ಸಂತ್ರಸ್ತೆ ಯಾರೆಂದು ಗೊತ್ತಾಗಬೇಕು: ಎಚ್​.ವೈ. ಮೇಟಿ ಪ್ರಕರಣ ಎಳೆದುತಂದ ಬಾಲಚಂದ್ರ ಜಾರಕಿಹೊಳಿ!

Balachandra
Published on

ಬೆಂಗಳೂರು: ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ನಕಲಿ ಎಂದು ಸಹೋದರ ಹಾಗೂ ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿ, ರಮೇಶ್ ಜಾರಕಿಹೊಳಿ ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗುತ್ತಾರೆ. ಸಿಡಿ ವಿಚಾರ ತನಿಖೆಯಾಗಲೇಬೇಕು. ಯೂಟ್ಯೂಬ್​ನಲ್ಲಿ ದುಬೈನಲ್ಲಿ ಅಪ್​ಲೋಡ್ ಆಗಿದೆ ಎಂದು ಹೇಳುತ್ತಾರೆ. ಇದು ಸಿಐಡಿ, ಸಿಒಡಿ ತನಿಖೆಗೆ ಕೊಡಬೇಕೆಂದು ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.

ಸಂತ್ರಸ್ತೆ ಯಾರು ಎನ್ನುವುದು ಗೊತ್ತಾಗಬೇಕು. ಹಾದಿ ಬೀದಿಯಲ್ಲಿ ಇದ್ದವರು ಬಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋ ಫೇಕ್ ಆಗಿದೆ. ಒಂದು ವೇಳೆ ತನಿಖೆಯಲ್ಲಿ ರಮೇಶ್ ಅನ್ನೋದು ಗೊತ್ತಾದ್ರೆ, ಅವರನ್ನೇ ನಿವೃತ್ತಿ‌ ನೀಡಲು ತಿಳಿಸುತ್ತೇನೆಂದು ಹೇಳಿದರು.

ವಿಡಿಯೋವನ್ನು ಬಿಜೆಪಿಯವರು ಬಿಡುಗಡೆ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ಬಿಡುಗಡೆ ಮಾಡಿದವರ ವಿರುದ್ಧ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸುತ್ತೇವೆ. ತನಿಖೆ ಆಗಲೇಬೇಕು. ಯಾವುದೇ ಕಾರಣಕ್ಕೂ ರಮೇಶ್ ರಾಜೀನಾಮೆ ಕೊಡಬಾರದು ಎಂದರು.

ತನಿಖೆಯಾದ ನಂತರ ರಾಜೀನಾಮೆ ಕೊಟ್ಟು ಹೊರ ಹೋಗಲಿ. ಮೇಟಿಯ ವಿಚಾರದಲ್ಲಿ ಅನ್ಯಾಯವಾದವರು ನೇರವಾಗಿ ಬಂದು ಮಾತನಾಡಿದ್ರು. ಯುವತಿಯ ಹೆಸರು? ಯಾರು? ಏನು? ಎಂದು ಗೊತ್ತಾಗಬೇಕು. ರಮೇಶ್ ದೆಹಲಿಗೆ ಹೋಗಲ್ಲ. ಬೆಂಗಳೂರಿನಲ್ಲೇ ಇರುತ್ತಾರೆ. ನಮ್ಮ ಮನೆಯ ಮರ್ಯಾದೆಯನ್ನು ಹಾಳು ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net