ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ದಿನಗಳಲ್ಲಿ ನೀರು ಹಾಕಬಾರದಂತೆ ಗೊತ್ತೆ! | Basil Plant

Untitled design - 2025-09-09T202225.509
Published on

Basil Plant:ತುಳಸಿ ಗಿಡವನ್ನು ಹಿಂದೂ ಸಂಪ್ರದಾಯದಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಮತ್ತು ಇದನ್ನು ಸಾಮಾನ್ಯವಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ (ವಾಸ್ತುಶಾಸ್ತ್ರದ ಪ್ರಕಾರ) ಇಡುವುದು ಶುಭವೆಂದು ನಂಬಲಾಗುತ್ತದೆ. ಈಶಾನ್ಯ ದಿಕ್ಕನ್ನು ಶಕ್ತಿಯುತ ಮತ್ತು ಆಧ್ಯಾತ್ಮಿಕವಾಗಿ ಶುದ್ಧವೆಂದು ಕರೆಯಲಾಗುತ್ತದೆ. ಇದು ತುಳಸಿಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತುಳಸಿಯನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಗೆ ಸೌಭಾಗ್ಯ, ಶಾಂತಿ ಮತ್ತು ಧನಾತ್ಮಕ ಶಕ್ತಿ ಬರುತ್ತದೆ ಎಂದು ನಂಬಿಕೆಯಿದೆ. ಆದರೆ, ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡದಿರುವುದು ಒಳ್ಳೆಯದು, ಏಕೆಂದರೆ ಇದು ಅಶುಭವೆಂದು ಕೆಲವರು ಭಾವಿಸುತ್ತಾರೆ. ಗಿಡವನ್ನು ಯಾವಾಗಲೂ ಶುಚಿಯಾದ ಸ್ಥಳದಲ್ಲಿ, ಸೂರ್ಯನ ಬೆಳಕು ಮತ್ತು ಗಾಳಿಯ ಸಂಪರ್ಕವಿರುವಂತೆ ಇಡಬೇಕು.

ಜೋತಿಷ್ಯ ಪ್ರಕಾರ, ಭಾನುವಾರ ಮತ್ತು ಏಕಾದಶಿ ದಿನಗಳಲ್ಲಿ ನೀರು ಹಾಕಬಾರದಂತೆ. ಉಳಿದ ಎಲ್ಲಾ ದಿನಗಳಲ್ಲಿ ಅರ್ಪಿಸಬಹುದು. ಏಕಾದಶಿ ದಿನದಂದು ತುಳಸಿಯು ಭಗವಾನ್​ ವಿಷ್ಣು ದೇವರ ಪ್ರಾರ್ಥಿಸಿ ಉಪವಾಸ ಆಚರಿಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ, ಆ ಎರಡು ದಿನಗಳಲ್ಲಿ ನೀರು ಹಾಕಬಾರದಂತೆ.

ತುಳಸಿಗೆ ತಾಮ್ರದ ಪಾತ್ರೆಯಿಂದ ನೀರು ಹಾಕಿದ್ರೆ ಶುಭವಾಗುತ್ತೆ. ತಾಮ್ರದ ಪಾತ್ರೆ ಮೂಲಕ ತುಳಸಿ ಗಿಡಕ್ಕೆ ನೀರು ಹಾಕಿದ್ರೆ ಸಂಪತ್ತು ಮತ್ತು ಕುಟುಂಬದಲ್ಲಿ ಶಾಂತಿಯನ್ನು ಹೆಚ್ಚಿಸುತ್ತದೆ. ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net