ಬಂಟ್ವಾಳ: ಮಾತೃ ಭಾಷೆಯಲ್ಲಿ ಸಂವಹನ ಕಡಿಮೆಯಾದಾಗ ಮೂಲಪದಗಳು ಕಣ್ಮರೆಯಾಗಿ ಭಾಷಾ ಸಂರಚನೆಗೆ ಧಕ್ಕೆಯಾಗುತ್ತದೆ. ಆ ಮೂಲಕ ಭಾಷೆ ಅಳಿವಿನ ಹಾದಿ ಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ, ಅಬ್ದುಲ್ ಮಜೀದ್ ಎಸ್. ಅಭಿಪ್ರಾಯಪಟ್ಟರು.
ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಗುರುವಾರ ಬ್ರಹ್ಮರಕೂಟ್ಲುವಿನಲ್ಲಿ ಬ್ಯಾರಿ ಭಾಷಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಮೊಹಮ್ಮದ್ ತುಂಬೆ ಶುಭಾಶಯ ಕೋರಿದರು. ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ ಬ್ಯಾರಿ ಭಾಷೆಯ ವೈಶಿಷ್ಟೃ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಸೀರ್ ಅಡೆಕಲ್, ಮೊಹಮ್ಮದ್ ಕೊಲ್ಲರಕೋಡಿ, ಅಬ್ದುಲ್ ಹಮೀದ್ ಮಾಣಿ, ನೂರುದ್ದೀನ್ ಅಕ್ಕರಂಗಡಿ, ಹೈದರ್ ಪಡಂಗಡಿ, ತಾಹಿರಾ ತುಂಬ, ಜಮೀಲಾ ತುಂಬೆ, ಲುಕ್ಮಾನ್ ವಿಟ್ಲ, ಶೇಖ್ ಆದಂ ಸಾಹೇಬ್ ನೆಲ್ಯಾಡಿ, ಹಸೀನಾ ಮಲ್ನಾಡ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಹಾರೀಶ್ ಬಾಂಬಿಲ ಸ್ವಾಗತಿಸಿದರು. ಸಂಘದ ಬಂಟ್ವಾಳ ಘಟಕಾಧ್ಯಕ್ಷ ಮೊಹಮ್ಮದ್ ಮನಾಝಿರ್ ಮುಡಿಪು ವಂದಿಸಿದರು. ಶಿಕ್ಷಕ ಅಕ್ಬರ್ ಉಳಿಬೈಲು ಕಾರ್ಯಕ್ರಮ ನಿರೂಪಿಸಿದರು.