ಸುಳ್ಯ:ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಬಲೀಂದ್ರ ಅಲಂಕಾರ ಸ್ಪರ್ಧೆ ನಡೆಯಲಿದ್ದು ಸಮಾಜ ಬಾಂಧವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸುಳ್ಯ ತಾಲೂಕು ಗೌಡ ಮಹಿಳಾ ಘಟಕ ಅಧ್ಯಕ್ಷೆ ವಿನುತಾ ಪಾತಿಕಲ್ಲು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೌಡ ಮಹಿಳಾ ಘಟಕ ಸುಳ್ಯ ತಾಲೂಕು ಗೌಡ ಸಮಾಜದ ಆಚಾರ ವಿಚಾರ, ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಲೀಂದ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕು ಸಹಿತ, ಸುಬ್ರಹ್ಮಣ್ಯ, ಬಳ್ಪ, ಯೇನೆಕಲ್ಲು, ಪೆರಾಜೆ, ಕೊಡಗು ಸಂಪಾಜೆ, ಚೆಂಬು, ಬಂದ್ಯಡ್ಕ, ಕಲ್ಲಪಳ್ಳಿ, ಬೆಳ್ಳಿಪ್ಪಾಡಿ ಹೀಗೆ ಗೌಡ ಸಮಾಜ ವ್ಯಾಪ್ತಿಯವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಮೂಲ ಸಂಪ್ರದಾಯಗಳನ್ನು ಉಳಿಸಿಕೊಂಡು ನೈಸರ್ಗಿಕ ಅಲಂಕಾರಗಳಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಅ.22ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬಹುದು. ವಿಜೇತರಿಗೆ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ.ಹಾಗೂ ತೃತೀಯ 2 ಸಾವಿರ ರೂ. ಹಾಗೂ ಶಾಶ್ವತ ಫಲಕ ಹಾಗೂ 5 ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಸವಿತಾ ಸಂದೇಶ್, ಜಯಶ್ರೀ, ಪುಷ್ಪಾ ರಾಧಾಕೃಷ್ಣ, ಮೀನಾಕ್ಷಿ ಸುಂದರ ರಾಮಕಜೆ, ತಾರಾ ಮಾಧವ ಗೌಡ ಬೆಳ್ಳಾರೆ, ಪ್ರೀತಮ್, ಹೇಮಾ ದೇಂಗೋಡಿ ಇದ್ದರು.