ಶಾಲಾ ಹಂತದಿಂದಲೇ ಬ್ಯಾಂಕಿಂಗ್ ಜ್ಞಾನ

makkala sabhe
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಶಾಲಾ ಹಂತದಿಂದಲೇ ಬ್ಯಾಂಕಿಂಗ್ ವ್ಯವಸ್ಥೆ ಪರಿಚಯಿಸುವ ಮೂಲಕ ಮಕ್ಕಳಿಗೆ ಆನ್ಲೈನ್ ಬ್ಯಾಂಕಿಂಗ್‌ನ ಸಾಮಾನ್ಯ ಅರಿವು ಹಾಗೂ ತೀರಾ ಅಗತ್ಯ ಎಂದು ಮಾಹಿತಿ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಅರ್ಪಿತಾ ಹೇಳಿದರು.

ಕಾಡೂರು ಗ್ರಾಮ ಪಂಚಾಯಿತಿಯಲ್ಲಿ 2024ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿ, ಇಂದಿನ ಕಾಲದಲ್ಲಿ ಸ್ಕಾೃನ್ ಪಾವತಿ ಸಹಿತ ಹಣಕಾಸು ನಿರ್ವಹಣೆಯ ಆಧುನಿಕ ವ್ಯವಸ್ಥೆಯ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಅಗತ್ಯ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಮೀರಾ, ಕಾಡೂರು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ರಾವ್ ಮಾತನಾಡಿದರು. ಅಧ್ಯಕ್ಷ ಜಲಂಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ಪಾಂಡುರಂಗ ಶೆಟ್ಟಿ, ಅಮಿತಾ, ಅಮ್ಮಣ್ಣಿ, ಗಿರಿಜಾ, ವಿಜಯಾ ಮರಕಾಲ, ಸತೀಶ್ ಕುಲಾಲ್, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ಎಸ್.ಎಲ್.ಆರ್.ಎಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ.ನಿರೂಪಿಸಿದರು.

ಇಲಾಖೆ ಅಧಿಕಾರಿಗಳಿಂದ ಮಾಹಿತಿ

ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಆರೋಗ್ಯಕ್ಕೆ ಪೂರಕವುಳ್ಳ ಅಭ್ಯಾಸಗಳ ಕುರಿತು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ, ಶಿಕ್ಷಣ ಇಲಾಖೆಯ ನಾಗರಾಜ್ ಭಟ್ ತಮ್ಮ ಇಲಾಖೆ ಕುರಿತು ಮಾಹಿತಿ ನೀಡಿದರು. ಅರಿವು ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳೂ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಸುತ್ತಿದ್ದು, ಖಿನ್ನತೆ, ಸಂವಹನ ಸಮಸ್ಯೆಗಳನ್ನು ಎದುರಿಸುವ ಹಂತವನ್ನೂ ಹಲವು ವಿದ್ಯಾರ್ಥಿಗಳು ತಲುಪಿದ್ದಾರೆ. ಈ ಬಗ್ಗೆ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. -ಮೀರಾ, ಸಂಪನ್ಮೂಲ ವ್ಯಕ್ತಿ https://www.vijayavani.net/bombers-are-brothers-of-congressmen https://www.vijayavani.net/special-gram-sabha-for-the-disabled-in-mazur

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net