ಟೋಕಿಯೊ ಒಲಿಂಪಿಕ್ಸ್​ ಪದಕ ವಿಜೇತ ಪೈಲ್ವಾನರಿಗೆ ತಪ್ಪಿತು ಪ್ಯಾರಿಸ್​ ಒಲಿಂಪಿಕ್ಸ್ ಅರ್ಹತೆ ಅವಕಾಶ!​

oly wresling web
Published on

ಸೋನೆಪತ್​ (ಹರಿಯಾಣ): ಕಳೆದ ಟೋಕಿಯೊ ಒಲಿಂಪಿಕ್ಸ್​ ಪದಕ ವಿಜೇತ ಕುಸ್ತಿಪಟುಗಳಾದ ಭಜರಂಗ್​ ಪೂನಿಯಾ ಮತ್ತು ರವಿಕುಮಾರ್​ ದಹಿಯಾ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

ಏಷ್ಯನ್​ ಒಲಿಂಪಿಕ್ಸ್​ ಅರ್ಹತಾ ಮತ್ತು ವಿಶ್ವ ಒಲಿಂಪಿಕ್ಸ್​ ಅರ್ಹತಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕುಸ್ತಿಪಟುಗಳ ಆಯ್ಕೆಗಾಗಿ ನಡೆದ ಟ್ರಯಲ್ಸ್​ನಲ್ಲಿ ಭಜರಂಗ್​ ಮತ್ತು ರವಿ ಸೋಲು ಕಾಣುವುದರೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಅವಕಾಶ ತಪ್ಪಿಸಿಕೊಂಡಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್​ಭೂಷಣ್​ ಸಿಂಗ್​ ವಿರುದ್ಧ ಹೋರಾಟ ಮಾಡುವ ಮೂಲಕ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ಭಜರಂಗ್​ ಭಾನುವಾರ ನಡೆದ 65 ಕೆಜಿ ವಿಭಾಗದ ಆಯ್ಕೆ ಟ್ರಯಲ್ಸ್​ನ ಸೆಮಿಫೈನಲ್​ನಲ್ಲಿ ರೋಹಿತ್​ ಕುಮಾರ್​ ಎದುರು 1-9ರಿಂದ ಸೋತರು. ಪುರುಷರ 57 ಕೆಜಿ ವಿಭಾಗದ ಆಯ್ಕೆ ಟ್ರಯಲ್ಸ್​ನಲ್ಲಿ ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತ ರವಿಕುಮಾರ್​ ಮೊದಲ ಪಂದ್ಯದಲ್ಲೇ ಅಮನ್​ ಸೆಹ್ರಾವತ್​ ವಿರುದ್ಧ 13-14ರಿಂದ ಸೋತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net