BBKS11: ಕಿಚ್ಚನ ಜತೆ ಮನಬಿಚ್ಚಿ ಮಾತನಾಡಿದ ಲಾಯರ್​​ ಜಗದೀಶ್​! ಗಪ್​ಚುಪ್​ ಆದ 'ಬಿಗ್'​ ಮಂದಿ

ವಿಜಯವಾಣಿ-2024-10-20T221638.173
Published on

ಬೆಂಗಳೂರು: ಬಿಗ್​ ಬಾಸ್​ ಸೀಸನ್ 11ರ (BBKS11) 16 ಘಟಾನುಘಟಿ ಸ್ಪರ್ಧಿಗಳ ಪೈಕಿ 15 ಮಂದಿ ವಿರುದ್ಧ ಏಕಾಂಗಿಯಾಗಿ ವಾಗ್ದಾಳಿ ನಡೆಸಿದ ಲಾಯರ್​ ಜಗದೀಶ್​, ಹೆಣ್ಣು ನಿಂದನೆ ವಿಚಾರವಾಗಿ ಸದ್ಯ ಬಿಗ್​ ಮನೆಯಿಂದ ನೇರವಾಗಿ ಹೊರಬಿದ್ದರೆ, ದೈಹಿಕ ಹಲ್ಲೆ ಮಾಡಿದ ಕಾರಣ ರಂಜಿತ್​​ ಕೂಡ ಹೊರ ಬಂದಿದ್ದಾರೆ. ಇನ್ನು ಜಗದೀಶ್​ ಎಲಿಮಿನೇಟ್​ ಆಗಿದ್ದನ್ನು ಸಂಭ್ರಮಿಸಿ, ತಮ್ಮ ತಪ್ಪುಗಳನ್ನು ಮರೆತು ಟೀಕೆ ಮಾಡಿದ್ದ ಮನೆ ಮಂದಿಗೆ ತಕ್ಕ ಕ್ಲಾಸ್​ ತೆಗೆದುಕೊಂಡ ನಟ, ನಿರೂಪಕ ಕಿಚ್ಚ ಸುದೀಪ್​, ಸ್ಪರ್ಧಿಗಳ ಮಿಸ್ಟೇಕ್​ಗಳನ್ನು ತಮ್ಮದೇ ಖಡಕ್​ ಶೈಲಿಯಲ್ಲಿ ಅರ್ಥೈಸಿದರು.

ಇಂದು ನಡೆಯಬೇಕಿದ್ದ 'ಸೂಪರ್​ ಸಂಡೆ ವಿತ್​ ಕಿಚ್ಚ ಸುದೀಪ' ಸಂಚಿಕೆ ರದ್ದಾಗಿದ್ದು, 'ವಾರದ ಕಥೆ ಕಿಚ್ಚನ ಜತೆ' ಕಾರ್ಯಕ್ರಮದ ಮುಂದುವರಿದ ಭಾಗವೇ ಪ್ರಸಾರವಾಗಿದೆ. ಮನೆಯ ಸದಸ್ಯರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಲ್ಲಲ್ಲೇ ಅವರವರ ತಪ್ಪುಗಳನ್ನು ಎತ್ತಿಹಿಡಿದ ಸುದೀಪ್​, ತಿಳುವಳಿಕೆಯ ಮಾತುಗಳನ್ನು ಬಹಳ ಸರಳ ಹಾಗೂ ಸುಂದರವಾಗಿ ತಲುಪಿಸಿದರು. ಇನ್ನು ತಪ್ಪು ಮಾಡಿ ಮನೆಯಿಂದ ಹೊರ ಹೋದ ಸ್ಪರ್ಧಿಯನ್ನು ಮುಖಾಮುಖಿಯಾಗಿ ಮಾತನಾಡಿಸಿದ್ದು ಬಿಗ್​ ಬಾಸ್​ ಇತಿಹಾಸದಲ್ಲಿ ಇದೇ ಮೊದಲು.

ರಂಜಿತ್ ಒಳ್ಳೆಯ ಹುಡುಗ

ಎಲಿಮಿನೇಟ್​ ಆದ ಲಾಯರ್ ಜಗದೀಶ್​ ಅವರ ಅನಿಸಿಕೆ, ಅಭಿಪ್ರಾಯವನ್ನು ಪಡೆಯಲು ವಿಡಿಯೋ ಕಾಲ್​ ಮೂಲಕ ಸುದೀಪ್​ ಮಾತನಾಡಿಸಿದರು. ಈ ಸಂದರ್ಭದಲ್ಲಿ ಕಿಚ್ಚ​ ಅವರ ಮುಂದೆ ಮನಬಿಚ್ಚಿ ಮಾತನಾಡಿದ ಜಗದೀಶ್​, "ನಾನು ಮಾಡಿದ್ದು ಅಕ್ಷರಶಃ ತಪ್ಪು. ಮನೆಯ ಸದಸ್ಯರೊಂದಿಗೆ ಆ ರೀತಿ ನಡೆದುಕೊಳ್ಳಬಾರದಿತ್ತು. ಈ ವಿಷಯದಲ್ಲಿ ನನಗೆ ಬಹಳ ಬೇಸರವಿದೆ. ಮಾನಸ, ರಂಜಿತ್​ ಇವರೆಲ್ಲರೂ ಪಾಪ ಕಷ್ಟಪಟ್ಟು ಬಂದವರು. ನನಗೆ ಅಚ್ಚರಿಯಾಗಿದ್ದು, ನನ್ನ ಬೆನ್ನ ಹಿಂದಯೇ ರಂಜಿತ್​ರನ್ನು ಬಂದಿದ್ದು. ಇದು ನನಗೆ ಬಹಳ ಶಾಕ್ ಆಯಿತು. ರಂಜಿತ್ ಒಳ್ಳೆಯ ಹುಡುಗ" ಎಂದರು.

ನನ್ನಿಂದ ದೊಡ್ಡ ತಪ್ಪಾಗಿದೆ

"ರಂಜಿತ್​ರನ್ನು ಕಳಿಸಿದ್ದು ನನಗೆ ಅರಗಿಸಿಕೊಳ್ಳಲಾಗಲಿಲ್ಲ. ಆತ ಒಬ್ಬ ಒಳ್ಳೆಯ ವ್ಯಕ್ತಿ. ನಾನು ಹೊರಗೆ ಬಂದ ಬಳಿಕ ಇದನ್ನು ನೋಡಿ ತುಂಬ ಬೇಸರವಾಯ್ತು. ಖಂಡಿತ ನನ್ನಿಂದ ದೊಡ್ಡ ತಪ್ಪಾಗಿದೆ. ಇದಕ್ಕೆ ನಿಮಗೆ (ಕಿಚ್ಚ ಸುದೀಪ್) ಹಾಗೂ ಬಿಗ್​ ಬಾಸ್​ ತಂಡಕ್ಕೆ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net