

ವಿಜಯವಾಣಿ ಸುದ್ದಿಜಾಲ ಉಡುಪಿ
ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಾಕಾರವಾಗಿದೆ. ಇಂದಿನ ಮಕ್ಕಳು ಮೊಬೈಲ್ನಲ್ಲಿ ಮುಳುಗುವ ಬದಲು ಸೃಜನಶೀಲರಾಗಬೇಕಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಇಂತಹ ಉಪಯುಕ್ತ ಚಟುವಟಿಕೆ ಇಂದಿನ ಪ್ರಮುಖ ಅವಶ್ಯಕತೆಯಾಗಿದೆ ಎಂದು ಆರ್ಟಿಸ್ಟ್ ಫೋರಂನ ಅಧ್ಯಕ್ಷ, ಖ್ಯಾತ ಚಿತ್ರಕಲಾವಿದ ರಮೇಶ ರಾವ್ ಅನಿಸಿಕೆ ವ್ಯಕ್ತಪಡಿಸಿದರು.
ಶಿಬಿರದ ಸಂಯೋಜಕ ಡಾ. ಜನಾರ್ದನ ರಾವ್ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಅಕ್ಷತಾ ವಿಶು ರಾವ್ ಸನ್ಮಾನಪತ್ರ ವಾಚಿಸಿದರು. ವಿಶು ರಾವ್ ಹಾವಂಜೆ ವಂದಿಸಿದರು.
ಭಾವನಾ ಫೌಂಡೇಷನ್ ಸಂಘಟಿಸಿದ ಈ ಬೇಸಿಗೆ ಶಿಬಿರದಿಂದ ಭಾರತೀಯ ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಹಾಗೂ ನಮ್ಮ ಕಲೆ-ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯವಾಗಿದೆ. ರಜಾ ದಿನಗಳಲ್ಲಿ ಮಕ್ಕಳ ಬದುಕು ಹಸನಾಗುವಲ್ಲಿ, ಆತ್ಮಸ್ಥೈರ್ಯ ಹೆಚ್ಚುವಲ್ಲಿ ಬಾಲ ಲೀಲಾ ಶಿಬಿರ ಸಹಕಾರಿಯಾಗಿದೆ. | ಸಂಪತ್ ಶೆಟ್ಟಿ. ಉದ್ಯಮಿ ಅಭಿವೃದ್ಧಿ ಹೊಂದಿದ ನಗರಗಳಲ್ಲಿರುವ ಮಕ್ಕಳಿಗೆ ಎಲ್ಲ ಸೌಲಭ್ಯ ಸುಲಭವಾಗಿ ಸಿಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಚಿಣ್ಣರಿಗೆ ಸುಲಭವಾಗಿ ಲಭಿಸುವುದಿಲ್ಲ. ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲವೂ ಕೈ ಬೆರಳಲ್ಲಿ ಲಭಿಸುವಾಗ ಇಂತಹ ಶಿಬಿರದ ಅಗತ್ಯತೆ ಇತ್ತೇ ಎಂಬ ಪ್ರಶ್ನೆ ಮೂಡಬಹುದು. ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿತಾಗ ಹೆಚ್ಚಿನ ಅನುಭವ ಲಭಿಸುತ್ತದೆ. ನಮ್ಮ ಮೌಲ್ಯ, ದೇಸೀಯ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಾಲ ಲೀಲಾ ಶಿಬಿರ ತಿಳಿಸಿಕೊಡುವ ಪ್ರಯತ್ನ ಮಾಡಿದೆ. ಮಕ್ಕಳೆಲ್ಲರೂ ಲವಲವಿಕೆಯಿಂದ ಅನೇಕ ವಿಚಾರ ಅರಿತುಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ. | ಡಾ. ಜನಾರ್ದನ ರಾವ್ ಹಾವಂಜೆ. ಕಾವಿ ಕಲಾವಿದ, ಶಿಬಿರ ಆಯೋಜಕ