ರಾಜೀವ್ ಗಾಂಧಿ ಪುತ್ಥಳಿ ಮರುಸ್ಥಾಪನೆ; ಕಂಚಿನ ಪ್ರತಿಮೆಗೆ ಕೋಟ್ಯಂತರ ರೂ. ಅನುದಾನ

rajiv gandhi statue
Published on

ಬೆಂಗಳೂರು: ಈ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಭಿವೃದ್ಧಿಗೆ ಹಣವಿಲ್ಲಎಂದು ಹೇಳಿದ್ದರು. ಇದೀಗ ಬಿಬಿಎಂಪಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ರಾಜೀವ್ ಗಾಂಧಿ ಪುತ್ಥಳಿ ಮರುನಿರ್ಮಾಣ ಮಾಡಲು ಮುಂದಾಗಿದೆ.

ಬಿಬಿಎಂಪಿ, ಪುತ್ಥಳಿ ನಿರ್ಮಾಣಕ್ಕೆ ಹಾಗೂ ಸ್ಥಾಪನೆಗೆ ಬರೋಬ್ಬರಿ 1 ಕೋಟಿ 5 ಲಕ್ಷ 80 ಸಾವಿರ ಪುತ್ಥಳಿ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಅಲ್ಪಾವಧಿ ಟೆಂಡರ್ ಮೂಲಕ ಪುತ್ಥಳಿ ಮರು ಸ್ಥಾಪನೆಗೆ ಟೆಂಡ್ ಅಹ್ವಾನ ನೀಡಲಾಗಿದೆ.

ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಕಂಚಿನ ಪ್ರತಿಮೆಯನ್ನು ಮರುಸ್ಥಾಪಿಸಲು ಹೊರಟಿದೆ. ಈ ಹಿಂದೆ ಒಂದು ವರ್ಷ ಅನುದಾನ ಕೇಳಬೇಡಿ ಅಂತ ಶಾಸಕರಿಗೆ ಸೂಚನೆಯನ್ನು ನೀಡಿಲಾಗಿತ್ತು ಎನ್ನಲಾಗಿದ್ದು ಕಂಚಿನ ಪ್ರತಿಮೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಶೇಷಾದ್ರಿಪುರದಲ್ಲಿ ಬಿಬಿಎಂಪಿ, ಪುತ್ಥಳಿ ಸ್ಥಾಪನೆಗೆ ತಯಾರಿ ನಡೆಸಿದ್ದು, ಸರಿಯಾಗಿಯೇ ಇರುವ ಪುತ್ಥಳಿ ತೆಗೆದು, ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಶೆಷಾದ್ರಿಪುರದ ಸ್ವಸ್ತಿಕ್ ಸರ್ಕಲ್​ನಲ್ಲಿರುವ ರಾಜೀವ್ ಗಾಂಧಿ ಪುತ್ಥಳಿಯ ನವೀಕರಣದ ಹೆಸರಲ್ಲಿ ಹೊಸ ಪುತ್ಥಳಿ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net