ಸ್ನೇಹಿತನ ಬರ್ತಡೇ ಆಚರಣೆ ಬೆನ್ನಲ್ಲೇ ಬರ್ಬರವಾಗಿ ಕೊಲೆಯಾದ ಯುವಕ

Youth Murder
Published on

ಬಾಗಲಕೋಟೆ: ಟಂಟಂ ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ತಲೆ, ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ನೀರಲಕೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ರಂಗಪ್ಪ ಚಂದ್ರಶೇಖರ ದಳವಾಯಿ(22) ಕೊಲೆಯಾದ ಟಂಟಂ ಚಾಲಕ. ಮೊನ್ನೆ (ಗುರುವಾರ) ರಾತ್ರಿ ಕೊಲೆ ನಡೆದಿದ್ದು, ಸದ್ಯ ಗ್ರಾಮದ ಹೊರವಲಯದ ಮೃತದೇಹ ‌ಕಂಡುಬಂದಿದೆ.

ಮೊನ್ನೆ ರಾತ್ರಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ನೇಹಿತ ಕೃಷ್ಣ ಗೌಡರರ್​ ಎಂಬಾತನ ಹುಟ್ಟುಹಬ್ಬ ಆಚರಿಸಿದ್ದರು. ಬಳಿಕ ಮನೆಗೆ ಹೋಗೋದಾಗಿ ಸ್ನೇಹಿತರ ಬಳಿ ಹೇಳಿದ್ದ. ಆದರೆ, ಕೆಲವೇ ಕ್ಷಣಗಳಲ್ಲಿ ಚಾಲಕನ ಕೊಲೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕೊಲೆ ಮಾಡಿದವರು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಸ್ನೇಹಿತರು ಹಾಗೂ ಕುಟುಂಬಸ್ಥರ ವಿಚಾರಣೆ ನಡೆದಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net