

ಶಿರ್ವ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಮಂಗಳೂರಿನ ಇಂಡಿಯನ್
ಸೊಸೈಟಿ ಫಾರ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ಸಂಸ್ಥೆಯೊಂದಿಗೆ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ ತರಬೇತಿ ನೀಡುವ ಉದ್ದೇಶದಿಂದ ಒಡಂಬಡಿಕೆಗೆ ಮಾಡಿಕೊಳ್ಳಲಾಯಿತು.
ಎರಡೂ ಸಂಸ್ಥೆಗಳು ಇಂದಿನ ಕ್ರಿಯಾತ್ಮಕ ವ್ಯಾಪಾರ ಪರಿಸರದ ಸಾಮಾಜಿಕ ಅಗತ್ಯಗಳಿಗೆ ಹೊಂದಿಕೆಯಾಗುವ ಪರಿವರ್ತಿತ ಕಲಿಕೆ ಅನುಭವಗಳನ್ನು ಅಭಿವೃದ್ಧಿಪಡಿಸಲು ತಮ್ಮ ಬದ್ಧತೆ ತಿಳಿಸುವ ಉದ್ದೇಶದಿಂದ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು, ಕಲಿಕಾ ಸಾಮಗ್ರಿಗಳ ವಿನಿಮಯ, ವೃತ್ತಿಪರ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಕಾರಣವಾಗುವ ಕಾರ್ಯಾಗಾರಗಳು ಮತ್ತು ತರಬೇತಿಗಳನ್ನು ನಡೆಸುವುದು, ಎರಡು ಸಂಸ್ಥೆಗಳು ಶೈಕ್ಷಣಿಕ ಫಲಿತಾಂಶವನ್ನು ಹೆಚ್ಚಿಸಲು, ವಿಕಸನಗೊಳ್ಳುತ್ತಿರುವ ಉದ್ಯಮದ ಬೇಡಿಕೆಗಳು ಮತ್ತು ಸ್ಪರ್ಧಾತ್ಮಕ ಕೆಲಸಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಉದ್ಯೋಗವಕಾಶ ಸುಧಾರಿಸಲು ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಎಂಬಿಎ ವಿಭಾಗದ ನಿರ್ದೇಶಕ ಡಾ.ಸೂರಜ್ ಫ್ರಾನ್ಸಿಸ್ ನೋರೊನ್ಹಾ, ಎಂಬಿಎ ವಿಭಾಗದ ಆಡಳಿತ ಮತ್ತು ಉದ್ಯೋಗಾವಕಾಶ ಅಧಿಕಾರಿ ವಿದ್ಯಾ ಭಟ್, ಐಎಸ್ಟಿಡಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.