ವೆಸ್ಟ್ ಇಂಡೀಸ್ ತಂಡ ಮಣಿಸಿ ಏಕದಿನ ಸರಣಿ ಗೆದ್ದ ಬಾಂಗ್ಲಾದೇಶ

bangla and west indies match for web
Published on

ಢಾಕಾ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಭುತ್ವ ಸಾಧಿಸಿದ ಬಾಂಗ್ಲಾದೇಶ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆತಿಥೇಯ ಬಾಂಗ್ಲಾದೇಶ ತಂಡ 3 ಪಂದ್ಯಗಳ ಸರಣಿಯನ್ನು 2-0 ಯಿಂದ ಮುನ್ನಡೆ ಸಾಧಿಸಿ ವಶಪಡಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ 6 ವಿಕೆಟ್‌ಗಳಿಂದ ಜಯ ದಾಖಲಿಸಿತ್ತು.

ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 43.3 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 33.2 ಓವರ್‌ಗಳಲ್ಲಿ 3 ವಿಕೆಟ್‌ಗೆ 149 ರನ್‌ಗಳಿಸಿ ಗೆಲುವಿನ ನಗೆ ಬೀರಿತು. 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಸೋಮವಾರ ನಡೆಯಲಿದೆ.

ವೆಸ್ಟ್ ಇಂಡೀಸ್: 43.3 ಓವರ್‌ಗಳಲ್ಲಿ 148 (ರೊವ್ಮಾನ್ ಪೊವೆಲ್ 41, ನಿಕೃಮಾ ಬೊನ್ನೆರ್ 20, ಮೆಹಿದಿ ಹಸನ್ ಮಿರ್ಜಾ 25ಕ್ಕೆ 4, ಮುಸ್ತಾಫಿಜರ್ ರಹಮಾನ್ 15ಕ್ಕೆ 2, ಶಕೀಬ್ ಅಲ್ ಹಸನ್ 30ಕ್ಕೆ 2), ಬಾಂಗ್ಲಾದೇಶ: 33.2 ಓವರ್‌ಗಳಲ್ಲಿ 3 ವಿಕೆಟ್‌ಗೆ 149 (ತಮೀಮ್ ಇಕ್ಬಾಲ್ 50, ಶಕೀಬ್ ಅಲ್ ಹಸನ್ 43*, ಲಿಟೊನ್ ದಾಸ್ 22, ಅಕೀಲ್ ಹೊಸೀನ್ 45ಕ್ಕೆ 1, ಜೇಸನ್ ಮೊಹಮದ್ 29ಕ್ಕೆ 1, ರೇಮೊನ್ ರೀಫೆರ್ 18ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net