

ಬೆಂಗಳೂರು: ಶ್ರೀಮಂತಿಕೆಯ ಭಾಗವಾಗಿರುವ ಚಿನ್ನದ ಖರೀದಿಯಿಂದ ಆರ್ಥಿಕವಾಗಿ ಸದೃಢರಾಗಬಹುದು. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುವುದಿಲ್ಲ. ಹೀಗಾಗಿ ಇಂದು ನಾವು ಆಭರಣ ಖರೀದಿಸಿದರೆ, ಮುಂದಿನ ದಿನಗಳಲ್ಲಿ ಉತ್ತಮ ಲಾಭ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.
ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್ ಅ.3ರಿಂದ ನ.16ರ ವರೆಗೆ ರಾಜ್ಯಾದ್ಯಂತ ಆಯೋಜಿಸಿರುವ 'ಗೋಲ್ಡ್ ಶಾಪಿಂಗ್ ಫೆಸ್ಟಿವಲ್'ಗೆ ಜಯನಗರದ ವಿನಾಯಕ ಸ್ವಾಮಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಸಂಪತ್ತು ಶೇಖರಣೆಗೆ ಚಿನ್ನ ಖರೀದಿ ಉತ್ತಮ ಆಯ್ಕೆ. ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಬಂಗಾರ ಜನರ ಜೀವನ ರಣೆ ಮಾಡಿದೆ. ರಾಜ್ಯಾದ್ಯಂತ ಇರುವ ವಿವಿಧ ಅಭರಣ ಮಳಿಗೆಯಲ್ಲಿ ಚಿನ್ನ ಖರೀದಿ ಮಾಡಿದರೆ ಕೂಪನ್ ನೀಡಲಾಗುತ್ತದೆ. ಬಳಿಕ ಲಕ್ಕಿ ಡ್ರಾ ನಲ್ಲಿ ವಿಜೇತ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ಕಾರು ಬಹಮಾನ ನೀಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಒಳಗೊಂಡಂತೆ 45 ದಿನಗಳ ಕಾಲ ಮೂರನೇ ಆವೃತ್ತಿಯ ಗೋಲ್ಡ್ ಶಾಪಿಂಗ್ ಫೆಸ್ಟಿವಲ್ ನಡೆಯಲಿದೆ ಎಂದರು.
ಫೆಸ್ಟಿವಲ್ ಭಾಗವಾಗಿ ನೋಂದಣಿ, ಕೂಪನ್ ನೀಡುವುದು ಮತ್ತು ಡ್ರಾ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಾರ್ಹತೆ ದೃಷ್ಟಿಯಿಂದ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆಯನ್ನು ಖಾತ್ರಿಪಡಿಸಲಾಗುತ್ತದೆ. 3.5 ಕೆ.ಜಿ ಚಿನ್ನ ಹಾಗೂ 100 ಕೆ.ಜಿ ಚಿನ್ನದ ಬಹುಮಾನ ಇರಲಿದೆ. ಬಹುಮಾನಗಳ ಮೌಲ್ಯ 3 ಕೋಟಿ ರೂ. ಹೊಂದಿದೆ. ಜತೆಗೆ ವಾರಾಂತ್ಯದ ಖರೀದಿಗೆ ಖಚಿತ ಬಹುಮಾನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಂಗಳೂರು ಗೋಲ್ಡ್ ಫೆಸ್ಟಿವಲ್ನ ಮೊದಲ ಎರಡು ಆವೃತ್ತಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕೊಡುಗೆಯನ್ನು ಈ ಬಾರಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಹೀಗಾಗಿ ಈ ಬಾರಿ ಹೆಚ್ಚಿನ ವಹಿವಾಟು ನಿರೀಸಲಾಗಿದೆ. ಮೂರನೇ ಆವೃತ್ತಿ ಹೆಚ್ಚಿನ ವೈಶಿಷ್ಟ$್ಯ ಮತ್ತು ಹಲಚು ಬಹುಮಾನಗಳನ್ನು ಹೊಂದಿದೆ. ಲಾಭಾಂಶದಲ್ಲಿ ಚಿನ್ನದ ಕುಶಲಕರ್ಮಿಗಳು ಮತ್ತು ಮಾರಾಟ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನ, ವ್ಯಾಪಾರ ಅಭಿವೃದ್ಧಿ ಚಟುವಟಿಕೆ ಬೆಂಬಲಿಸಲು ಬಳಸಲಾಗುತ್ತದೆ.
- ಸುರೇಶ್ ಕುಮಾರ್ ಗನ್ನಾ, ಅಧ್ಯಕ್ಷ, ಬೆಂಗಳೂರು ಗೋಲ್ಡ್ ಫೆಸ್ಟಿವಲ್