ಅಪರೂಪದ ಜನಪ್ರತಿನಿಧಿ ಸಭಾಪತಿ ಬಸವರಾಜ ಹೊರಟ್ಟಿ: ವಿದ್ಯಾ ಗಡಗಿ

06GDG03
Published on

ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಯಾವುದೇ ಕಳಂಕವನ್ನು ಮೈಗಂಟಿಕೊಳ್ಳದೇ ಸರ್ವ ಸಮುದಾಯದ ಹಿತ ಕಾಯುತ್ತಾ ಬಂದಿರುವ ಸಭಾಪತಿ ಬಸವರಾಜ ಹೊರಟ್ಟಿಯವರು ನಾಡಿನ ಅಪರೂಪದ ಜನಪ್ರತಿನಿಧಿ ಎಂದು ೩೪ನೇ ವಾರ್ಡಿನ ನಗರಸಭೆ ಸದಸ್ಯೆ ವಿದ್ಯಾ ಗಡಗಿ ಅಭಿಪ್ರಾಯಪಟ್ಟರು.
ಅವರು ಸರಕಾರಿ ಪ್ರೌಢಶಾಲೆ ಸಿದ್ಧಲಿಂಗ ನಗರದಲ್ಲಿ ಬಸವರಾಜ ಹೊರಟ್ಟಿಯವರು ನೀಡಿದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದ ಅಡಿಯಲ್ಲಿ ಪಿಂಕ್ ಶೌಚಾಲಯ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬಸವರಾಜ ಹೊರಟ್ಟಿ ದಂಪತಿಗಳು ಗದುಗಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯನ್ನು ದತ್ತುಪಡೆದು ಇಡೀ ಶಾಲೆಯ ಕಳೆಯನ್ನೇ ಹೆಚ್ಚಿಸುವ ಮೂಲಕ ಜಿಲ್ಲೆಯಲ್ಲಿ ಒಂದು ಮಾದರಿ ಶಾಲೆಯನ್ನಾಗಿ ನಿರ್ಮಿಸಿದ್ದಾರೆ. ಹಾಗೂ ನನ್ನ ವಾರ್ಡಿನ ಕೀರ್ತಿಯನ್ನು ಸಹ ಹೆಚ್ಚಿಸಿದ್ದಾರೆ. ಹೀಗಾಗಿ ಅವರಿಗೆ ನಮ್ಮ ವಾರ್ಡಿನ ಸರ್ವ ಗುರುಹಿರಿಯರ ಪರವಾಗಿ ಹಾಗೂ ಶಾಲೆಯ ಗುರುವೃಂದದ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು. ಹೊರಟ್ಟಿಯವರ ಸಹಕಾರದಿಂದ ಈಗಾಗಲೇ ಈ ಶಾಲೆಯಲ್ಲಿ, ಮೈದಾನಕ್ಕೆ ಪೇವರ್ಸ ಮಕ್ಕಳಿಗೆ ಊಟದ ತಟ್ಟೆ, ಶಾಲೆಗೆ ಹಾಗೂ ಶಿಕ್ಷಕರಿಗೆ ಉಪಯುಕ್ತ ಪರಿಕರಗಳು, ತಮ್ಮ ಧರ್ಮಪತ್ನಿ ಶ್ರೀಮತಿ ಹೇಮಲತಾ ಹೆಸರಿನಲ್ಲಿ ಗಣಿತ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ ನಿರ್ಮಾಣ. ಈಗ ಬಾಲಕರಿಗೆ, ಬಾಲಕರಿಗೆ ಪ್ರತ್ಯೇಕ ಶೌಚಾಲಯ, ಹಾಗೂ ಸಿಬ್ಬಂದಿಗೆ ಶೌಚಾಲಯದ ನಿರ್ಮಾಣಕಾರ್ಯ ಆರಂಭವಾಗಿದ್ದು ಖುಷಿ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವ್ವ ಸೇವಾ ಟ್ರಸ್ಟ ಸಂಚಾಲಕರಾದ ಡಾ.ಬಸವರಾಜ ಧಾರವಾಡ ಎಂ.ಎ.ರಡ್ಡೇರ ಉಪನಿರ್ದೇಶಕರು, ಸಾ.ಶಿ.ಇಲಾಖೆ, ಗದಗ ಶ್ರೀಮತಿ ಸರಸ್ವತಿ ಡಿ. ಕನವಳ್ಳಿ ಶಿಕ್ಷಣಾಧಿಕಾರಿಗಳು, ಅಕ್ಷರದಾಸೋಹ ಜಿಲ್ಲಾ ಪಂಚಾಯತ, ಗದಗ ಆರ್.ಎಸ್.ಬುರಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗದಗ ಶಹರ, ಗದಗ ಶ್ರೀಮತಿ ವಿದ್ಯಾ ಗಡಗಿ ಸದಸ್ಯರು ಗದಗ ಬೆಟಗೇರಿ ನಗರಸಭೆ. ಮುಖ್ಯೋಪಾಧ್ಯಾಯರಾದ ಶ್ರೀಮತಿ ಪಾರ್ವತಿ ವಸ್ತçದ, ಶ್ರೀಮತಿ ಜಯಲಕ್ಷಿö್ಮÃ ಬಿ. ಅಣ್ಣಿಗೇರಿ, ಶ್ರೀಮತಿ ಎಸ್.ಆರ್.ಹನಮಗೌಡ್ರ, ಶ್ರೀಮತಿ ಎಸ್.ಜಿ.ಕುಲಗುಡಿ, ಎಮ್.ಆಯ್. ಶಿವನಗೌಡ್ರ, ಶ್ರೀಮತಿ ಎಂ.ಪಿ.ಸಾAಬ್ರಾಣಿ, ಶ್ರೀಮತಿ ಎಸ್.ಬಿ.ಗುಳೇದವರ, ಶ್ರೀಮತಿ ಎಸ್.ಎಂ.ಪತ್ತಾರ, ಶ್ರೀಮತಿ ಎಸ್.ಎಸ್.ಗಾಳಿ, ಆರ್.ವಾಯ್.ಬಸರಿ, ಶ್ರೀಮತಿ ಎಸ್.ಎ.ಬಾಣದ, ಶ್ರೀಮತಿ ಎಸ್.ಎ.ಗದ್ದನಕೇರಿ, ಎನ್.ಆರ್.ಶಿರೋಳ, ಶ್ರೀಮತಿ ಎಸ್.ಯು.ಕುಷ್ಟಗಿ, ಶ್ರೀಮತಿ ಜಿ.ಎನ್.ಅಳವಂಡಿ, ಶ್ರೀಮತಿ ಪಿ.ವ್ಹಿ.ದಾಸರ, ಪ್ರ.ದ.ಸ. ಶ್ರೀಮತಿ ಎಲ್.ಎಸ್.ಮಾಳೊತ್ತರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net