ಬೆಂಗಳೂರು: ನಗರದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗೆ ತಡೆಹಾಕುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ವಿವಿಧ ಮಳಿಗೆ, ಗೋದಾಮುಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ 2,200 ಕೆ.ಜಿ. ಪ್ಲಾಸ್ಟಿಕ್ ವಶಕ್ಕೆ ಪಡೆದು 1.40 ಲಕ್ಷ ರೂ. ದಂಡ ವಿಧಿಸಿದೆ.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಒಂದು ಗೋದಾಮು ಹಾಗೂ 12 ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನಿಯಮ ಉಲ್ಲಂಸಿ ಏಕ ಬಳಕೆ ಪ್ಲಾಸ್ಟಿಕ್ ದಾಸ್ತಾನು ಮಾಡಿದ್ದ ವರ್ತಕರಿಗೆ ದಂಡ ವಿಧಿಸಿ ಅಲ್ಲಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್‌ಅನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಪದ್ಮನಾಭನಗರ ವ್ಯಾಪ್ತಿಯಲ್ಲಿ ರಾಜಲಕ್ಷ್ಮೀ ಪ್ಯಾಕೇಜಿಂಗ್ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಏಕ ಬಳಕೆಯ ಗ್‌ಟಿ ಪ್ಯಾಕಿಂಗ್ ರಾಪರ್, ಹ್ಯಾಂಡ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಸಿಲ್ವರ್ ಲೇಪಿತ ಪ್ಲೇಟ್, ಸಿಲ್ವರ್ ಕವರ್ ಮತ್ತು ಪ್ಲಾಸ್ಟಿಕ್ ರೋಲ್ ಸೇರಿ ಇನ್ನಿತರ 600 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 50 ಸಾವಿರ ರೂ. ದಂಡ ವಿಧಿಸಲಾಯಿತು.
ಕೆ.ಆರ್.ಮಾರುಕಟ್ಟೆ ಮತ್ತು ಅವೆನ್ಯೂ ರಸ್ತೆಯ ಲಿಯೋ ಪ್ಯಾಕಿಂಗ್, ಮನು ಮಾರ್ಕೆಟಿಂಗ್, ಪವನ್ ಪ್ಯಾಕೇಜಿಂಗ್, ಲಕ್ಷ್ಮಿ ಮಾರ್ಕೆಟಿಂಗ್, ಎಸ್.ಎಂ. ಜೈನ್ ಪ್ಯಾಕೇಜಿಂಗ್, ಮಹಾವೀರ್ ಪ್ಯಾಕೇಜಿಂಗ್, ಲಬ್ಡಿ ಪ್ಯಾಕೇಜಿಂಗ್, ಬಾಲಾಜಿ ಪ್ಲಾಸ್ಟಿಕ್ಸ್ ವ್ಯಾಪಾರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 1,500 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 80 ಸಾವಿರ ರೂ. ದಂಡ ವಿಧಿಸಲಾಯಿತು. ಮೈಸೂರು ರಸ್ತೆಯಲ್ಲಿ ಒಂದು ಮಳಿಗೆಯಲ್ಲಿ 100 ಕೆ.ಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 10 ಸಾವಿರ ರೂ. ದಂಡ ಹಾಕಲಾಯಿತು.
ಪಾಲಿಕೆಯ ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಮಾರ್ಷಲ್ ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳ ತಂಡವು ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಏಕ ಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್, ಪೇಪರ್ ಕವರ್, ನಾರಿನ ಬ್ಯಾಗ್ ಬಳಸುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
– ಬಸವರಾಜ್ ಕಬಾಡೆ, ಬಿಎಸ್‌ಡಬ್ಲ್ಯುಎಂಎಲ್ ಪ್ರಧಾನ ವ್ಯವಸ್ಥಾಪಕ