ಬಲ್ನಾಡು ಸಹಕಾರಿಗೆ ಕೀರ್ತನ್ ಶೆಟ್ಟಿ ಡಿ. ಸಿಇಒ

PTR_8 OCT_7
Published on

ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘದ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೀರ್ತನ್ ಶೆಟ್ಟಿ ಡಿ. ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.

ಸಂಘದ ಕಾರ್ಯನಿರ್ವಹಣಾಧಿಕಾರಿ ಶುಭ ಕೆ. ವಯೋ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಕೀರ್ತನ್ ಶೆಟ್ಟಿ ಮುಂಬಡ್ತಿ ಪಡೆದು ನೇಮಕಗೊಂಡು ಅಽಕಾರ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಉಪಸ್ಥಿತರಿದ್ದರು.

೨೦೧೪ರಲ್ಲಿ ಸಂಘಕ್ಕೆ ಗುಮಾಸ್ತರಾಗಿ ನೇಮಕಗೊಂಡಿದ್ದ ಕೀರ್ತನ್ ಶೆಟ್ಟಿ ೧೧ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಪಡೆದಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net