ಕಡಬ: ರಾಮಕುಂಜ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಇತ್ತೀಚೆಗೆ ನಡೆಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರೇಮಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಕೆ.ಚಂದ್ರಶೇಖರ ಮಾಹಿತಿ ನೀಡಿದರು. ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ್ ಗಾಂಧಿಪೇಟೆ, ರಾಮಕುಂಜ ಶಾಲಾ ಮುಖ್ಯಶಿಕ್ಷಕ ಮಹೇಶ್ ಮಾತನಾಡಿದರು.
ಅಂಗನವಾಡಿ ಆರೋಗ್ಯ ಸಹಾಯಕಿ ಜಲಜಾ, ಆಶಾ ಕಾರ್ಯಕರ್ತೆಯರಾದ ಪ್ರಮೀಳಾ, ಪ್ರೇಮಾ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಉಮಾವತಿ ಪ್ರಸ್ತಾವಿಸಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ ಸ್ವಾಗತಿಸಿ, ವಂದಿಸಿದರು. ಸಹಾಯಕಿ ಪ್ರವೀಣ ಸಹಕರಿಸಿದರು.