ಬಲ್ಯಾಯ ಮಹಾಜನ ಸಂಘದ ಸಮುದಾಯ ಸಂಭ್ರಮ

mng-13feb-balyaya
Published on


ಮಂಗಳೂರು : ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘ ಜಪ್ಪಿನಮೊಗರು ಇದರ ವತಿಯಿಂದ ಬಲ್ಯಾಯ ಯುವವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ಸಮುದಾಯ ಸಂಭ್ರಮ ಕಾರ್ಯಕ್ರಮ ನಗರದ ಪುರಭವನದಲ್ಲಿ,ಜರುಗಿತು.
ಪರಂಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಂತಿ ವಿಶ್ವನಾಥ ಬಲ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ
ಉಮಾಲಕ್ಷ್ಮಿ ಕುಡುಪು ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ದಿವಾಕರ್ ಪಂಡಿತ್‌ಕೊಟ್ಟಾರ, ಸುಭಾಷ್ ಪಂಡಿತ್ ಜಪ್ಪಿನಮೊಗರು, ಜಯಲಕ್ಷ್ಮಿ ಕೆಂಬಾರ್, ಯುವವೇದಿಕೆಯ ಸಂಚಾಲಕ ಅರವಿಂದ ಪಂಡಿತ್ ಪೆರ್ಮಂಕಿ, ಮಹಿಳಾ ವೇದಿಕೆ ಸಂಚಾಲಕಿ ಮಮತಾ ಗಣೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಶ್ ಕುಮಾರ್ ಮಾರಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಮುದಾಯ ಭಾಂದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮನಪಾ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ವೀಣಾಮಂಗಳ, ಕೇರಳ ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ರಾಜೇಂದ್ರ ಕುಂಟಾರು, ಇಂಜಿನಿಯರ್ ಸತೀಶ್ ಶೆಟ್ಟಿ, ತುಳು ಚಿತ್ರನಟ
ವಿನೀತ್ ಕುಮಾರ್, ಹಸಿರು ದಳ ಮಂಗಳೂರು ಸಂಚಾಲಕ ನಾಗರಾಜ್ ಬಜಾಲ್, ಸಮಾಜ ಸೇವಕ ಸತೀಶ್ ಬಲ್ಯಾಯ ಸವಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದಯೋನ್ಮುಖ
ಪ್ರತಿಭೆಗಳಾದ ನಾಗರಾಜ್ ಪಂಡಿತ್ ಕಲ್ಲಡ್ಕ, ನವೀನ್ ಅಡ್ಕಾರ್, ಪ್ರಜ್ವಲ್ ಬಲ್ಯಾಯ ಕಪಿತಾನಿಯೊ, ಬಲ್ಯಾಯ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ ಪದ್ಮನಾಭ ಜೋಶಿ ಪೆರ್ಮಂಕಿ, ಪುರಂದರ್ ಬಲ್ಯಾಯ ಪುದು,ಬಾಲಕೃಷ್ಣ ಬಲ್ಯಾಯ ಕುಮ್ಡೇಲು, ಉದ್ಯಮಿ ಅಂಬಿಕಾ ರಮೇಶ್ ಪುತ್ತೂರು ಇವರುಗಳನ್ನು ಸನ್ಮಾನಿಸಲಾಯಿತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಅರುಣ್‌ಕುಮಾರ್ ಪಿ.ವಿ.ಪ್ರಸ್ತಾವನೆಗೈದರು. ರಂಜನ ಬಲ್ಯಾಯ ಕಲ್ಲಡ್ಕ ವಂದಿಸಿದರು, ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net