

ಮಂಗಳೂರು: ಮೂಡುಶೆಡ್ಡೆ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದರಸದ ವಾರ್ಷಿಕ ಮಹಾಸಭೆ ಭಾನುವಾರ ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದರಸ ಸಭಾಂಗಣದಲ್ಲಿ ನಡೆಯಿತು.
ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆ ಮೂಲಕ ಉದ್ಘಾಟಿಸಿದರು. ಮಾಜಿ ಅಧ್ಯಕ್ಷ ಮಹಮ್ಮದ್ ಮೂಸ ಅಧ್ಯಕ್ಷತೆ ವಹಿಸಿದ್ದರು. ಮೈಯ್ಯದ್ದಿ ಉಪಸ್ಥಿತರಿದ್ದರು. 2025-26ನೇ ಸಾಲಿಗೆ ನೂತನ ಆಡಳಿತ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಎ.ಪಿ.ಇಕ್ಬಾಲ್, ಉಪಾಧ್ಯಕ್ಷರಾಗಿ ರಝಾಕ್ ಎಂ.ಆರ್, ಪ್ರಧಾನ ಕಾರ್ಯದರ್ಶಿಯಾಗಿ ಸಾಜುದ್ದೀನ್, ಜತೆ ಕಾರ್ಯದರ್ಶಿಯಾಗಿ ಮಹಮ್ಮದ್ ಆರಿಫ್, ಕೋಶಾಧಿಕಾರಿಯಾಗಿ ಇಮ್ರಾನ್ ಅಲಿ, ಸದಸ್ಯರಾಗಿ ಅಬ್ದುಲ್ ರಝಾಕ್, ಅಕ್ಬರ್, ಮನ್ಸೂರ್, ಮಹಮ್ಮದ್ ಮುಸ್ತಾಕ್, ಅಥಾವುಲ್ಲ, ಇಕ್ಬಾಲ್, ಮಹಮ್ಮದ್ ಅನೀಶ್, ಹನೀಫ್ ಕಲಾಯಿ, ಅಹಮ್ಮದ್ ಬಾವ ಆಯ್ಕೆಯಾದರು. ಕಾರ್ಯದರ್ಶಿ ಜಮಾಲುದ್ದೀನ್ ಮತ್ತು ಜತೆ ಕಾರ್ಯದರ್ಶಿ ಆರಿಫ್ ಲೆಕ್ಕಪತ್ರ ಮಂಡಿಸಿದರು.