ಜವಳಿ ಕ್ರಾಂತಿಗೆ ‘ಬಾಣಕಾರ ಟೆಕ್ಸ್‌ಟೈಲ್ಸ್‌ನ ಗರಿ

banakar t
ಬನಹಟ್ಟಿಯ ‘ಬಾಣಕಾರ ಟೆಕ್ಸ್‌ಟೈಲ್ಸ್’ ಶುಭಾರಂಭೋತ್ಸವ ಬಳಿಕ ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಳಿಗೆಯಲ್ಲಿನ ಸೀರೆ ವೀಕ್ಷಿಸಿದರು. ಟೆಕ್ಸ್‌ಟೈಲ್ಸ್ ಮಾಲೀಕ ಮಲ್ಲಿಕಾರ್ಜುನ ಬಾಣಕಾರ ಇತರರಿದ್ದರು. ಆರ್‌ಬಿಕೆ 27-3ಎ: ಸಚಿವ ಸಚಿವ ಶಿವಾನಂದ ಪಾಟೀಲ ಅವರನ್ನು ಬಾಣಕಾರ ಪರಿವಾರದಿಂದ ಸ್ವಾಗತಿಸಲು ವಿವಿಧ ಸಂಸ್ಕೃತಿಗಳ ಮೂಲಕ ಮಲ್ಲಿಕಾರ್ಜುನ ಬಾಣಕಾರ, ಪಂಕಜ ಬಾಣಕಾರ ಸೇರಿ ಮತ್ತಿತರರು ಹಾಜರಿದ್ದು ಸ್ವಾಗತಿಸಿದರು.
Published on

ರಬಕವಿ/ಬನಹಟ್ಟಿ: ಅತ್ಯಂತ ಹಿಂದುಳಿದ ಪ್ರದೇಶಗಳಲ್ಲೂ ಮಹತ್ಸಾಧನೆ ಮಾಡಬಹುದೆಂದು ತೋರಿಸುವಲ್ಲಿ ‘ಬಾಣಕಾರ’ ಕುಟುಂಬ ಯಶಸ್ವಿಯಾಗಿ ಎಲ್ಲ ವರ್ಗಗಳ ಜನತೆಗೂ ಒಂದೇ ಸೂರಿನಲ್ಲಿ ಬಟ್ಟೆಗಳು ದೊರೆಯುವಂತೆ ‘ಬಾಣಕಾರ ಟೆಕ್ಸ್‌ಟೈಲ್ಸ್’ ಲೋಕಾರ್ಪಣೆ ಮಾಡಿದ್ದು ಹೆಮ್ಮೆಯ ವಿಷಯ ಎಂದು ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಬನಹಟ್ಟಿಯಲ್ಲಿ ಭಾನುವಾರ ‘ಬಾಣಕಾರ ಟೆಕ್ಸ್‌ಟೈಲ್ಸ್’ ಉದ್ಘಾಟಿಸಿ ಅವರು ಮಾತನಾಡಿ, ಜಿಲ್ಲೆಯಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ವಿಶೇಷತೆ ಹಾಗೂ ವಿನೂತನವಾಗಿ ಬಟ್ಟೆ ಮಳಿಗೆ ಆರಂಭಿಸಿದ್ದು, ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಬಟ್ಟೆಗಳನ್ನು ನೇರವಾಗಿ ಉತ್ಪಾದನಾ ಘಟಕಗಳಿಂದಲೇ ಖರೀದಿಸಿ ಯಾವುದೇ ಮಧ್ಯವರ್ತಿ ಸಹಾಯವಿಲ್ಲದೆ ಕಡಿಮೆ ಲಾಭದೊಂದಿಗೆ ಜನತೆಗೆ ವಿತರಿಸುವ ಗುರಿಯಾಗಿದೆ ಎಂದು ಟೆಕ್ಸ್‌ಟೈಲ್ಸ್ ಮಾಲೀಕ ಮಲ್ಲಿಕಾರ್ಜುನ ಬಾಣಕಾರ ತಿಳಿಸಿದರು.

ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ನಿರ್ದೇಶಕ ಹಾಗೂ ನಟ ವಿಕ್ರಂ ಸೂರಿ, ನಟಿ ಶಾಲಿನಿ ಗೌಡ, ನಾಗಪ್ಪ ಸನದಿ, ದೇವಲ ದೇಸಾಯಿ, ಶಂಕರ ಜುಂಜಪ್ಪನವರ, ಶ್ರೀಶೈಲ ದಭಾಡಿ, ಕಾಡು ಮಾಳಿ, ಜಿ.ಎಸ್. ಗೊಂಬಿ, ಸಿದ್ದು ಕೊಣ್ಣೂರ ಇತರರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net