

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ರಂಗ ಪೂಜೆ, ಶ್ರೀ ದೇವರ ಉತ್ಸವ ಬಲಿ, ವಸಂತ ಪೂಜೆ ಕ್ಷೇತ್ರದ ತಂತ್ರಿ ಗೋಪಾಲಕೃಷ್ಣ ಅವರ ಪ್ರಧಾನ ಪೌರೋಹಿತ್ಯದಲ್ಲಿ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ಸಹಕಾರದೊಂದಿಗೆ ನಡೆಯಿತು.
ಪಂಜ ಭಾಸ್ಕರ ಭಟ್, ಕ್ಷೇತ್ರದ ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಅತುಲ್ ಕುಡ್ವ, ಸತೀಶ್ ಭಂಡಾರಿ, ಗೋಪಾಲಕೃಷ್ಣ ಭಟ್, ಶ್ರೀನಾಥ್ ಭಟ್ ಹೆಜಮಾಡಿ, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು, ದಿನೇಶ್ ಸುವರ್ಣ ಬೆಳ್ಳಾಯರು, ವಿದ್ವಾನ್ ನಾಗೇಶ್ ಬಪ್ಪನಾಡು, ಚಂದ್ರಶೇಖರ್ ಸುವರ್ಣ ಶಿವಶಂಕರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಈ ವರ್ಷದ ತಿರುಗಾಟವೂ ಮುಕ್ತಾಯಗೊಂಡಿತು.