ಹಿಂದಿನ ಸಿಎಂ ಕೊಟ್ಟಿದ್ದನ್ನು ನಮ್ಮ ಸಿಎಂ ಕಿತ್ತುಕೊಂಡಿದ್ದಾರೆ: ಶಾಸಕ ಬಸನಗೌಡ ಪಾಟೀಲ್ ಅಸಮಾಧಾನ​

Basangouda Patil Yatnal
Basangouda Patil Yatnal
Published on

ವಿಜಯಪುರ: ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ ನೇತ್ರತ್ವದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಧಾನ ಸ್ಫೋಟ ಮಾಡಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂಪಾಯಿ ಬಂದಿತ್ತು. ಆದ್ರೆ ಕೋವಿಡ್ ಹೆಸರಲ್ಲಿ ಬಿಎಸ್​​ವೈ ಹಿಂಪಡೆದಿದ್ದಾರೆ‌ ಎಂದು ಬೇಸರ ಹೊರಹಾಕಿದ್ದಾರೆ. ಇದು ಬಿಎಸ್​ವೈ ಕೊಟ್ಟ ಹಣವಲ್ಲ, ಹಿಂದಿನ ಸಿಎಂ ನೀಡಿದ್ದ ಅನುದಾನ. ನಮ್ಮ‌ ಸಿಎಂ ತಡೆ ಹಿಡದಿದ್ದಾರೆ ಎಂದು ಯತ್ನಾಳ ಹೇಳಿದ್ರು.

ನಿನ್ನೆ ಆಲಮಟ್ಟಿಯಲ್ಲಿ ಸಿಎಂ‌ ನಡೆಸಿದ ಸಭೆಗೆ ಬಾರದೆ ಯತ್ನಾಳ ಗೈರಾಗಿದ್ದರು. ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಮಳೆಹಾನಿಯ ಕುರಿತು ಸಿಎಂ ಕರೆದಿದ್ದ ಸಭೆ. ಈ ವೇಳೆ ಸಿಎಂ ಸಭೆಗೆ ಯತ್ನಾಳ ಬಂದಿರಲಿಲ್ಲ. ಆದ್ರೆ, ಇಂದು ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸಿಎಂ ಮೇಲೆ ತಮಗಿರುವ ಮುನಿಸನ್ನು ಈ ರೀತಿಯಾಗಿ ಯತ್ನಾಳ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net