ಕಪ್ಪತಗುಡ್ಡದ ಬಂಗಾರ ಕೊಳ್ಳದಲ್ಲಿ ನಂದಿಮುಖಿಯಾಗಿ ಹರಿಯುತ್ತಿದೆ ಬಂಗಾರ ತೀರ್ಥ

14MDG3 NANDIVERI
Published on

ಮುಂಡರಗಿ: ಕಪ್ಪತಗುಡ್ಡದ ನಂದಿವೇರಿಮಠದ ಶ್ರೀ ನಂದಿವೇರಿ ಬಸವಣ್ಣನ ಎದುರಿನ ಬಂಗಾರ ಕೊಳ್ಳದಲ್ಲಿ ಬಂಗಾರ ತೀರ್ಥದ ಜೀಣೋದ್ಧ್ದಾರ ಕೈಂಕರ್ಯವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಕೈಗೊಂಡಿದ್ದರು. ಅವರ ಕನಸು ನನಸಾಗಿದೆ. ಅನೇಕ ದಾನಿಗಳ ಸಹಕಾರದಿಂದ ಬಂಗಾರ ತೀರ್ಥವು ನಂದಿಮುಖಿಯಾಗಿ ಹರಿಯಲು ಪ್ರಾರಂಭವಾಗಿದ್ದು, ಸಂತಸ ತಂದಿದೆ.
ಈ ಬಂಗಾರ ಕೊಳ್ಳದಲ್ಲಿ ಜಲ ಸಂಗ್ರಹಿಸಲು ಶತ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದಾಗಿ ನೈಸರ್ಗಿಕವಾಗಿ ಬಂಗಾರ ಕೊಳ್ಳವು ತುಂಬಿ ನಂದಿ ಮುಖಿ ಮುಖೇನ ಹರಿಯಲು ಪ್ರಾರಂಭವಾಗಿದೆ. ಕಪ್ಪತಗುಡ್ಡದ ಮಡಿಲಿನಲ್ಲಿರುವ ಶ್ರೀ ನಂದಿವೇರಿ ಬಸವಣ್ಣನ ಎದುರಿನ ಈ ಬಂಗಾರ ಕೊಳ್ಳದಿಂದ ಪ್ರವಹಿಸುತ್ತಿರುವ ಬಂಗಾರ ತೀರ್ಥದ ದರ್ಶನ ಅನೇಕ ಪ್ರವಾಸಿಗರು ಪಡೆಯುತ್ತಿದ್ದಾರೆ. ತೀರ್ಥಪೋ›ಕ್ಷಣೆಯಿಂದ ಪಾವನರಾಗುತ್ತಿದ್ದಾರೆ.
ಈ ಪುಣ್ಯ ಕಾರ್ಯಕ್ಕೆ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರಿಗೆ ಶ್ರೀನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅಭಿನಂದನಾಶೀರ್ವಾದ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net