ಫೆ.2ರಂದು ಬಸ್ರೂರು ಬ್ರಹ್ಮರಥೋತ್ಸವ

narayani
Published on

ಕುಂದಾಪುರ: ಕುಂದಾಪುರ ತಾಲೂಕು ಬಸ್ರೂರಿನ ಮಂಡಿಕೇರಿ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 16ನೇ ವರ್ಷದ ಬ್ರಹ್ಮರಥೋತ್ಸವ ಜ.30ರಿಂದ ಫೆ.3ರವರೆಗೆ ಜರುಗಲಿದೆ. ಫೆ. 2ರಂದು ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಮಹಾ ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿಪ್ರದಾನ, ಸಂಜೆ ರಥಾರೋಹಣ, ಮಹಾಸಮಾರಾಧನೆ ಬಳಿಕ ಬ್ರಹ್ಮರಥೋತ್ಸವ. ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನ. ಬಳಿಕ ಪಂಡಿತ್ ಶ್ರೀ ವಾಗೀಶ್ ಭಟ್, ಬೆಂಗಳೂರು ಮತ್ತು ವೃಂದದಿಂದ ಭಜನ್ ಸಂಧ್ಯಾ. ಫೆ.3ರಂದು ಅವಭೃತ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net