More

    ಆರ್​ಸಿಬಿ ವಿರುದ್ಧ ಗೆದ್ದು ಬೀಗಿದ ಸಿಎಸ್​ಕೆ: ವಿರಾಟ್​ ಪಡೆಯ ಹ್ಯಾಟ್ರಿಕ್​ ಕನಸು ಭಗ್ನ!

    ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಟೂರ್ನಿಯ 44ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ಸ್​ ಕಿಂಗ್ಸ್​ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ (50), ಎಬಿ ಡಿವಿಲಿಯರ್ಸ್​ (39) ಹಾಗೂ ದೇವದತ್​ ಪಡಿಕ್ಕಲ್​ (22) ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 145 ರನ್​ ಕಲೆ ಹಾಕಿತು.

    ಇದನ್ನೂ ಓದಿ: ಉಡುಪಿ ಯುವತಿ ಅನುಮಾನಾಸ್ಪದ ಸಾವು ಪ್ರಕರಣ: ಕಾಲ್​ ರೆಕಾರ್ಡ್ಸ್​ನಲ್ಲಿ ಸ್ಫೋಟಕ ಮಾಹಿತಿ..!

    146ರನ್​ ಗುರಿ ಬೆನ್ನತ್ತಿದ ಸಿಎಸ್​ಕೆ ರುತುರಾಜ್​ ಗಾಯ್ಕ್​ವಾಡ್​ (65(), ಅಂಬಾಟಿ ರಾಯುಡು (39), ಫಾಫ್​ ಡುಪ್ಲೆಸಿಸ್​ (25) ಮತ್ತು ನಾಯಕ ಎಂ ಎಸ್​ ಧೋನಿ (19*) ಅಮೋಘ ಬ್ಯಾಟಿಂಗ್​ ನೆರವಿನಿಂದ 18.4 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 150 ರನ್ ಕಲೆ ಹಾಕುವ ಮೂಲಕ ಗೆಲುವಿನ ನಗೆಬೀರಿತು.

    ಈ ಹಿಂದಿನ ಎರಡು ಪಂದ್ಯದಗಳಲ್ಲಿ ರಾಜಸ್ಥಾನ ರಾಯಲ್ಸ್​ ಹಾಗು ಕೆಕೆಆರ್​ ಎದುರು ಭರ್ಜರಿ ಜಯ ದಾಖಲಿಸಿರುವ ಆರ್​ಸಿಬಿಯ ಹ್ಯಾಟ್ರಿಕ್​ ಕನಸು ಭಗ್ನಗೊಂಡಿದೆ.

    ಆರ್​ಸಿಬಿ ಪರ ಕ್ರಿಸ್​ ಮೋರಿಸ್​ ಹಾಗೂ ಯಜುವೇಂದ್ರ ಚಹಾಲ್​ ತಲಾ 1 ವಿಕೆಟ್​ ಕಬಳಿಸಿದರೆ, ಚೆನ್ನೈ ಪರ ಸ್ಯಾಮ್​ ಕುರನ್​ (3), ಡಿ ಚಹಾರ್​ (2) ಮತ್ತು ಸ್ಯಾಂಟ್ನರ್​ 1 ವಿಕೆಟ್​ ಪಡೆದರು. (ಏಜೆನ್ಸೀಸ್​) ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts