BBKS10: 'ಕಾರಣ ಕೊಡೋದು ಹಾಗಲ್ಲ…ಹೀಗೆ'! ಸ್ಪರ್ಧಿಗಳ ಮಧ್ಯೆ ಮಸಿ ನೀರಿನ ಜಿದ್ದಾಜಿದ್ದಿ

BBKS10: 'ಕಾರಣ ಕೊಡೋದು ಹಾಗಲ್ಲ…ಹೀಗೆ'! ಸ್ಪರ್ಧಿಗಳ ಮಧ್ಯೆ ಮಸಿ ನೀರಿನ ಜಿದ್ದಾಜಿದ್ದಿ
Published on

ಬೆಂಗಳೂರು: ವಾರದ ಎರಡನೇ ದಿನಕ್ಕೆ ಬಂದೇಬಿಡ್ತು ನಾಮಿನೇಷನ್ ಗುಮ್ಮ! ಸದಸ್ಯರಿಗೆ ಮಸಿ ನೀರಿನ ಸ್ನಾನ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಬಿಗ್​ ಬಾಸ್​​ನ ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಂದು ಸದಸ್ಯರು ಕೂರಬೇಕು. ಎದುರು ನಿಂತಿರುವ ಸ್ಪರ್ಧಿಗಳಲ್ಲಿ ಯಾರಿಗೆ ಕುರ್ಚಿಯಲ್ಲಿ ಕೂತಿರುವ ಸದಸ್ಯರು ನಾಮಿನೇಟ್ ಆಗಬೇಕು ಅನಿಸುತ್ತದೆಯೋ ಅವರು ಬೋರ್ಡ್ ಎತ್ತಿ ಸೂಚಿಸಬೇಕು.

ಆ ನಂತರ ಮಸಿ ನೀರನ್ನು ಅವರ ಮೇಲೆ ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ನಾಮಿನೇಟ್ ಆಗುತ್ತಾರೆ. ಈ ಚಟುವಟಿಕೆಯಲ್ಲಿ ಮೈಕಲ್, ಕಾರ್ತಿಕ್‌ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದ್ರೆ, ಅವರು ಕೊಟ್ಟ ಕಾರಣ ಕಾರ್ತಿಕ್​ಗೆ ಸೂಕ್ತ ಅನಿಸಿಲ್ಲ. ಹಾಗಾಗಿ ಅದೇ ಕಾರಣ ಇಟ್ಟುಕೊಂಡು ಮೈಕಲ್ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಹಾಗೆಯೇ ಸಂಗೀತಾ, ಪ್ರತಾಪ್ ಸೇರಿದಂತೆ ಹಲವರ ಹೆಸರುಗಳು ಕೂಡ ಕೇಳಿಬಂದಿವೆ. ಯಾರ ಹೆಸರು ಹೆಚ್ಚು ಸಲ ಬಳಸಲಾಗಿದೆ. ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net