

ದೆಹಲಿ: ಗ್ರಾಹಕರ ಹಿತದೃಷ್ಟಿಯಿಂದ ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಬ್ಯಾಂಕ್ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಜೂನ್ ತಿಂಗಳು ಮುಕ್ತಾಯವಾಗಲು ಕೆಲವು ದಿನಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಆರ್ಬಿಐ ಜುಲೈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜುಲೈ ತಿಂಗಳ ರಜಾ ಪಟ್ಟಿಯ ಪ್ರಕಾರ ಭಾರತದಲ್ಲಿ ಒಟ್ಟು 15 ದಿವಸ ಬ್ಯಾಂಕ್ಗೆ ರಜೆ ಇರಲಿದ್ದು. ವಾರದ ರಜೆ, ರಾಜ್ಯಗಳ ಪ್ರಾದೇಶಿಕ ರಜೆ ಹಾಗೂ ಆಯಾ ರಾಜ್ಯಗಳ ಹಬ್ಬಗಳಿಗನುಸಾರವಾಗಿ ಆರ್ಬಿಐ ಬಿಡುಗಡೆ ಮಾಡಿರುವ ಮುಂದಿನ ತಿಂಗಳ ರಜಾ ದಿನಗಳ ಪಟ್ಟಿ ಇಂತಿದೆ:
2023ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:
ಜುಲೈ 2: ಭಾನುವಾರ
ಜುಲೈ 5: ಗುರು ಹರಗೋಬಿಂದ್ ಜಿ ಅವರ ಜನ್ಮದಿನ (ಜಮ್ಮು ಮತ್ತು ಶ್ರೀನಗರ)
ಜುಲೈ 6: ಮಿಜೋ ಮಹಿಳಾ ಏಕೀಕರಣ ಕಾರ್ಯಕ್ರಮ ದಿನ (ಮಿಜೋರಾಂ)
ಜುಲೈ 8: ಎರಡನೇ ಶನಿವಾರ
ಜುಲೈ 9: ಭಾನುವಾರ
ಜುಲೈ 11: ಕೇರ್ ಪೂಜಾ (ತ್ರಿಪುರ)
ಜುಲೈ 13: ಭಾನು ಜಯಂತಿ (ಸಿಕ್ಕಿಂ)
ಜುಲೈ 16: ಭಾನುವಾರ
ಜುಲೈ 17: ಯು.ತಿರೋತ್ ಸಿಂಗ್ ದಿನ (ಮೇಘಾಲಯ)
ಜುಲೈ 21: ದ್ರುಕ್ಪಾ ಶೆ ಜಿ (ಸಿಕ್ಕಿಂ)
ಜುಲೈ 22: ನಾಲ್ಕನೇ ಶನಿವಾರ
ಜುಲೈ 23: ಭಾನುವಾರ
ಜುಲೈ 28: ಅಶೂರಾ (ಜಮ್ಮು ಮತ್ತು ಶ್ರೀನಗರ)
ಜುಲೈ 29: ಮೊಹರಂ (ತ್ರಿಪುರ, ಮಿಜೋರಾಂ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ನವದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಹಲವಾರು ನಗರಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಡುತ್ತವೆ)
ಜುಲೈ 30: ಭಾನುವಾರ
ಈ ರಜೆಗಳು ಪ್ರಾದೇಶಿಕಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್)