ಬೆಂಗಳೂರು: ಬಸವಣ್ಣನವರ ಸಾಮಾಜಿಕ ವಿಚಾರಧಾರೆಗಳು ಕೇವಲ ರಾಜ್ಯ, ದೇಶಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ಸಂಬಂಧಪಟ್ಟಿದ್ದು, ಬಸವಣ್ಣ ಜಗತ್ತಿನ ಸಾಂಸ್ಕೃತಿಕ ನಾಯಕ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಣ್ಣಿಸಿದ್ದಾರೆ.

ಜಾತಿ–ಮತವನ್ನು ಮೀರಿದ ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಅಡಿಪಾಯ ಹಾಕಿಕೊಟ್ಟ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ೋಷಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕ ಅಭಿನಂದನೆ ಸಲ್ಲಿಸಿದರು. ಬಸವತತ್ವ, ಬಸವ ಸಿದ್ಧಾಂತ ಅಥವಾ ಬಸವ ಮಾರ್ಗ ನಿತ್ಯಸತ್ಯವಾಗಿದ್ದು, ಮುಂದಿನ ನೂರು ವರ್ಷಗಳ ನಂತರವಾದರೂ ಇಡೀ ಜಗತ್ತು ಬಸವಣ್ಣವರ ಪಾದಕ್ಕೆ ಬಂದು ಬೀಳಲೆ ಬೇಕು. ಯಾಕೆಂದರೆ ಇಂದು ಪ್ರಪಂಚ ಕೇವಲ ಅಂಗಕ್ಕಾಗಿ ಬಡಿದಾಡುತ್ತಿದೆ. ಆದರೆ ಬಸವಣ್ಣ ಲಿಂಗಕ್ಕಾಗಿ ಹೋರಾಡಿದವರು. ಇಷ್ಟಲಿಂಗದ ಮೂಲಕ ಆತ್ಮಾನುಸಂಧಾನವನ್ನು ಸಾಧಿಸಿ ಮಹಾಲಿಂಗದ ಕಡೆ ಹೋಗಬೇಕಾದ ಸರಳ ಸೂತ್ರವನ್ನು ಜನರ ಕೈಗಿತ್ತಿದ್ದಾರೆ. ದೇಹವನ್ನೇ ದೇವಾಲಯವಾಗಿಸಿ ಭಕ್ತ–ಭಗವಂತನ ನಡುವೆ ಯಾವುದೇ ಮಧ್ಯಸ್ಥಿಕೆ ಇಲ್ಲದೆ ಸಾಧನೆ ಮಾಡುವ ಸರಳ ಮಾರ್ಗ ಬಸವಣ್ಣನವರದ್ದು ಎಂದು ಜತ್ತಿ ಹೇಳಿದರು.
ಸಮಾರಂಭದಲ್ಲಿ ಮಕ್ಕಳಕೂಟದ ಅಧ್ಯಕ್ಷರಾದ ಮೋಹನದೇವ ಆಳ್ವ ಅವರಿಗೆ ದಾಸೋಹ ರತ್ನ ಹಾಗೂ ವಚನ ಗಾಯಕ ತೋಟಪ್ಪ ಉತ್ತಂಗಿ ಅವರಿಗೆ 1ಲಕ್ಷ ನಗದು ಪುರಸ್ಕಾರ ಒಳಗೊಂಡ ವಾರ್ಷಿಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಸವ ಸಮಿತಿ ಮುಂಭಾಗ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬೇಲಿಮಠದ ಶ್ರಿಶಿವರುದ್ರ ಸ್ವಾಮೀಜಿ, ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್.ಪ್ರಸಾದ್, ರಾಣಿಸತೀಶ್, ಬಸವ ಸಮಿತಿಯ ಪ್ರಭುದೇವ ಚಿಗಟಗೇರಿ, ಸಚಿವ ಎಂ.ಬಿ.ಪಾಟೀಲರ ಆಪ್ತ ಕಾರ್ಯದರ್ಶಿ ಮಹಂತೇಶ್ ಬಿರಾದರ್ ಮತ್ತಿತರರು ಪಾಲ್ಗೊಂಡಿದ್ದರು.
ದಯವಿಲ್ಲದ ಧರ್ಮ ಯಾವುದಯ್ಯ ?
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮಾನವೀಯತೆ ಮೇಲೆ ನಡೆದ ಕ್ರೌರ್ಯವಾಗಿದೆ. ಬಸವಣ್ಣನವರು ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹೇಳಿದ್ದಾರೆ. ಇಂತಹ ೋರ ಕೃತ್ಯ ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು. ಘಟನೆಯಿಂದ 26 ಜನರ ಪ್ರಾಣಹಾನಿಯಾಗಿದ್ದು, ದೇಶದ ಪ್ರತಿಯೊಬ್ಬರ ರಕ್ತ ಕುದಿಯುವಂತಾಗಿದೆ. ಬಸವ ಸಮಿತಿಯಿಂದ ಪ್ರಧಾನಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ೋಷಿಸಿದರು. ಸಭೆಯಲ್ಲಿ ಮೃತರ ಆತ್ಮಶಾಂತಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಬಸವಣ್ಣನನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅವರು ಮಾಡಿರುವ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ೋಷಿಸಿದೆ. ಅವರು ಕೇವಲ ಸಾಮಾಜಿಕ ಕ್ರಾಂತಿ ಮಾಡಿದವರಲ್ಲ, ಸಮಾಜದ ಪರಿವರ್ತನೆಗೆ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವ, ಕೆಲಸವನ್ನು ಮಾಡಿದ್ದಾರೆ. ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳು.
–ಸಿದ್ದರಾಮಯ್ಯ, ಸಿಎಂ
ಯಲಹಂಕದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ; ಶಾಸಕ ಎಸ್.ಆರ್.ವಿಶ್ವನಾಥ ಭೂಮಿಪೂಜೆ