ಬಳ್ಕೂರು ಯಕ್ಷ ಕುಸುಮ ಪುರಸ್ಕಾರ

mng-12mar-jalavali
Published on

ಮಂಗಳೂರು ; ಯಕ್ಷರಂಗವು ಬದುಕಿಗೆ ಅಭಿಮಾನಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ . ಪ್ರತಿಯೊಬ್ಬ ಕಲಾವಿದರು ಕೂಡ ಹಿರಿಯವರು ಹಾಕಿಕೊಟ್ಟ ಯಕ್ಷ ಪರಂಪರೆಯನ್ನು ಮುಂದುವರಿಸುವ ಮೂಲಕ ತನ್ನತನವನ್ನು ಕಾಯ್ದುಕೊಳ್ಳಬೇಕು
ಎಂದು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಹೇಳಿದರು.
ಅವರು ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಮತ್ತು ರಂಗಸ್ಥಳ ಮಂಗಳೂರು ಆಶ್ರಯದಲ್ಲಿ ನಗರದ ಕುದ್ರೋಳಿ
ಭಗವತೀ ದೇವಸ್ಥಾನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಬಳ್ಕೂರು ಯಕ್ಷ ಕುಸುಮ ಪುರಸ್ಕಾರ ಸ್ವೀಕರಿಸಿ
ಮಾತನಾಡಿದರು.
ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್‌ನ ಕರುಣಾಕರ ಬಳ್ಕೂರು ಅಭಿನಂದನಾ ಭಾಷಣ ಮಾಡಿದರು. ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್, ರಂಗಸ್ಥಳ ಸಂಸ್ಥೆಯ ಸಿಎ ಎಸ್.ಎಲ್.ನಾಯಕ್ , ದಿನೇಶ್ ಪೈ, ಪುಟ್ಟಣ್ಣ ಕುಲಾಲ್‌ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ದಿನಕರ .ಎಸ್.ಬಳ್ಕೂರು, ಕೃಷ್ಣರಾಜ ಬಳ್ಕೂರು, ನಾಗೇಶ್. ಎಸ್. ಬಳ್ಕೂರು,
ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಕುಮಾರ್ ವಕ್ವಾಡಿ, ಶ್ರೀಪತಿ ಆಚಾರ್ಯ ಉಪಸ್ಥಿತರಿದ್ಧರು.
ಬಳಿಕ ಬಡಗು ತಿಟ್ಟಿನ ಹಟ್ಟಿಯಂಗಡಿ ಮೇಳದಿಂದ ಗದಾಯುದ್ಧ ಮತ್ತು ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net