜಾನನ ಹೆಗಡೆ, ಆಹಾರ, ಸಂಸ್ಕರಣೆ ಮತ್ತು ಔಷಧ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ರವೀಂದ್ರ, ಕ್ಲಬ್ ಸದಸ್ಯರಾದ ಡಾ. ಸಂತೋಷ್, ಡಾ.ದೀಪಕ್‌ಗೌಡ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತ ಡಾ. ಗಜಾನನ ಹೆಗಡೆ ಮಾತನಾಡಿ, ಇಂದಿನ ಆಹಾರ ಪದ್ಧತಿಯಿಂದ ಸಮಾಜದ ಆರೋಗ್ಯ

ಕೆಡುತ್ತಿದೆ. ದೈಹಿಕ ಚಟುವಟಿಕೆಯೊಂದಿಗೆ ಉತ್ತಮ ಆಹಾರ ಕ್ರಮವನ್ನು ಬೆಳೆಸಿಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದರು.

ಕ್ಲಬ್ ಕಾರ್ಯದರ್ಶಿಗಳಾದ ಸುರೇಶ್, ಬಿ.ಆರ್.ವೆಂಕಟೇಶ್, ಮಾಜಿ ಅಧ್ಯಕ್ಷ ಎಂ.ಮೋಹನ್, ಗೋವರ್ಧನ್ ಯಾದವ್, ರವೀಂದ್ರ, ಮುರಳಿ, ವಾಸುದೇವನ್, ರಾಘವೇಂದ್ರ, ಮಂಜುನಾಥ್, ರಮೇಶ್‌ಬಾಬು, ಶಶಿಕಾಂತ್, ಶುಭಾ ಮುರಳೀಧರ್, ಡಾ.ಸಿಂಧು, ಗಿರೀಶ್, ನಾಗರಾಜು, ಜಯಪ್ರಕಾಶ್, ಆನಂದ್, ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net