54ರ ಫಾಸ್ಟರ್ ಜತೆ ಏನಾಯ್ತು? ಅಜ್ಞಾತ ಸ್ಥಳದಿಂದಲೇ ವಿಡಿಯೋ ಕಳಿಸಿದ್ಳು 24ರ ಯುವತಿ

ballery girl missing case
Published on

ಬಳ್ಳಾರಿ: ಕಳೆದ ವಾರ ನಾಪತ್ತೆಯಾಗಿ ಕುಟುಂಬಸ್ಥರಲ್ಲಿ ಆತಂಕ ಸೃಷ್ಟಿಸಿದ್ದ 24 ವರ್ಷದ ಯುವತಿಯು 54 ವರ್ಷದ ವ್ಯಕ್ತಿ ಜತೆ ಮದುವೆಯಾಗಿದ್ದಾಳೆ! ಆಜ್ಞಾತ ಸ್ಥಳದಿಂದ ಸ್ವತಃ ಆಕೆಯೇ ವಿಡಿಯೋ ಸಂದೇಶದ ಮೂಲಕ ಈ ವಿಚಾರವನ್ನು ತಿಳಿಸಿದ್ದಾಳೆ.

ನಗರದ ಗುಗ್ಗರಹಟ್ಟಿ ಪ್ರದೇಶದ ಇಂಜಿನಿಯರಿಂಗ್ ಪದವೀಧರೆ ಶ್ವೇತಾ(24) ನಾಪತ್ತೆಯಾಗಿದ್ದಳು. ಇದಕ್ಕೂ ಮುನ್ನ ಯುವತಿಯ ಪಾಲಕರು ಡಿ.19ರಂದು ನಗರದ ಭತ್ರಿ ಪ್ರದೇಶದಲ್ಲಿರುವ ಲಿವಿಂಗ್ ವಾಟರ್ ಚರ್ಚ್ ಫಾಸ್ಟರ್ ರವಿಕುಮಾರ್ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ಕಿರುಕುಳ ಆರೋಪದ ದೂರು ದಾಖಲಿಸಿದ್ದರು. ಬಳಿಕ ಡಿ.20ರಂದು ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಇದೀಗ ಯುವತಿ ನಾಪತ್ತೆ ಪ್ರಕರಣ ಭಿನ್ನ ತಿರುವು ಪಡೆದಿದೆ.

'ನಾನು ನಾಪತ್ತೆ ಆಗಿಲ್ಲ ಹಾಗೂ ಅಪಹರಣಕ್ಕೂ ಒಳಗಾಗಿಲ್ಲ. ಸ್ವ ಇಚ್ಛೆಯಿಂದ ಊರು ತೊರೆದಿರುವೆ' ಎಂದು ಶ್ವೇತಾ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಕಳಿಸಿದ್ದಾಳೆ. ಇದನ್ನೂ ಓದಿರಿ ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

ಆ ವಿಡಿಯೋದಲ್ಲಿ ಏನಿದೆ?: 'ನಾನು ಚರ್ಚ್​ಗೆ ಹೋಗುತ್ತಿದ್ದೆ. ನಾನು ಚರ್ಚ್ ಹೋಗೊದು ನನ್ನ ತಂದೆ-ತಾಯಿಗೆ ಇಷ್ಟ ಇರಲಿಲ್ಲ. ಈ ವಿಚಾರವಾಗಿ ನಮ್ಮ ಮನೆಯಲ್ಲಿ ಗಲಾಟೆ ಆಗಿತ್ತು. ಚರ್ಚ್​ಗೆ ಬರದಂತೆ ತಡೆಯಬೇಕೆಂದು ಫಾಸ್ಟರ್ ಜತೆ ನನ್ನ ಪಾಲಕರು ಚರ್ಚಿಸಿದ್ದರು. ಆದರೂ, ನಾನು ಚರ್ಚ್​ಗೆ ಹೋಗುವುದನ್ನು ಬಿಡಲಿಲ್ಲ. ನನ್ನನ್ನು ಮದುವೆಯಾಗುವಂತೆ ಫಾಸ್ಟರ್ ಬಳಿ ಕೇಳಿಕೊಂಡಿದ್ದರೂ ಅವರು ನಿರಾಕರಿಸಿದ್ದರು. ನನ್ನ ಬಲವಂತದ ಮೇರೆಗೆ ಫಾಸ್ಟರ್ ನನ್ನೊಂದಿಗೆ ಅಜ್ಞಾತ ಸ್ಥಳಕ್ಕೆ ಬಂದಿದ್ದಾರೆ. ನಾನು ಚರ್ಚ್​ನಲ್ಲಿ ಅವರ ಜತೆ ಮದುವೆಯಾಗಿದ್ದೇನೆ' ಎಂದು ಯುವತಿ ಹೇಳಿಕೊಂಡಿದ್ದಾಳೆ.

ವಯಸ್ಸಿನಲ್ಲಿ ತನಗಿಂತ 30 ವರ್ಷ ದೊಡ್ಡವನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಯುವತಿ, 'ನನ್ನ ಮತ್ತು ನನ್ನ ಗಂಡನಿಗೆ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ' ಎಂದು ಕೋರಿದ್ದಾಳೆ.

ಫಾಸ್ಟರ್​ ಜತೆ ಮಗಳು ಮದುವೆ ಆಗಿರುವ ವಿಚಾರ ಕೇಳಿದ ಪಾಲಕರು ಆಘಾತಗೊಂಡಿದ್ದಾರೆ. ಪವಿತ್ರ ಸ್ಥಾನದಲ್ಲಿರುವ ಫಾಸ್ಟರ್ ಸಣ್ಣ ಹುಡುಗಿಯರ ತಲೆಕೆಡಿಸಿ ಮೋಸ ಮಾಡುತ್ತಿದ್ದಾರೆ ಎಂದು ಯುವತಿಯ ಪಾಲಕರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net