BBKS10 'ನಮ್ರತಾ ನನಗೆ ಮೋಸ ಮಾಡಿಲ್ಲ'! ಈ ರೀತಿ ಮಾಡ್ಬೇಡಿ: ಸ್ನೇಹಿತ್ ಮನವಿ

ವಿಜಯವಾಣಿ - 2024-01-12T095714.286
Published on

ಬೆಂಗಳೂರು: ಬಿಗ್ ಬಾಸ್​ ಸೀಸನ್​ 10ರ ಮೊದಲ ದಿನದಿಂದಲೂ ಮನೆಯೊಳಗೆ ಉತ್ತಮ ಸ್ನೇಹವನ್ನು ಹೊಂದಿದ್ದ ನಮ್ರತಾ, ಸ್ನೇಹಿತ್ ಮತ್ತು ವಿನಯ್​ ಕಡೆಯವರೆಗೂ ಜತೆಯಾಗಿ ಇದ್ದು, ಒಬ್ಬರಿಗೊಬ್ಬರು ಒಳಿತನ್ನು ಬಯಸುತ್ತಿದ್ದರು. ಮನೆಯಿಂದ ಎಲಿಮಿನೇಟ್​ ಆಗಿ ಹೊರಹೋಗುವ ಮುನ್ನ ನಮ್ರತಾ ಜತೆಗಿನ ಒಡನಾಟವನ್ನು ನೆನೆದು ಭಾವುಕರಾಗಿದ್ದ ಸ್ನೇಹಿತ್​, ಇದೀಗ ಮನೆಯಿಂದ ಹೊರಬಂದ ಮೇಲೆ ಅವರ ಬಗ್ಗೆ ನಡೆಯುತ್ತಿರುವ ಟ್ರೋಲ್​ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

"ನಿಮ್ಮೆಲ್ಲರಲ್ಲೂ ಒಂದು ವಿನಂತಿ ದಯವಿಟ್ಟು ನಮ್ರತಾ ನನಗೆ ಮೋಸ ಮಾಡಿದ್ದಾರೆ ಎಂದು ಹೇಳಬೇಡಿ. ಯಾಕಂದ್ರೆ, ಅವರು ಯಾವತ್ತು ನನಗೆ ಫಿಲಿಂಗ್ಸ್​ ಇದೆ ಎಂದು ಹೇಳಲಿಲ್ಲ. ಇದ್ದಿದ್ರು ಅದು ಒನ್ ಸೈಡೆಡ್​ ಅಷ್ಟೇ! ನೀವೇನು ಟ್ರೋಲ್, ಮೀಮ್ಸ್​ ಮಾಡುತ್ತಿದ್ದೀರಿ, ಅದರಿಂದ ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲ, ನನಗೂ ತುಂಬ ನೋವಾಗುತ್ತಿದೆ" ಎಂದು ಹೇಳಿದ್ದಾರೆ.

ಗೆಳತಿ ನಮ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತ್ ಮಾಡಿದ ಮತ್ತೊಂದು ಮನವಿ ಈ ಕೆಳಗಿನ ವಿಡಿಯೋದಲ್ಲಿದೆ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net