BBKS10: ನಮ್ರತಾ ಬಗೆಗಿನ ಆಕರ್ಷಣೆ ಜೆನ್ಯೂನ್! ಮನೆಯಿಂದ ಹೊರಬಂದ ಸ್ನೇಹಿತ್​ ಮೊದಲ ಮಾತು..

ವಿಜಯವಾಣಿ (32)
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡದ ಸೀಸನ್​ 10ರ 9ನೇ ವಾರದಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್​, ಬಿಗ್ ಮನೆಯೊಳಗಿನ ವಿಶೇಷ ಅನುಭವ ಹಾಗೂ ಹಲವು ತಿಳಿಸಲಾಗದ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಆಪ್ತ ಸ್ನೇಹಿತೆ ನಮ್ರತಾ ಬಗ್ಗೆಗಿನ ಆಕರ್ಷಣೆ ನಿಜವೇ? ಎಂಬ ಪ್ರಶ್ನೆಗೆ ಸ್ನೇಹಿತ್ ಕೊಟ್ಟ ಉತ್ತರ ಹೀಗಿದೆ.

64 ದಿನಗಳ ಸುಧೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್‌, ಎರಡು ಬಾರಿ ನಾಯಕನಾಗಿ ಮಿಂಚಿ, ಎಲಿಮಿನೇಟ್​ ಆಗಿದ್ದಾರೆ. "ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಕಾಡ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು" ಎಂದು ಸ್ನೇಹಿತ್ ಹೇಳಿದರು.

"ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು. ನನ್ನ ಇನ್‌ಸ್ಟಿಂಕ್ಟ್‌ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್‌ ಈವತ್ತು ಎಲ್ಲೋ ಹೊಡಿತಿತ್ತು, ಈವತ್ತೇ ನನ್ನ ಲಾಸ್ಟ್‌ ಡೇ ಅಂತ. ನಮ್ರತಾ ಬಗ್ಗೆ ಏನೇನೋ ಹೇಳಿದ್ದೀನೋ, ಅದೆಲ್ಲವೂ ಜೆನ್ಯೂನ್. ನನಗೆ ಅವರ ಬಗ್ಗೆ ಫೀಲಿಂಗ್ ಇತ್ತು. ಅದನ್ನು ಹೇಳಿಕೊಂಡಿದ್ದೀನಿ. ಅದು ಎಲ್ಲರಿಗೂ ಗೊತ್ತು ಕೂಡ. ಅದನ್ನು ನಾನು ಕ್ಯಾಮೆರಾ ಮೊಮೆಂಟ್‌ಗೊಸ್ಕರ ಹೇಳಿದ್ದು ಅಲ್ಲವೇ ಅಲ್ಲ. ಅದು ಅವರಿಗೂ ಗೊತ್ತಿದೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net